25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೂಲ ಕೋಟೆ ತರವಾಡು ವತಿಯಿಂದ ಡಾ. ರವೀಶ್ ಪಡುಮಲೆಗೆ ಸನ್ಮಾನ

ಬೆಳ್ತಂಗಡಿ: ತುಳುನಾಡಿನ ಪ್ರಸಿದ್ಧ ದೈವ ನರ್ತಕ ಹಾಗೂ ಧರ್ಮಸ್ಥಳ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ರವೀಶ್ ಪಡುಮಲೆ ಅವರಿಗೆ ಮೂಲ ಕೋಟೆ ತರವಾಡಿನ ಕುಟುಂಬಸ್ಥರು ಗೌರವ ಸನ್ಮಾನ ನೆರವೇರಿಸಿದರು.

ಇತ್ತೀಚೆಗೆ ನಡೆದ ಕೋಟೆ ತರವಾಡಿನ ಧರ್ಮ ನೇಮೋತ್ಸವದಲ್ಲಿ ಡಾ. ರವೀಶ್ ಪಡುಮಲೆ ಅವರು ದೈವ ನರ್ತನ ಮಾಡಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕುಟುಂಬದವರು ಬಂಗಾರದ ಉಂಗುರ ತೊಡಿಸುವ ಮೂಲಕ ಗೌರವಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೋಟೆ ಗಣೇಶ್ ರೈ ನಾಡಜೆ, ಜಯರಾಮ ರೈ ಮೂಡಂಬೈಲು, ಬಾಲಕೃಷ್ಣ ರೈ ಸುಬ್ರಹ್ಮಣ್ಯ, ನಾರಾಯಣ ರೈ ಮೂಡಂಬೈಲ್, ಪುಷ್ಪರಾಜ್ ಶೆಟ್ಟಿ ಕೋಟೆ, ಸುಬ್ಬಯ್ಯ ರೈ ಕಡಾರ್, ರಮೇಶ್ ರೈ ನೆಟ್ಟಣಿಗೆ, ಲೋಹಿತ್ ಶೆಟ್ಟಿ ಡೆಪ್ಪಾಜೆ, ಪ್ರದೀಪ್ ರೈ ಕಡಬ, ಪ್ರಮೋದ್ ರೈ ಕಡಬ, ಸುಕೇಶ್ ರೈ ಮೊಡಪ್ಪಾಡಿ ಹಾಗೂ ಕೋಟೆ ಬಾರಿಕೆ ಮೂಲಕೋಟೆ ತರವಾಡು ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಉಜಿರೆ: ಡಾ. ಬಿ. ಯಶೋವರ್ಮರ ಜನ್ಮದಿನ ಸ್ಮರಣಾರ್ಥ ವಿಚಾರಸಂಕಿರಣ

Suddi Udaya

ಕಲ್ಮoಜ: ಬೆಳಿಯಪ್ಪ ಗೌಡ ಬದಿಮೆಟ್ಟು ನಿಧನ

Suddi Udaya

ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ

Suddi Udaya

ಉರುವಾಲು ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

Suddi Udaya

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್‌‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿದ ವಕ್ಫ್ ಮಂಡಳಿ: ಸರಕಾರದಿಂದ ಆಡಳಿತಾಧಿಕಾರಿ ನೇಮಕ

Suddi Udaya

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯೂಟ್ಯೂಬರ್‌ಗಳ ಆರೋಗ್ಯ ವಿಚಾರಿಸಿದ ಬೆಳ್ತಂಗಡಿ ಡಿ.ಎಸ್.ಎಸ್(ಅಂಬೇಡ್ಕರ್‌ವಾದ) ನಿಯೋಗ

Suddi Udaya
error: Content is protected !!