September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ : ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯೆಯ ಮನೆ ದುರಸ್ತಿ ಕಾರ್ಯ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು

ಕಡಿರುದ್ಯಾವರ ಗ್ರಾಮದ ಕಾನರ್ಪ ಒಕ್ಕೂಟ ಅನ್ನಪೂರ್ಣೇಶ್ವರಿ ಸಂಘದ ಸದಸ್ಯರಾದ ಲೀಲಾವತಿರವರಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಶನ ಸಿಗುತ್ತಿದ್ದು ಇವರ ಮನೆಗೆ ಯೋಜನಾಧಿಕಾರಿ ಸುರೇಂದ್ರ ಭೇಟಿ ನೀಡಿ ನಂತರ ಅವರು ವಾಸ ಇರುವ ಮನೆಯು ಸೋರುತ್ತಿದ್ದು ಯೋಜನಾಧಿಕಾರಿಯವರು ಶೌರ್ಯ ವಿಪತ್ತು ಘಟಕದಿಂದ ಸರಿ ಮಾಡಿಸಿಕೊಡುವ ಭರವಸೆ ನೀಡಿದರು.

ಈ ವೇಳೆ ಕಡಿರುದ್ಯಾವರ ಕುಕ್ಕಾವು ಶೌರ್ಯ ವಿಪತ್ತು ಘಟಕಕ್ಕೆ ವಲಯದ ಮೇಲ್ವಿಚಾರಕರಾದ ಜನಾರ್ಧನ್ ಘಟಕಕ್ಕೆ ಮಾಹಿತಿ ತಿಳಿಸಿದರು ಹಾಗಾಗಿ ಕುಕ್ಕಾವು ಘಟಕದ ಸಂಯೋಜಕರಾದ ರಶ್ಮಿ ಘಟಕದ ಪ್ರತಿನಿಧಿ ಲೋಕೇಶ್ ರವರು ಹಾಗೂ 10 ಮಂದಿ ಸ್ವಯಂಸೇವಕರನ್ನು ಸೇರಿಸಿಕೊಂಡು ಜೂ.7 ರಂದು ಲೀಲಾವತಿಯವರಿಗೆ ಕುಕ್ಕಾವು ಘಟಕದವರು ಮನೆಯ ಮೇಲಿನ ಹಂಚುಗಳನ್ನು ಕೆಳಗಿಳಿಸಿ ಸ್ವಲ್ಪ ಬೇರೆ ಕಡೆಯಿಂದ ಹಂಚುಗಳನ್ನು ತಂದು ಮನೆ ಸೋರದಂತೆ ರಿಪೇರಿ ಮಾಡಿದರು.

ಶ್ರಮದಾನದಲ್ಲಿ ಲೋಕೇಶ್, ದಾಮೋದರ, ಜಯಾನಂದ, ಸುರೇಶ್, ಯೋಗೇಶ್ ಬಾನಟ್ಟು, ಲಕ್ಷ್ಮಣಗೌಡ, ವಿಶ್ವನಾಥ, ರಾಜೇಶ್ ಏನ್ ಆರ್, ಗೀತಾ,ಭಾರತಿ ಹಾಗೂ ಅಕ್ಕಪಕ್ಕದ ಮನೆಯವರು ಕೂಡ ನಮ್ಮ ಜೊತೆ ಕೈಜೋಡಿಸಿದ್ದಾರೆ.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಲ್ ಚೇರ್ ವಿತರಣೆ

Suddi Udaya

ಕುವೆಟ್ಟು: ಮಹಮ್ಮಾಯಿ ದೇವಿಯ ಮಾರಿ ಪೂಜೆ ಹಾಗೂ ಗುಳಿಗ ದೈವದ ನೇಮೋತ್ಸವ

Suddi Udaya

ಸುಲ್ಕೇರಿ ನಾಯಿದಗುರಿ ಅಂಗನವಾಡಿ ಕೇಂದ್ರಕ್ಕೆ ಚಪ್ಪಲ್ ಇಡುವ ಸ್ಟ್ಯಾಂಡ್ ಕೊಡುಗೆ

Suddi Udaya

ನಡ ಅಂತ್ರಾಯ ಗುಂಡಿಗೆ ಸ್ನಾನಕ್ಕೆ ಬಂದಿದ್ದ ನಾಲ್ವರಲ್ಲಿ ಓವ೯ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

Suddi Udaya

ಧರ್ಮಸ್ಥಳ : ನಡುಗುಡ್ಡೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್

Suddi Udaya

ಬೆಳ್ತಂಗಡಿ: ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಟಿ.ಡಿ ರಾಘವೇಂದ್ರರವರ ಮಾತೃಶ್ರೀ ನಾಗರತ್ನಮ್ಮ ನಿಧನ

Suddi Udaya
error: Content is protected !!