September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಯಡೂ೯ರು ರಾತ್ರಿ ಮನೆಯೊಳಗಡೆ ಬಿದ್ದು ರಕ್ತಸ್ರಾವವಾಗಿ ಮುರಳಿಧರ ಭಟ್ ಮೃತ್ಯು

ಗುರುವಾಯನಕೆರೆ: ಇಲ್ಲಿಯ ಯಡೂ೯ರು ಎಂಬಲ್ಲಿ ಯುವಕರೋವ೯ರು ಮನೆಯೊಳಗಡೆ ಬಿದ್ದು ತಲೆಗೆ ಬಿದ್ದ ಏಟಿನಿಂದ ರಕ್ತಸ್ರಾವವಾಗಿ ಮೃತ ಪಟ್ಟಿರುವುದು ಜ.15ರಂದು ಬೆಳಕಿಗೆ ಬಂದಿದೆ.

ಗುರುವಾಯನಕೆರೆ ಯಡೂ೯ರಿನ ದಿ. ಶ್ರೀಧರ ಭಟ್ ಮತ್ತು ಶ್ರೀ ಮತಿ ಗೀತಾ ದಂಪತಿ ಪುತ್ರ ಮುರಳೀಧರ ಭಟ್ (35ವ) ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮುರಳೀಧರ ಭಟ್ ಅವರ ತಾಯಿ ಗೀತಾ ಭಟ್ ಅವರು ಕಾಲಿನ ಆಪರೇಷನ್ ಆಗಿ ಗೇರುಕಟ್ಟೆ ಕುಂಠಿನಿಯ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಇಂದು ಯಡೂ೯ರಿನ ತನ್ನ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಿಗ್ಗೆ ಗೀತಾ ಭಟ್ ಮನೆಗೆ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿದ್ದು, ಮಗನನ್ನು ಕರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಮನೆಯ ಹಿಂದಿನ ಕಿಟಿಕಿ ಮೂಲಕ ನೋಡಿದಾಗ ಮುರಳಿ ಕವಚಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಯ ಭಾಗದಿಂದ ರಕ್ತ ಹರಿದು ಹೋಗಿರುವುದು ಕಂಡು ಬಂದಿದೆ. ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಮನೆಯ ಹಿಂದಿನ ಬಾಗಿಲನನ್ನು ತೆರೆದು ನೋಡಿದಾಗ ಮುರಳಿ ಮೃತಪಟ್ಟಿರುವುದು ದೃಢಪಟ್ಟಿದೆ.
ಮುರಳೀಧರ ಭಟ್ ಧರ್ಮಸ್ಥಳದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಒಬ್ಬರೇ ಇದ್ದರು.

ಅವರ ಸಾವಿಗೆ ಸ್ವಷ್ಟ ಕಾರಣ ಗೊತ್ತಾಗಿಲ್ಲ. ಆದರೆ ರಾತ್ರಿ ‌ಮನೆಯಲ್ಲಿ ಬಿದ್ದು ತಲೆಗೆ ಬಿದ್ದ ಏಟಿನಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಅವರು ಎರಡು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಸಂಶಯಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು , ತನಿಖೆ ನಡೆಸುತ್ತಿದ್ದಾರೆ

Related posts

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಧರ್ಮಸ್ಥಳ ಭೇಟಿ

Suddi Udaya

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಕಬ್- ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್- ಗೈಡ್ಸ್ ಮೇಳ, ರೋವರ್ಸ್‌ – ರೇಂಜರ್ಸ್‌ ಸಮಾಗಮ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

Suddi Udaya

ಕಣಿಯೂರು: ಶ್ವೇತ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವ

Suddi Udaya

ಬೆಳ್ತಂಗಡಿ : ಹಳೆಕೋಟೆಯಲ್ಲಿ ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಶುಭಾರಂಭ

Suddi Udaya

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮನ್ ಶರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕೆ ಆಯ್ಕೆ

Suddi Udaya
error: Content is protected !!