March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ವೇಣೂರು: ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಮಾಜಿ ಯೋಧರಾದ ಮೋಹನ್ ಜಿ.ಮೂಲ್ಯರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಶಾಲಾ ಪರಿಸರದ ಬಗ್ಗೆ ಖುಷಿ ವ್ಯಕ್ತಪಡಿಸಿದರು. 90ರ ದಶಕದಲ್ಲಿ ಹತ್ತು ವರ್ಷಗಳ ಕಾಲ ಪ್ರಧಾನಮಂತ್ರಿ ಅವರ ಅಂಗರಕ್ಷಕರಾಗಿದ್ದ ಬಗ್ಗೆ ತನ್ನ ಅನುಭವಗಳನ್ನು ತೆರೆದಿಟ್ಟರು. ಮಕ್ಕಳು ದೇಶ ಸೇವೆಯ ಕಾಯಕದಲ್ಲಿ ತೊಡಗಲು ಪ್ರೇರೇಪಿಸಿದರು. ಮಕ್ಕಳೊಂದಿಗೆ ತನ್ನ ವೃತ್ತಿ ಜೀವನದ ಬಗ್ಗೆ ಅನುಭವಗಳನ್ನು ಹಂಚಿಕೊಂಡರು.

ಸಂವಿಧಾನದ ಪೀಠಿಕೆಯನ್ನು ತುಳು ಭಾಷೆಯಲ್ಲಿ ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು


ಶಾಲಾ ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಶಾಲಾ ಅತಿಥಿ ಶಿಕ್ಷಕಿ ಭವ್ಯ ಧನ್ಯವಾದವನ್ನು ಸಲ್ಲಿಸಿದರು. ಬಂಟ್ವಾಳ ತಾಲೂಕಿನ ನಯನಾಡು ಎಂಬಲ್ಲಿ ನಯನ್ ಬೇಕರಿ ಮಾಲಕರಾದ ಮೆಲ್ವಿಸ್ಟರ್ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಿದರು.

Related posts

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

Suddi Udaya

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಪ್ರೇಮನಾಥ ಹೆಗಡೆ, ಸಿದ್ದಾರ್ಥ ರವರಿಂದ ಕಾಯರ್ತ್ತಡ್ಕ ಹಿ.ಪ್ರಾ. ಶಾಲೆಗೆ ಅನ್ನ ಬಡಿಸುವ ಗಾಡಿ ಕೊಡುಗೆ

Suddi Udaya

ಲಾಯಿಲ ಬೀಕರ ಗಾಳಿ ಮಳೆಗೆ ಪುತ್ರಬೈಲಿನಲ್ಲಿ ಮನೆಗೆ ತೆಂಗಿನ ಮರ ಬಿದ್ದು ಹಾನಿ

Suddi Udaya

ಎಕ್ಸೆಲ್ ನ ವಿದ್ಯಾರ್ಥಿಗಳು ಬನಾರಸ್ ಹಿಂದೂ ವಿ.ವಿ, ಎ ಐ ಐ ಎಂ ಎಸ್ ಭೋಪಾಲ್ ಸೇರಿ, ದೇಶದ ಅತ್ಯುನ್ನತ ಮೆಡಿಕಲ್ ಕಾಲೇಜುಗಳಲ್ಲಿ ಓದಿಗೆ ಆಯ್ಕೆ

Suddi Udaya

ಕಣಿಯೂರು ಗ್ರಾ.ಪಂ. ನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿರವರಿಂದ ಮತದಾನ

Suddi Udaya
error: Content is protected !!