September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜ.23-ಫೆ.1: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವ: ಶ್ರೀಕೃಷ್ಣ ಕಥಾಮೃತ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಕಮ್ಮಟ ಭಜನೋತ್ಸವ, ಆಳ್ವಾಸ್ ಸಾಂಸ್ಕೃತಿಕ ವೈಭವ

ಬೆಳ್ತಂಗಡಿ: 2016ರಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವು ಅತ್ಯಂತ ಯಶಸ್ವಿಯಾಗಿ ನಡೆದು ದಶಮಾನೋತ್ಸವ ಜಾತ್ರಾ ಮಹೋತ್ಸವ ಸ್ಮರಣೀಯವಾಗಿರಬೇಕೆಂಬ ನಿಟ್ಟಿನಲ್ಲಿ ಟ್ರಸ್ಟ್ ವತಿಯಿಂದ ಜರಗಲಿರುವ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜ.23ರಿಂದ ಫೆ.1ರವರೆಗೆ ಜರುಗಲಿವೆ ಎಂದು ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಹೇಳಿದರು.


ಅವರು ಜ.21 ರಂದು ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜ.23ರಿಂದ ಜ.30ರವರೆಗೆ ಪ್ರತಿದಿನ ಸಂಜೆ ೬.೩೦ ಗಂಟೆಗೆ ಡಾ. ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಜರಗಲಿದೆ. ಜ23 ರಂದು ಸಂಜೆ ೪ ಗಂಟೆಗೆ ಡಾ.ವೀಣಾ ಬನ್ನಂಜೆರವರಿಗೆ ಮೆರವಣಿಗೆಯೊಂದಿಗೆ ಪೌರ ಸ್ವಾಗತ ನೀಡಲಾಗುತ್ತಿದೆ. ಸಂಜೆ ೫:೩೦ ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಸುಮತಿ ಮಾಧವ ಭಟ್ ಆಟಿಕುಕ್ಕೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೋನಿಯ ಯಶೋವರ್ಮ ಉಜಿರೆ ವಹಿಸಲಿದ್ದಾರೆ ಎಂದರು. 29ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿಷ್ಣು ಸಹಸ್ರನಾಮ ಯಜ್ಞ, ಜ.30 ರಂದು ಸಾಮೂಹಿಕ ತುಳಸಿ ನಾಮಾರ್ಚನೆ, ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಶ್ರೀ ಕೃಷ್ಣಾಮೃತ ಪ್ರವಚನ ಮಾಲಿಕೆಯ ಸಮಾರೋಪ ಜರಗಲಿರುವುದು.
ಜ.೩೧ರಂದು ಪ್ರತಿಷ್ಠ ವರ್ಧಂತಿ ಅಂಗವಾಗಿ ಗಣ ಹೋಮ, ಪಂಚ ವಿಂಶತಿ ಕಲಶ, ನವಕ ಕಲಶ ಮೊದಲಾದ ಕಾರ್ಯಕ್ರಮಗಳು ಜರಗಲಿವೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸಂಜೆ ಕಮ್ಮಟ ಭಜನೋತ್ಸವ, ದೇವರ ಉತ್ಸವ, ಬಲಿ, ಅಷ್ಟಾವಧಾನ ಸೇವೆ ಇತ್ಯಾದಿ ನಡೆಯಲಿದೆ ಎಂದರು.

ರಾತ್ರಿ ೮.೩೦ ಕ್ಕೆ ಸಭಾ ಕಾರ್ಯಕ್ರಮ ಜರಗಲಿದ್ದು ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕೆ. ಗಂಗಾಧರ ಗೌಡ, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಎಸ್‌ಕೆಡಿಆರ್‌ಡಿಪಿಯ ಸಿಇಒ ಅನಿಲ್ ಕುಮಾರ್ ಎಸ್ .ಎಸ್., ಎಆರ್ ಟಿಒ ಚರಣ್ ಕೆ., ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತಾ ಶಿವರಾಂ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳೀಧರ ಬಲಿಪ, ಉದ್ಯಮಿ ಮಾಧವ ಜೋಗಿತ್ತಾಯ ಮತ್ತಿತರರು ಉಪಸ್ಥಿತರಿರುವರು ಎಂದರು.

ಫೆ.1 ರಂದು ಗಣಹೋಮ, ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಸಂಜೆ ದುರ್ಗಾಪೂಜೆ, ರಂಗ ಪೂಜೆ ಇತ್ಯಾದಿ ಜರಗಲಿದೆ. ಸಂಜೆ ೭:೩೦ ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಎಂಎಲ್‌ಸಿ ಗಳಾದ ಪ್ರತಾಪ್‌ಸಿಂಹ, ನಾಯಕ್, ಕಿಶೋರ್ ಕುಮಾರ್, ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯ ಇದರ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಎಸ್., ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ನ ನಿಕಟಪೂರ್ವ ಅಧ್ಯಕ್ಷ ಎ.ಬಿ.ಉಮೇಶ್, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ, ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ರಾಘ್ನೇಶ್ ಭಾಗವಹಿಸಲಿದ್ದಾರೆ ಎಂದರು.

ಶ್ರೀ ಕೃಷ್ಣನ ಕೋಟಿ ನಾಮ ಸಂಕಲ್ಪ: ಡಾ. ಪ್ರದೀಪ್ ನಾವೂರು
ಧನುಪೂಜೆಯಲ್ಲಿ ೧೦ ಸಾವಿರಕ್ಕೂ ಹೆಚ್ಚಿನ ಭಕ್ತರು ಭಾಗಿಯಾಗಿ ವಿಷ್ಣು ಸಹಸ್ರನಾಮ ಪಠಣ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಮಕ್ಕಳಿಗೆ ಭಗವದ್ಗೀತೆ ಪಠಣ ಮತ್ತು ತರಗತಿ, ವಿಷ್ಣು ಸಹಸ್ರ ನಾಮ ಪಠಣ ಮತ್ತು ತರಗತಿ ನಡೆಯುತ್ತಿದೆ. ಮಕ್ಕಳಿಗೆ ರಾಮಾಯಣ, ಮಹಾಭಾರತ, ಮಂಕು ತಿಮ್ಮನ ಕಗ್ಗ, ಭಗವದ್ಗೀತೆ, ವಿಷ್ಣು ಸಹಸ್ರನಾಮ ಗೊತ್ತಿರಬೇಕು. ಹಾಗಾಗಿ ೫ ವಿಭಾಗದಲ್ಲಿ ಪುಸ್ತಕ ತಯಾರಾಗುತ್ತಿದೆ. ನಾವೂರಿನ ಪ್ರತಿ ಮನೆಯಲ್ಲೂ ಶಂಖನಾದ ಮೊಳಗಬೇಕೆಂಬುದು ಟ್ರಸ್ಟ್ನ ಸಂಕಲ್ಪವಾಗಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಹೇಳಿದರು.

ಜ.29: ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ
ಜ. 29ರಂದು ಸಂಜೆ ೪:೩೦ ರಿಂದ ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ಜರಗಲಿದ್ದು ವಿವಿಧ ಭಾಗಗಳಿಂದ ಸುಮಾರು 2ಸಾವಿರ ಭಕ್ತರಿಂದ ಏಕಕಂಠದಿಂದ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ರಾಷ್ಟಿçÃಯ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಮಣ್ಯ ಭಟ್, ಕೆಎಂಸಿ ವೈದ್ಯ ಡಾ. ಚಕ್ರಪಾಣಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಶಸ್ತçಚಿಕಿತ್ಸಾ ತಜ್ಞ ಡಾ. ಈಶ್ವರ ಕೀರ್ತಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪೂರನ್ ವರ್ಮ, ಉದ್ಯಮಿ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್ ಡಿ. ಪುಷ್ಪಗಿರಿ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ, ಉಪಾಧ್ಯಕ್ಷೆ ತನುಜಾ ಶೇಖರ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಸದಸ್ಯರಾದ ಎ.ಬಿ. ಉಮೇಶ್, ಹರೀಶ್ ಕೆ. ಕಾರಿಂಜ ಹಾಗೂ ಸೂರ್ಯನಾರಾಯಣ ಭಟ್ ನಡ ಉಪಸ್ಥಿತರಿದ್ದರು.

Related posts

ಮಾಲಾಡಿ: ರಕ್ತದಾನ ಶಿಬಿರದ ಮೂಲಕ ಮಹಾತ್ಮ ಗಾಂಧಿಯವರ ಜನ್ಮದಿನ ಆಚರಣೆ

Suddi Udaya

ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾಜಿ ಶಾಸಕ ಪ್ರಭಾಕರ್ ಮನೆಗೆ ಭೇಟಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಬಹುಮಾನ ವಿತರಣಾ ದಿನ”

Suddi Udaya

ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ನೂತನ ಕಾರ್ಯದರ್ಶಿಯಾಗಿ ಶಿಲ್ಪಾ ಕಾಶಿಪಟ್ಣ ಆಯ್ಕೆ

Suddi Udaya

ಗೇರುಕಟ್ಟೆ ಆಟೋ-ಚಾಲಕರ ಸಂಘದ ವತಿಯಿಂದ ಸರ್ಪ ಸಂಸ್ಕಾರ ಪೂಜೆ

Suddi Udaya

ಇಂದಬೆಟ್ಟು: ಕರುವಲ್ಲ ಕಲ್ಲಗುಂಡ ದೇವಸ್ಥಾನ ಹಾಗೂ ಬಂಗಾಡಿ ಹಾಡಿ ದೈವಗಳ ಕಾಣಿಕೆ ಡಬ್ಬಿ ಕಳ್ಳತನ

Suddi Udaya
error: Content is protected !!