March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕೊಕ್ಕಡ ಮಂಡಲ ವತಿಯಿಂದ ಹಿಂದೂ ಸಂಗಮ

ಕೊಕ್ಕಡ: ಹಿಂದೂ ಸಂಗಮ ಆಯೋಜನಾ ಕೊಕ್ಕಡ ಮಂಡಲ ವತಿಯಿಂದ ಹಿಂದೂ ಸಂಗಮ ಜ.25 ರಂದು ಕೊಕ್ಕಡದ ಸಂಕ್ರಾಂತಿ ಮೈದಾನದಲ್ಲಿ ನಡೆಯಿತು.

ಕೊಕ್ಕಡ ಮತ್ತು ಪಟ್ರಮೆ ಮಂಡಲ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮವು ಕೊಕ್ಕಡದ ಜಂಕ್ಷನ್ ನಿಂದ ಪುಟಾಣಿ ಮಕ್ಕಳ ವಿವಿಧ ವೇಷ ಗಳೊಂದಿಗೆ ಸ್ಥಳೀಯ ಭಜನಾ ತಂಡದಿಂದ ಕುಣಿತಾ ಭಜನೆ ಹಾಗೂ ಮಹಿಳೆಯರಿಂದ ಪೂರ್ಣ ಕುಂಭದೊಂದಿಗೆ ಭವ್ಯ ಶೋಭಾ ಯಾತ್ರೆಯು ನಡೆಯಿತು.

ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ರವರು ಗೋ ಪೂಜೆ ನೆರವೇರಿಸಿ ದೀಪಪ್ರಜ್ವಲಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಹಿಂದೂ ಸಮಾಜವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ವಕ್ತಾರರಾದ ಅಚ್ಚುತ ನಾಯಕ್ ಪುತ್ತೂರು ಮಾತನಾಡಿ ಹಿಂದುತ್ವ ಎಂದರೇನು? ಹಿಂದೂ ಹೇಗಿರಬೇಕು , ಜಾತಿ ಬೇಧ ಮರೆತು ಒಂದಾದಲ್ಲಿ ಮಾತ್ರ ಹಿಂದುತ್ವ ಉಳಿಯಲು ಸಾಧ್ಯ ಎಂದರು. ಸಭಾ ಅಧ್ಯಕ್ಷತೆಯನ್ನು ವಹಿಸಿದ ಡಾ. ತಾರಾಗಣೇಶ್ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿ ಬಾಲಕೃಷ್ಣ ನೈಮಿಷ ಕೊಕ್ಕಡ , ರುಕ್ಮಯ ಮಡಿವಾಳ ಕೊಕ್ಕಡ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು,

ರುಕ್ಮಯ ಮಡಿವಾಳ ಸ್ವಾಗತಿಸಿ, ಅಶ್ವಿನಿ ಓಣಿತಾರು ಧನ್ಯವಾದವಿತ್ತರು.

Related posts

ಚಾರ್ಮಾಡಿ: ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಕುಂಕುಮಾರ್ಚನೆ; ದುರ್ಗ ನಮಸ್ಕಾರ ಪೂಜೆ

Suddi Udaya

ಒಕ್ಕಲಿಗ ಮುಖಂಡರಿಂದ ಆದಿಚುಂಚನಗಿರಿ ಶ್ರೀಗಳ ಭೇಟಿ

Suddi Udaya

ಬಂದಾರು ಗ್ರಾ.ಪಂ. ಜಮಾಬಂದಿ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಯುವ ಸಾಹಿತಿ ಚಂದ್ರಹಾಸ ಕುಂಬಾರ ಹಾಗೂ ರಾಜ್ಯ ಮಟ್ಟದ ವೆಟ್ ಲಿಫ್ಟಿಂಗ್ ನಲ್ಲಿ ಅವಳಿ ಚಿನ್ನದ ಪದಕ ವಿಜೇತೆ ಕು. ತೇಜಶ್ವಿನಿ ಪೂಜಾರಿ ರವರಿಗೆ ಸನ್ಮಾನ

Suddi Udaya

ತೆಲಂಗಾಣ ಚುನಾವಣಾ ವಾರ್ ರೂಮ್ ಸಂಯೋಜಕರಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಮಚ್ಚಿನ: ಬಂಗೇರಕಟ್ಟೆಯಲ್ಲಿ ರಸ್ತೆ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ

Suddi Udaya

ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!