September 6, 2026
ಧಾರ್ಮಿಕವರದಿ

ವೇಣೂರು: ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರ ಜೀರ್ಣೋದ್ದಾರ ಮತ್ತು ಅಭಿವೃದ್ದಿ ಕಾರ್ಯವಿಜ್ಞಾಪನಾ ಪತ್ರ ಬಿಡುಗಡೆ

ವೇಣೂರು; ಇಲ್ಲಿಯ ಶಿವಾಜಿ ನಗರದ ಜನತಾ ಕಾಲೋನಿಯ ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರದ ಜೀರ್ಣೋದ್ದಾರ ಮತ್ತು ಅಭಿವೃದ್ದಿಯ ಕಾರ್ಯಗಳಿಗೆ ಸಂಬಂದಿಸಿದ ವಿಜ್ಞಾಪನಾ ಪತ್ರವನ್ನು ಡಿ.31ರಂದು ಗಣಹೋಮ, ಸರಸ್ವತಿ ಪೂಜೆ, ಶ್ರೀದೇವಿ ಆದಿಶಕ್ತಿ ಅಮ್ಮನವರಿಗೆ ಮಹಾಪೂಜೆಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಭಜನಾ ಮಂದಿರದ ಆದಿಶಕ್ತಿ ಕಲಾ ಭವನದಲ್ಲಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ ಖಂಡಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವಿಜಯ ಗೌಡ, ಗ್ರಾ.ಪಂ. ಸದಸ್ಯ ಲೋಕಯ್ಯ ಪೂಜಾರಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಗ್ರಾ.ಪಂ. ಸದಸ್ಯ ನೇಮಯ್ಯ ಕುಲಾಲ್, ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನೆಯ ವೇಣೂರು ವಲಯ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಸೇವಾ ಪ್ರತಿನಿಧಿ ಶ್ರೀಮತಿ ಜಯಂತಿ, ಭಜನಾ ಮಂದಿರದ ಸಂಚಾಲಕ ಶಂಕರ ಎಸ್, ಗೌರವಾಧ್ಯಕ್ಷ ಶಿವಪ್ಪ ಕೊಳಚಲ, ಅಧ್ಯಕ್ಷ ಯೋಗೀಶ್ ಕೆ.ಬಿ. ಉಪಸ್ಥಿತರಿದ್ದರು.ಪ್ರಸ್ತಾವಿಕ ಬಾಷಣವನ್ನು ಸಂಚಾಲಕರಾದ ಶಂಕರ ಎಸ್ ನೆರವೇರಿಸಿದರು. ಸದಾಶಿವ ಡಿ. ಸ್ವಾಗತಿಸಿ, ಶೇಖರ್ ವಿ.ಜಿ ವಂದಿಸಿದರು.

Related posts

ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ದೀಪೋತ್ಸವ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ; ರೂ.4.81 ಕೋಟಿ ಲಾಭ, ಸದಸ್ಯರಿಗೆ ಶೇ. 18 ಡಿವಿಡೆಂಟ್

Suddi Udaya

ಸರಳಿಕಟ್ಟೆ ಪ್ರೌಢಶಾಲೆಯಲ್ಲಿ ಯುವ ಸಂಸತ್ತು ಚುನಾವಣೆ

Suddi Udaya

ಎ.30: ವಾಣಿ ಕಾಲೇಜು ಪ್ರಾಂಶುಪಾಲ ಡಿ. ಯದುಪತಿ ಗೌಡ ಸೇವಾ ನಿವೃತ್ತಿ

Suddi Udaya

ಉಜಿರೆ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಮಂತ್ರಿಮಂಡಲದ ಪದಗ್ರಹಣ ಮತ್ತು ಶಾಲಾ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

Suddi Udaya

ಶಿಶಿಲ: ಶ್ರೀ ವನದುರ್ಗಾ ಕೃಪಾಶ್ರಿತ ಸಂಚಾರಿ ನಡುಮನೆ ಯಕ್ಷಗಾನ ಚಿಕ್ಕ ಮೇಳ ತಿರುಗಾಟ ಆರಂಭ

Suddi Udaya
error: Content is protected !!