ಬೆಳ್ತಂಗಡಿ: ಸುಮಾರು ದಶಕಗಳಿಂದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ವಿವಿಧ ಸಭೆ ಸಮಾರಂಭಗಳ ಕಾರ್ಯಕ್ರಮ ನಿರೂಪಕನಾಗಿ ತನ್ನ ವಿಶಿಷ್ಟ ಸ್ಪಷ್ಟ ಕಂಠ ಸಿರಿಯೊಂದಿಗೆ, ತನ್ನದೇ ಆದ ಮಾತಿನ ಶೈಲಿಯ ಮೂಲಕ ಕಾರ್ಯಕ್ರಮ ನಿರೂಪಣೆಗೆ ವಿಶೇಷ ಮೆರುಗನ್ನು ತಂದು ಕೊಟ್ಟ ನಿರೂಪಕ ಹಾಗೂ ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕೊಕ್ರಾಡಿ ಇವರ ಉತ್ತಮ ನಿರೂಪಣಾ ಕೌಶಲ್ಯವನ್ನು ಗುರುತಿಸಿ, ಕನ್ನಡದ ಖ್ಯಾತ ನಿರೂಪಕಿ ಅಪರ್ಣ ರವರ ಸಂಸ್ಮರಣೆಯಲ್ಲಿ ಸ್ಪಾರ್ಕ್ ಅಕಾಡೆಮಿ (ರಿ) ಬೆಂಗಳೂರು, ಸೂರ್ಯ ಫೌಂಡೇಶನ್ (ರಿ) ಬೆಂಗಳೂರು ಇವರು ಲಕ್ಷ್ಯ ಕೆರಿಯರ್ ಅಕಾಡೆಮಿ (ರಿ ) ಬೆಂಗಳೂರು ಇದರ ಆವರಣದಲ್ಲಿ ” ನಿರೂಪಣಾ ರತ್ನ ರಾಜ್ಯ ಪ್ರಶಸ್ತಿ -2026 ನ್ನು ನೀಡಿ ಗೌರವಿಸಿ ಸನ್ಮಾನಿಸಿರುತ್ತಾರೆ.






