37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮಕ್ಕೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಡಾ. ಮಹೇಶ್ ಕುಮಾರ್ ಶೆಟ್ಟಿ ಆಯ್ಕೆ

ಬೆಳ್ತಂಗಡಿ: ಜ.26 ರಂದು ಬೆಂಗಳೂರಿನ ಮಾಣಿಕ್ ಷಾ ಕ್ರೀಡಾಂಗಣದಲ್ಲಿ ನಡೆಯುವ ಕರ್ನಾಟಕ ರಾಜ್ಯ ಗಣರಾಜ್ಯೋತ್ಸವ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ತಂಡದ ಕಾರ್ಯಕ್ರಮ ಅಧಿಕಾರಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು (ಸ್ವಾಯತ್ತ), ಉಜಿರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಮುಖ್ಯಸ್ಥ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಇವರು ಆಯ್ಕೆಯಾಗಿದ್ದಾರೆ.

ಕಾಲೇಜಿನಿಂದ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದಿಂದ ಪ್ರತಿನಿಧಿಸುತ್ತಿರುವ ಮೊದಲ ಕಾರ್ಯಕ್ರಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಇವರು ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಒಂದು ವಾರದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.

ಕಳೆದ ಮೂರು ವರ್ಷಗಳಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ಮುಖ್ಯಸ್ಥರಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಕಾಲೇಜಿಗೆ ಮತ್ತು ವಿಶ್ವವಿದ್ಯಾನಿಲಯಕ್ಕೆ ಹಿರಿಮೆಯನ್ನು ತಂದಿರುವ ಇವರಿಗೆ ಎಸ್. ಡಿ. ಎಂ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಪ್ರೊ ವಿಶ್ವನಾಥ ಪಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳಾದ ಡಾ. ಶೇಷಪ್ಪ ಕೆ. ಅಭಿನಂದಿಸಿ ಶುಭ ಹಾರೈಸಿದ್ದಾರೆ.

Related posts

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

Suddi Udaya

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಚುನಾವಣಾ ಅರಿವು ಸ್ಪರ್ಧೆಗಳ ಉದ್ಘಾಟನೆ

Suddi Udaya

ಹಿರಿಯ ಪತ್ರಕರ್ತ ಪ್ರೊ. ನಾ ’ವುಜಿರೆ’ಯವರಿಗೆ ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ನುಡಿ ನಮನ

Suddi Udaya

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯೂಟ್ಯೂಬರ್‌ಗಳ ಆರೋಗ್ಯ ವಿಚಾರಿಸಿದ ಬೆಳ್ತಂಗಡಿ ಡಿ.ಎಸ್.ಎಸ್(ಅಂಬೇಡ್ಕರ್‌ವಾದ) ನಿಯೋಗ

Suddi Udaya

ದೇವಾಲಯಗಳಲ್ಲಿ ಸೂಕ್ತ ಭದ್ರತೆ ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ: ವಿಧಾನ ಪರಿಷತ್‍ನಲ್ಲಿ ಪ್ರತಾಪಸಿಂಹ ನಾಯಕ್ ಒತ್ತಾಯ

Suddi Udaya
error: Content is protected !!