24.6 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಅಂತರ್ ಜಿಲ್ಲಾ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಎಸ್.ಡಿ.ಎಂ ಕಾಲೇಜಿಗೆ ಪ್ರಶಸ್ತಿ

ಉಜಿರೆ : ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ಪವರ್ ಫ್ರೆಂಡ್ಸ್ ಪೆರಂಪಳ್ಳಿ ಸಂಯುಕ್ತ ಆಶ್ರಯ ಹಾಗೂ ಅನಿಲ್ ಗೋನ್ಸಾಲ್ವಿಸ್ ನೇತೃತ್ವದಲ್ಲಿ ನಡೆದಂತಹ ‘ಪವರ್ ಟ್ರೋಫಿ – 2026 ಅಂತರ್ ಜಿಲ್ಲಾ’ ಬಾಲಕಿಯರ ಮುಕ್ತ ವಿಭಾಗದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಭಾಗವಹಿಸಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಪಂದ್ಯಾಟದ ಚಾಂಪಿಯನ್ ಗಳಾಗಿದ್ದಾರೆ.

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿನಿ ಶ್ರೀಯಾ ಉತ್ತಮ ಅಟ್ಯಾಕರ್ , ವಿದ್ಯಾರ್ಥಿನಿ ಪ್ರಿಯಾಂಕ ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ತಂಡದಲ್ಲಿ ವಿದ್ಯಾರ್ಥಿಗಳಾದ ಹರಿಣಿ, ಐಶ್ವರ್ಯ, ಅಂಜಲಿ, ಇಂಚರ, ಸಾಕ್ಷಿ, ಸ್ಮಿತಾ, ಲಾಸ್ಯ, ಅಪೂರ್ವ, ಸ್ಮಿತೂಜ್ ಮತ್ತು ಶಗುಣ್ ಪಾಲ್ಗೊಂಡಿದ್ದರು.
ತಂಡಕ್ಕೆ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್ ತರಬೇತಿಯನ್ನು ನೀಡಿದ್ದಾರೆ.

Related posts

ಶಾಲಿನಿ ಸೇವಾ ಪ್ರತಿಷ್ಠಾನ ವತಿಯಿಂದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆ

Suddi Udaya

ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

Suddi Udaya

ಉಜಿರೆ ಎಸ್.ಡಿ.ಎಮ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು: ಬಿಎನ್‌ವೈಎಸ್ ವಿದ್ಯಾರ್ಥಿಗಳ ಮತ್ತು ಪಿಜಿ ವಿದ್ಯಾರ್ಥಿಗಳ ಶಿಷ್ಯೋಪನಯನ

Suddi Udaya

ಕುಂಟಿನಿಯ ಕಾಂಗ್ರೆಸ್ ಬೂತ್ ಸಮಿತಿಯ ಮನವಿಗೆ ಸ್ಪಂದನೆ: ಹಳೆಪೇಟೆಯಿಂದ ಕುತ್ರೋಟ್ಟು ರಸ್ತೆ ದುರಸ್ತಿ ಆರಂಭ

Suddi Udaya

ಉಜಿರೆ: ಶ್ರೀ ಶಾರದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕನ್ಯಾಡಿ ಸ್ವಾಮೀಜಿ ಚಾತುರ್ಮಾಸ್ಯ: ಜು.3ರಿಂದ ಆ.31ರವರೆಗೆ ಎಂಟು ಭಾನುವಾರ ಹೊರತುಪಡಿಸಿ ಇತರ ದಿನಗಳಲ್ಲಿ ಮೌನ ಚಾತುರ್ಮಾಸ್ಯ

Suddi Udaya
error: Content is protected !!