ತೆಂಕಕಾರಂದೂರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತೆಂಕಕಾರಂದೂರಿನಲ್ಲಿ ವೇದಮೂರ್ತಿ ನಡ್ವಂತಾಡಿ ಶ್ರೀ ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾದ್ವಾರದ ಉದ್ಘಾಟನೆಯು ಜ.21ರಿಂದ ಮೊದಲ್ಗೊಂಡು ಜ.25ರವರೆಗೆ ಜರುಗಲಿದೆ.
ಕಾರ್ಯಕ್ರಮಗಳು: ಜ.21ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಶಾಸಕ ಹರೀಶ್ ಪೂಂಜ, ಗಣ್ಯರು ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮಹಾದ್ವಾರದ ಉದ್ಘಾಟನೆ ನೆರವೇರುವುದು. ಮಧ್ಯಾಹ್ನ ಯಕ್ಷಕೂಟ ಮಧ್ವ ಇವರಿಂದ ಯಕ್ಷಗಾನ ತಾಳಮದ್ದಲೆ ಸಂಜೆ ಶ್ರೀ ವಿಷ್ಣು ಬಾಲ ಯಕ್ಷಗಾನ ಕಲಾವಿದರು ತೆಂಕಕಾರಂದೂರು ಇದರ ಮಕ್ಕಳಿಂದ ‘ಶ್ರೀ ಕೃಷ್ಣ ಲೀಲಾಮೃತ’ ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗುವುದು.
ಜ.22ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಾರಂಭ, ಕುಣಿತ ಭಜನೆ, ಸಂಜೆ ಪೆರೋಡಿತ್ತಾಯಕಟ್ಟೆ ಮತ್ತು ತಾರೆದೊಟ್ಟು ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೀರಂಗ ಪೂಜೆ, ಬಲಿ, ವಸಂತ ಕಟ್ಟೆ ಪೂಜೆ, ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ ಮೂಜಿಲ್ನಾಯ, ಕಲ್ಕುಡ-ಕಲ್ಲುರ್ಟಿಗಳಿಗೆ ನೇಮೋತ್ಸವ ಜರುಗುವುದು.
ಜ.23 ರಂದು ಸಂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸಭಾಧ್ಯಕ್ಷತೆಯನ್ನು ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಅಳದಂಗಡಿ ಅರಮನೆ ವಹಿಸಲಿರುವರು. ಧಾರ್ಮಿಕ ಉಪನ್ಯಾಸವನ್ನು ಶ್ರೀ ದಾಮೋದರ ಶರ್ಮಾ, ಬಾರ್ಕೂರು ನೀಡಲಿರುವರು. ಕೆ. ಕೃಷ್ಣ ಸಂಪಿಗೆತ್ತಾಯ, ಅನುವಂಶಿಕ ಆಡಳಿತ ಮೊಕ್ತೇಸರ, ಶ್ರೀನಿವಾಸ ರೈ ಕಾರಂದೂರು, ಅಧ್ಯಕ್ಷರು, ಜಾತ್ರಾ ಸಮಿತಿ ಉಪಸ್ಥಿತರಿರುವರು. ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಗರಿಕರಾದ ಕೆ. ವಿಠಲ ಹೆಗ್ಡೆ, ಕೆ. ನಾರಾಯಣ ರೈ ಕಾರಂದೂರು, ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ಮಾಯಿಲಪ್ಪ ಪೂಜಾರಿ, ಅಂಗಡಿಬೆಟ್ಟು, ದಿ. ಲಿಂಗಪ್ಪ ಪೂಜಾರಿ ಕೆಮ್ಮಟೆ, ಸ್ಮರಣಾರ್ಥ ಶ್ರೀಮತಿ ಶೀಲಾವತಿ ಕೆಮ್ಮಟೆ ರವರಿಗೆ ಗೌರವ ಸಮರ್ಪಣೆ, ಕು. ಸನ್ನಿಧಿ, ಬಜನೋಡಿಗೆ ಸನ್ಮಾನ ಜರುಗುವುದು. ರಾತ್ರಿ ರಾಘು ಮಾಸ್ಟ್ರು ತುಳು ಹಾಸ್ಯಮಯ ನಾಟಕ ಚೈತನ್ಯ ಕಲಾವಿದರು ಬೈಲೂರು ಇವರಿಂದ ನಡೆಯಲಿರುವುದು.
ಜ.24ರಂದು ಬೆಳಿಗ್ಗೆ ದರ್ಶನ ಬಲಿ, ಮಹಾಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ನೃತ್ಯಾಂಜಲಿ’ ಭರತನಾಟ್ಯ ಕಾರ್ಯಕ್ರಮ, ಶ್ರೀರಂಗ ಪೂಜೆ ಜರುಗುವುದು. ಜ.25ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಹಾರ್ಮೋನಿಯಂ, ತಬಲ ಸಂಯೋಜನೆಯೊಂದಿಗೆ ವಿವಿಧ ಕುಣಿತ ಭಜನಾ ಮಂಡಳಿಗಳಿಂದ ಕುಣಿತ ಭಜನೆ, ಸಂಜೆ ವಿದುಷಿ ಶ್ರೀಮತಿ ವಿಮಲಾ ಶ್ರೀನಿವಾಸ ಮೂರ್ತಿ ಮತ್ತು ಬಳಗ, ಬೆಂಗಳೂರು ಇವರಿಂದ ಶಾಸ್ತ್ರೀಯ ಸಂಗೀತ ಜರುಗಲಿರುವುದು.











