September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಜೂರು ಉರೂಸ್; ಪ್ರತಿದಿನ‌‌ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನ

ಬೆಳ್ತಂಗಡಿ: ಸುಮಾರು 8 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸವಿರುವ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಜ.16 ರಿಂದ ಆರಂಭಗೊಂಡ ಉರೂಸ್ ಸಂಭ್ರಮದ ಭಾಗವಾಗಿ ಪ್ರತಿದಿನ ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದೆ.‌
ಉಪನ್ಯಾಸ ಮಾಲಿಕೆಯನ್ನು ಜ.16 ರಂದು ಸಯ್ಯಿದ್ ಕಾಜೂರು‌ ತಂಙಳ್‌ ಶುಭಾರಂಭಗೊಳಿಸಿದರೆ,
ಜ.17 ರಂದು ಸಯ್ಯಿದ್‌‌ ಕಿಲ್ಲೂರು ತಂಙಳ್ ಉಪನ್ಯಾಸ ನೀಡಿದರು. ಜ.18 ರಂದು ಲೆತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಿತು. ಜ.19. ರಂದು ದಾರುಸ್ಸಲಾಂ ಬೆಳ್ತಂಗಡಿಯ ಚೇರ್ಮೆನ್ ಸಯ್ಯಿದ್ ಜಿಫ್ರಿ ತಂಙಳ್ ದುಆ ನೇತೃತ್ವ ವಹಿಸಿ, ವಾಗ್ಮಿ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಉಪನ್ಯಾಸ ನೀಡಿದರು. ಜ.20 ರಂದು ಜಲಾಲಿ ಉಸ್ತಾದ್ ಉಪನ್ಯಾಸ ನೆರವೇರಿಸಿದರು. ಜ.21 ರಂದು ಪೆರ್ಮುಗಂ ಅಶ್ರಫ್ ಉಸ್ತಾದ್ ನೇತೃತ್ವದಲ್ಲಿ ಇಸ್ಲಾಮಿಕ್ ಕಥಾಪ್ರಸಂಗ ನಡೆಸಿಕೊಡಲಿದ್ದಾರೆ.

ದಿಕ್ರ್ ಮಜ್ಲಿಸ್, ಪದವಿ ಪ್ರದಾನ, ಉರೂಸ್ ಸಮಾರೋಪ; ಉರೂಸಿನ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಪೈಕಿ‌ ಇನ್ನು 4 ದಿನಗಳು ಮಾತ್ರ ಬಾಕಿಯಿದ್ದು, ಜ.22 ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ “ಬೃಹತ್ ದ್ಸಿಕ್ರ್ ಮಜ್ಲಿಸ್” ಬಾಯಾರ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ. ಡಾ. ಕಾವಳಕಟ್ಟೆ ಹಝ್ರತ್ ಸಹಿತ ಉಲೆಮಾ ಪ್ರಮುಖರು ಭಾಗವಹಿಸಲಿದ್ದಾರೆ.
ಜ. 23 ರಂದು ಕಾಜೂರು ಮಹಿಳಾ ಶರೀಅತ್ ಕಾಲೇಜು ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ನಡೆಯಲಿದೆ.
ಜ. 25 ರಂದು ಬೆಳಿಗ್ಗೆ ಉರೂಸ್ ಸಮಾರಂಭ ನಡೆಯಲಿದ್ದು, ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭಕ್ಕೆ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸಮಾರಂಭದಲ್ಲಿ ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್, ವಕ್ಫ್ ಸಚಿವ ಬಿ.ಝೆಡ್ ಝಮೀರ್ ಅಹಮ್ಮದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್,ಮೌಲಾನಾ ಶಾಫಿ ಸ‌ಅದಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು, ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ನಿಗಮಾಧ್ಯಕ್ಷ ಕೆ ಹರೀಶ್ ಕುಮಾರ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ. ಕೊನೆಯ‌ ದಿನ ಅನ್ನದಾನ ಕೂಡ‌ ನಡೆಯಲಿದೆ.

Related posts

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಣಿಜರಿ ಪರಿಸರದಲ್ಲಿ ಬೆಂಕಿ

Suddi Udaya

ನೀರಿನ ಮಟ್ಟ ಹಾಗೂ ಭೂ ಕುಸಿತದ ಲಕ್ಷಣ ಕಂಡರೆ ಕೂಡಲೇ ಸಂಪರ್ಕಿಸುವಂತೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಧರ್ಮಸ್ಥಳ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಕನ್ಯಾಡಿಯಲ್ಲಿ ರಾಮ ನಾಮ ತಾರಕ ಮಂತ್ರ ಪಠಣ

Suddi Udaya

ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜ ಕೇಸರಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!