September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.14-20: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬೆಳ್ತಂಗಡಿ: ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಜ.೧೪ ರಿಂದ ೨೦ರವರೆಗೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ ನೇತೃತ್ವದಲ್ಲಿ ನಡೆಯಲಿದೆ.

ಜ.14: ತೋರಣ-ಉಗ್ರಾಣ ಮುಹೂರ್ತ, ಪುಣ್ಯಾಹ ವಾಚನ, ನವಕಲಶ, ಧ್ವಜಾರೋಹಣ, ಮಹಾಪೂಜೆ ದೇವರ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ, ಜ.15 ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಧ್ವಜಪೂಜೆ, ಕುಣಿತ ಭಜನೆಯೊಂದಿಗೆ ದೇವರ ಮೂಡು ಸವಾರಿ, ಮಹಾಪೂಜೆ ನಿತ್ಯ ಬಲಿ, ದೇವರ ಬಲಿ, ಜ.೧೬: ಅಭಿಷೇಕ, ಮಹಾಪೂಜೆ, ಧ್ವಜ ಪೂಜೆ, ಅನ್ನಸಂತರ್ಪಣೆ, ವಸಂತಕಟ್ಟೆ ಪೂಜೆ, ಕುಣಿತ ಭಜನೆಯೊಂದಿಗೆ ದೇವರ ಪಡುಸವಾರಿ, ಚಂದ್ರಮಂಡಲ ಉತ್ಸವ, ನಿತ್ಯ ಬಲಿ, ಜ.17: ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಧ್ವಜಪೂಜೆ, ಅನ್ನಸಂತರ್ಪಣೆ, ದೇವರ ಬಲಿ, ವಸಂತಕಟ್ಟೆ ಪೂಜೆ, ಕುಣಿತ ಭಜನೆಯೊಂದಿಗೆ ದೇವರ ಅರಮನೆ ಬೀದಿ ಸವಾರಿ, ಚಂದ್ರಮಂಡಲ ಉತ್ಸವ, ಮಹಾಪೂಜೆ, ನಿತ್ಯಬಲಿ, ಜ.18: ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಧ್ವಜಪೂಜೆ, ಅನ್ನಸಂತರ್ಪಣೆ, ದೇವರ ದರ್ಶನ ಬಲಿ, ವಸಂತಕಟ್ಟೆ ಪೂಜೆ, ಚಂದ್ರಮಂಡಲ ಉತ್ಸವ, ಮಹಾಪೂಜೆ, ನಿತ್ಯಬಲಿ, ಜ.19: ಅಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ, ಧ್ವಜಪೂಜೆ, ಅನ್ನಸಂತರ್ಪಣೆ, ಭಜನೆ ಮೂಜಿಲ್ನಾಯ ದೈವ ಹಾಗೂ ಪರಿವಾರ ದೈವಗಳ ನೇಮ, ಶ್ರೀ ಭೂತಬಲಿ, ಕವಾಟ ಬಂಧನ. ಜ.20: ಪ್ರಾರ್ಥನೆ, ಕವಾಟೋದ್ಘಾಟನೆ, ದಿವ್ಯದರ್ಶನ, ಕಲಾಶಾಭಿಷೇಕ, ಅಲಂಕಾರ ಪೂಜೆ, ಚಂದ್ರಮಂಡಲ ಉತ್ಸವ, ಮಹಾಪೂಜೆ, ದೇವರ ಬಲಿ, ಹಣ್ಣುಕಾಯಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಭಜನೆ, ದೇವರ ಮಹೋತ್ಸವ, ವಸಂತಕಟ್ಟೆ ಪೂಜೆ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಕೊಡಮಣಿತ್ತಾಯ ದೈವದ ನೇಮ, ದೈವ ದೇವರ ಭೇಟಿ, ಅವಭೃತ ಸ್ನಾನ, ಧ್ವಜ ಅವರೋಹಣ, ಜ.21: ಶುದ್ಧ ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ ಹಾಗೂ ಜ.22ರಂದು ರಂಗಪೂಜೆ ಹಾಗೂ ಮಡಂತಿಮಾರು ದೈವಸ್ಥಾನದಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜ.14: 20 ಭಜನಾ ತಂಡಗಳಿಂದ ಭಜನಾ ಸತ್ಸಂಗ ಕಾರ್ಯಕ್ರಮ, ಜ.18: ಅಳದಂಗಡಿ ಸ.ಪ.ಪೂ.ಕಾಲೇಜು ಹಾಗೂ ಸೈಂಟ್ ಪೀಟರ್ ಕ್ಲೇವರ್ ಆಂ.ಮಾ. ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜ.20: ಹರಿದಾಸ ಡೋಗ್ರ ಬಳಗದಿಂದ ಸ್ಯಾಕ್ಸೋಫೋನ್, ಅಳದಂಗಡಿ ಸ.ಹಿ.ಪ್ರಾ.ಶಾಲಾ ಹಾಗೂ ಸುಲ್ಕೇರಿ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಭಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ, ತುಳು ಸಾಮಾಜಿಕ ನಾಟಕ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಂಬಳ ಓಟಗಾರ ಸತೀಶ ಸುಲ್ಕೇರಿಮೊಗ್ರು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕಾಶಿಪಟ್ಣ ಹಾಗೂ ಅರ್ಕಿಜೆದಡ್ಡ ಪೂವಪ್ಪ ಮಡಿವಾಳರಿಗೆ ಸನ್ಮಾನ ನಡೆಯಲಿದೆ.

Related posts

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

Suddi Udaya

ಭಾರೀ ಮಳೆ: ಕಾಯರ್ತಡ್ಕ – ಪುತ್ಯೆ ಸೇತುವೆ ಮೂಲಕ ಸಂಚಾರ ಸ್ಥಗಿತ

Suddi Udaya

ಉಜಿರೆ : ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರು ಕಳವು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ವೇಣೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ; ಚಿಕಿತ್ಸೆಗೆ ಸ್ಪಂದಿಸದೆ ಮೃತ್ಯು

Suddi Udaya

ಮುಂಡಾಜೆ: ರಾಮ ನಾಯ್ಕ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ವತಿಯಿಂದ ಅಂತರ್ ‍ಜಿಲ್ಲಾ ಚಿತ್ಪಾವನಿ ಭಾಷಾ ಕವಿಗೋಷ್ಠಿಯ ಸಮಾರೋಪ

Suddi Udaya
error: Content is protected !!