September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ವತಿಯಿಂದ ಕೋರೆಗಾಂವ್ ವಿಜಯೋತ್ಸವ

ಬೆಳ್ತಂಗಡಿ : ಭೀಮಾ ಕೋರೆಗಾಂವ್ ಯುದ್ಧವು ಶತ ಶತಮಾನಗಳ ಅಮಾನವೀಯ , ಜೀವವಿರೋಧಿ ಅಸ್ಪೃಶ್ಯತೆ ಅಪಮಾನಗಳ ವಿರುದ್ಧ ಶೋಷಿತರು ಸ್ವಾಭಿಮಾನಕ್ಕಾಗಿ ನಡೆದ ಆಕ್ರೋಶದ ಕದನವಾಗಿದೆ ಕೋರೆಗಾಂವ್ ಯುದ್ಧ ವಿಜಯೋತ್ಸವವು ಶೋಷಿತ ಸಮುದಾಯಗಳ ಹೋರಾಟಗಳಿಗೆ ಸ್ಫೂರ್ತಿಯಾಗಬೇಕು ಎಂದು ಬೆಳ್ತಂಗಡಿಯ ನ್ಯಾಯವಾದಿ ಸೇವಿಯರ್ ಪಾಲೇಲಿ ಹೇಳಿದರು.

ಅವರು ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜ. 4ರಂದು ಆಯೋಜಿಸಲಾದ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋರೆಗಾಂವ್ ಕದನ‌ ಇತಿಹಾಸ ಮತ್ತು ವಿಜಯೋತ್ಸವದ ಅರಿವಿನಿಂದ ಜಾಗೃತರಾಗಿ ಶೋಷಿತರು ಶಿಕ್ಷಣಕ್ಕೆ ಒತ್ತು ಕೊಡಬೇಕು‌ ಎಂದು ಹೇಳಿದರು.


ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷೆ ಆಶಾ ಸಂತೋಷ್ ವಿಚಾರ ಮಂಡನೆ ಮಾಡುತ್ತಾ ಶತ ಶತಮಾನಗಳಿಂದ ಅಸ್ಪೃಶ್ಯತೆಯ ಅವಮಾನಗಳಿಂದ ನೊಂದು ಬೆಂದ ಪರಿಣಾಮ ಶಿಕ್ಷಣ ಮತ್ತು ಸಮಾನತೆಯಿಂದ ವಂಚಿತರಾಗಿದ್ದ ದಲಿತ ಶೋಷಿತ ಸಮುದಾಯಗಳಿಗೆ ಭೀಮಾಕೋರೆಗಾಂವ್ ಯುದ್ಧ ವಿಜಯೋತ್ಸವದ ಬಳಿಕ
ಶಿಕ್ಷಣದ ಅವಕಾಶ ದೊರೆಯಿತು ಎಂದರು.


ಬುದ್ಧ ಬಸವ ಅಂಬೇಡ್ಕ‌ರ್ ವಚನ ಟ್ರಸ್ಟ್ ಇದರ ಅಧ್ಯಕ್ಷ ಚೆನ್ನಕೇಶವ ಅಧ್ಯಕ್ಷತೆ ವಹಿಸಿ ಮಾತನಾಡಿ ಟ್ರಸ್ಟ್ ಆಶಯವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಮಾನ ಮನಸ್ಕರ ಸಂಘಟನೆ ಗೌರವಾಧ್ಯಕ್ಷ ರಾಜಾ ಚೆಂಡ್ತಿಮಾರ್, ಕ.ದ.ಸಂ.ಸ. (ಅಂಬೇಡ್ಕರ್ ವಾದ) , ಜಿ.ಸಂ. ಸಂಚಾಲಕ ವೆಂಕಣ್ಣ ಕೊಯ್ಯೂರು, ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಠಾನ ಸಮಿತಿ ಸದಸ್ಯ ಕೆ.ನೇಮಿರಾಜ್ ಕಿಲ್ಲೂರು, ಬಹುಜನ ಚಳುವಳಿ ಮುಖಂಡ ಸಂಜೀವ ಆರ್. , ಜಿ.ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ಕ.ದ.ಸಂ.ಸ. (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್., ಪತ್ರಕರ್ತ ಅಚುಶ್ರೀ ಬಾಂಗೇರು,
ಕೋರೆಗಾಂವ್ ವಿಜಯೋತ್ಸವದ ಚಾರಿತ್ರಿಕ ಮಹತ್ವವನ್ನು ತಿಳಿಸಿದರು.

ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ, ಸಂಘಟನೆಯ ಮಹಿಳಾ ಕಾರ್ಯಕರ್ತೆ ಯಮುನಾ ಲಾಯಿಲ, ತಾಲೂಕು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ
ಉಪಸ್ಥಿತರಿದ್ದರು.

ಕು.ಸುಶ್ಮಿತಾ ನಾರಾವಿ ಸ್ವಾಗತಿಸಿ ‘ಸಂವಿಧಾನ ಪೀಠಿಕೆ’ ವಾಚಿಸಿದರು. ಪ್ರಶಾಂತ್ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

ಹಿರಿಯರಾದ ಯಮುನಾ ನಾರಾವಿ, ಸವಿತಾ ಸುಲ್ಕೇರಿ, ಪಿ.ಕೆ.ಚೀಂಕ್ರ ಕೊಕ್ಕಡ, ಸಂತೋಷ್ ಮೂಡಿಗೆರೆ, ಸುಂದರ ನಾಲ್ಕೂರು, ಶೀನ ಪಿಲ್ಯ, ನಾಗರಾಜ್ ಎಸ್. ಲಾಯಿಲಾ, ಸಂಜೀವ ನೀರಾಡಿ ಹಾಗೂ ಚರಣ್ ಕುಕ್ಕೇಡಿ, ಕೆ.ಸಿ. ರಮೇಶ್, ಪ್ರವೀಣ್ ಕೊಕ್ಕಡ, ಹೊನ್ನಪ್ಪ ಕೊಕ್ಕಡ, ಗಿರೀಶ್ ಪಣಕಜೆ, ಶೇಖರ ಮಾಲಾಡಿ ಮತ್ತಿತರರು ಉಪಸ್ಥಿತರಿದ್ದರು.

Related posts

ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿಯಿಂದ ಮೆಸ್ಕಾಂ ಅಧ್ಯಕ್ಷ ಕೆ‌.ಹರೀಶ್ ಕುಮಾರ್ ಭೇಟಿ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು-ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಮಚ್ಚಿನ : ಶ್ರೀ ಕ್ಷೇ. ಧ.ಗ್ರಾ, ಯೋಜನೆಯಿಂದ ಆರ್ಥಿಕ ಸಹಾಯಧನ ಹಸ್ತಾಂತರ

Suddi Udaya

ಆ.12: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಎಂಜಿಐಆರ್ ಐ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ರಾಷ್ಟ್ರಮಟ್ಟದ ಜಾಗೃತಿ ಕಾರ್ಯಾಗಾರ

Suddi Udaya

ಹೊಸಂಗಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ಅಂಗವಾಗಿ ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್‌ಕಾಲೇಜಿನಲ್ಲಿ ಸರಣಿ ಕಾರ್ಯಕ್ರಮಗಳು

Suddi Udaya
error: Content is protected !!