25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ : ರಾತ್ರಿ ಮೂಡಪ್ಪ ಸೇವೆ: ವಿಶೇಷ ಹೂವುಗಳಿಂದ ಅಲಂಕೃತಗೊಂಡ ಸೌತಡ್ಕ ಕ್ಷೇತ್ರ

ಕೊಕ್ಕಡ: ಬಯಲು ಆಲಯದ ಗಣಪನೆಂದೇ ಪ್ರಸಿದ್ದಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆಗೆ ಭರದ ಸಿದ್ದತೆ ನಡೆಯುತ್ತಿದೆ.

ಇಂದು (ಜ.22)ಬೆಳಗ್ಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ 108 ಕಾಯಿ ಗಣಹೋಮ ನಡೆಯಿತು.

ಈ ವೇಳೆ ಕ್ಷೇತ್ರದಲ್ಲಿ ವಿಶೇಷ ಹೂವುಗಳಿಂದ ಸರ್ವಾಲಂಕೃತಗೊಂಡು ಕಂಗೊಳಿಸುತ್ತಿದೆ.

ಊರ ಪರವೂರ ಭಕ್ತ ಗಣ ದೇಗುಲಕ್ಕೆ ಹರಿದು ಬರುತ್ತಿದ್ದು, ಗಂಟೆ ಗಣಪನ ಬಯಲು ಆಲಯ ಸರ್ವಾಲಂಕೃತಗೊಂಡು ನಳನಳಿಸುತ್ತಿದೆ

ರಾತ್ರಿ ಗಂಟೆ 7.30ರಿಂದ ಮೂಡಪ್ಪಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

Related posts

ಕಕ್ಕಿಂಜೆ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಪೊಲೀಸರ ವಶ

Suddi Udaya

ನೆರಿಯ: ಕುಡುಮಡ್ಕ ಸೌಗಂಧಿಕ ಮನೆಯ ನೀಲಮ್ಮ ನಿಧನ

Suddi Udaya

ಮೊಗ್ರು: ಮುಗೇರಡ್ಕ ಕಿ.ಪ್ರಾ. ಶಾಲೆಯ ಬಿಸಿಯೂಟ ಕೊಠಡಿಗೆ ಬಂದಾರು ಗ್ರಾ.ಪಂ. ವತಿಯಿಂದ ಶೀಟ್ ಅಳವಡಿಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ “ಪ್ರತಿಭಾ ಸಂಗಮ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ; ಶಾಸಕ ಹರೀಶ್ ಪೂಂಜರಿಂದ‌ ಅಧಿಕಾರಿಗಳೊಂದಿಗೆ ಸಭೆ

Suddi Udaya

ಕನ್ಯಾಡಿ ಶ್ರೀ ಗುರುದೇವ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya
error: Content is protected !!