37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿವರದಿ

ಸಕಲೇಶಪುರದ ಯುವಕ ನಾಪತ್ತೆ ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ

ಬೆಳ್ತಂಗಡಿ: ವಿಪರೀತ ಸಾಲಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಅವಿವಾಹಿತ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೇರ್ಹಳ್ಳಿ ಗ್ರಾಮದ ಅಭಿಷೇಕ್ (31) ಎಂಬಾತ ವಿಪರೀತ ಸಾಲ ಮಾಡಿಕೊಂಡ ಪರಿಣಾಮ ನೊಂದು ಮನೆಯಿಂದ ನಾಪತ್ತೆಯಾದವನು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಕಲೇಶಪುರ ನಿವಾಸದಿಂದ ಅಭಿಷೇಕ್ ಜ.9 ಕ್ಕೆ ನಾಪತ್ತೆಯಾಗಿ ನೇರ ಧರ್ಮಸ್ಥಳದ ನೇತ್ರಾವತಿ ನದಿಗೆ ಬಂದು ಮನೆಯವರಿಗೆ ‘ನನಗೆ ಸಾಲದ ಒತ್ತಡ ಜಾಸ್ತಿಯಾಗುತ್ತಿರುವ ಕಾರಣದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಮೆಸೇಜ್ ಮಾಡಿ ಬಳಿಕ ಕರೆ ಮೂಲಕ ‘ನಾನು ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಬಂದಿದ್ದು ನಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ.

ಈ ವಿಚಾರವಾಗಿ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ನೇರ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ನದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಜ.11 ರಂದು ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಅಭಿಷೇಕ್ ಮೃತದೇಹ ಕುಟುಂಬ ಸದಸ್ಯರಿಗೆ ಪತ್ತೆಯಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಹೋದರ ಭರತ್.ಬಿ.ಎಮ್ ಎಂಬವರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ.

Related posts

ತೆಕ್ಕಾರು: ಬಾಜಾರು ಗುಡ್ಡ ಕುಸಿದು ಮನೆಗೆ ಹಾನಿ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಉದ್ಯಮಿ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಯೋಧರ ಉದ್ಯಾನವನಕ್ಕೆ ಬೆಳ್ತಂಗಡಿಯಿಂದ ಮಣ್ಣು ಸಮರ್ಪಣೆ

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಡoತ್ಯಾರು ನಗರದಲ್ಲಿ ಅಂಗಡಿ ಮುoಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ

Suddi Udaya

ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಅಪಪ್ರಚಾರ ಕೊನೆಯಾಗುವಂತೆ ಕರವೇ ಮಹಿಳಾ ತಂಡದ ಸದಸ್ಯರಿಂದ ಉರುಳು ಸೇವೆ

Suddi Udaya

ಎಸ್ಐಟಿ ಸಲ್ಲಿಸಿದ ವರದಿಯ ಪ್ರತಿ ನೀಡಲು ಅರ್ಜಿ ಸಲ್ಲಿಕೆ: ಕೆಲವೊಂದು ವರದಿಯ ಪ್ರತಿ ನೀಡಲು ಕೋರ್ಟ್ ಒಪ್ಪಿಗೆ

Suddi Udaya
error: Content is protected !!