37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಪಾಲಡ್ಕ ಒಕ್ಕೂಟದ ಬೆಳ್ಳಿ ಹಬ್ಬ ಕಾರ್ಯಕ್ರಮ

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಗುರುವಾಯನಕೆರೆ ಪಾಲಡ್ಕ ಒಕ್ಕೂಟದ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಕುಸುಮಾವತಿರವರ ಅಧ್ಯಕ್ಷತೆಯಲ್ಲಿ ದೀಪವನ್ನು ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಯೋಜನಾಧಿಕಾರಿ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆ ನಡೆದು ಬಂದ ದಾರಿ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಯೋಜನೆಯ ಕಾರ್ಯಕ್ರಮ, ಯೋಜನೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಸಿದರು.

ಒಕ್ಕೂಟದ ವರದಿಯನ್ನು ಸವಿತಾ ಮಂಡಿಸಿದರು. ಒಕ್ಕೂಟದ ತಂಡದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಆಯೋಜನೆ ಮಾಡಿ ಬಹುಮಾನ ವಿತರಿಸಲಾಯಿತು. ಯೋಜನೆಯ ಮೂಲ ಫಲಾನುಭವವಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ರಾಮಣ್ಣ ಗೌಡ ಅನಿಸಿಕೆ ವ್ಯಕ್ತಪಡಿಸಿದರು, ಧರ್ಣಪ್ಪ ಕುಲಾಲ್ , ಸುಮತಿ ದಂಪತಿಗಳಿಗೆ ಗೌರವಿಸಲಾಯಿತು.

ಅನಂತ್ರಾಮ ಗೌಡ, ಪಳ್ಳ ತಳ ರವರ ಕಾರ್ಯಕ್ರಮ ಉದ್ದೇಶಿಸಿ, ಯೋಜನೆಯಿಂದ ಸಿಗುವ ಸೌಲಭ್ಯವನ್ನು ಸರಿಯಾದ ಉದ್ದೇಶಕ್ಕೆ ನಾವು ಬಳಕೆ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಪಾಲ ಕೋಲಾಜೆ,( ಜನಜಾಗೃತಿ ವೇದಿಕೆ ಅಧ್ಯಕ್ಷರು) ಮಡಂತ್ಯಾರು ವಲಯ ಅಧ್ಯಕ್ಷ ಜಯ ಪೂಜಾರಿ, ಎಸ್.ಡಿ.ಎಮ್ ಸಿ ಅಧ್ಯಕ್ಷ ಪ್ರೀತ ಕುಮಾರ ಕುದ್ರಡ್ಕ, ಒಕ್ಕೂಟದ ಅಧ್ಯಕ್ಷ ವಿಜಯ್, ಹಾಗೂ ಡೊಮ್ಮಯ್ಯ ಶೆಟ್ಟಿಗಾರ್, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ಮೇಲ್ವಿಚಾರಕರು ಕೇಶವ, ಸೇವಾಪ್ರತಿನಿಧಿ ನಂದಿನಿ, ಪರಮೇಶ್ವರ್, ಕಲಾವತಿ, ವಿಪತ್ತು ಘಟಕದ ಸ್ವಯಂ ಸೇವಕರು ಅವಿನಾಶ ಹಾಗೂ ಕಾರ್ಯಕ್ರಮವನ್ನು ಪುಪ್ಪ ನಿರೂಪಣೆ ಮಾಡಿದರು. ಶುಭಲತಾ ಸ್ವಾಗತಿಸಿದರು, ಅನುಪಮಾ ಧನ್ಯವಾದ ಮಾಡಿದರು.

Related posts

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ನಾರಾವಿ ಸಿಎ ಬ್ಯಾಂಕಿನ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಬೆಂಬಲ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ’ ಕುರಿತ ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಾಶಿಪಟ್ಣ: ರಿಕ್ಷಾ ಪಲ್ಟಿ, ಶೀಘ್ರವಾಗಿ ರಸ್ತೆ ದುರಸ್ತಿಗೆ ಪಂಚಾಯತ್ ಗೆ ಮನವಿ

Suddi Udaya

ಮದ್ದಡ್ಕ: ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ಡಿಕ್ಕಿ: ಚಾಲಕರು ಪ್ರಾಣಾಪಾಯದಿಂದ ಪಾರು

Suddi Udaya

ಸೌತಡ್ಕದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾಗರ ಹಾವು ಪ್ರತ್ಯಕ್ಷ

Suddi Udaya
error: Content is protected !!