September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಮಚ್ಚಿನ: ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎಸ್ ಡಿ ಎಮ್ ಸಿ ಕಾರ್ಯಾಧ್ಯಕ್ಷ ರುಕ್ಮಯ ಬಾಳಿಂಜರವರು ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ಚಿತ್ರಿಸಿರುವ ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದ ಮುಂದೆ ಕನ್ನಡ ಮತ್ತು ಆಂಗ್ಲ ಭಾಷೆ ಎರಡರಲ್ಲೂ ಕಂಠಪಾಠವಾಗಿರುವ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು.

ಈ ಸಂಸತ್ತು ಭವನವನ್ನು ಶಿಕ್ಷಕರ ಮಾರ್ಗದರ್ಶನದೊಂದಿಗೆ 9ನೇ ತರಗತಿಯ ವಿದ್ಯಾರ್ಥಿಗಳು ಸಗಣಿ, ಸುಣ್ಣ, ಜಂಬಿಟ್ಟಿಗೆ ಮಣ್ಣಿನ ಪುಡಿ, ಕೆಂಪು ಮಣ್ಣು, ಮರಳು, ಸಣ್ಣ ಕಲ್ಲು, ರಂಗೋಲಿ ಪುಡಿ ಬಳಸಿ ಚಿತ್ರಿಸಿದರು. ಸಭಾ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿ ಪಡೆದ ಮಕ್ಕಳಿಗೆ ದಾನಿ ಶ್ರೀಧರ ಭಟ್ ರವರು ನಗದು ನೀಡಿ ಪ್ರೋತ್ಸಾಹಿಸಿದರು. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ವಿಷಯ ಶಿಕ್ಷಕರು ಸನ್ಮಾನಿಸಿದರು. ಅದೇ ರೀತಿ ಕ್ರೀಡೆ, ಹಾಜರಾತಿ, ಕಲಿಕೆ, ಕ್ರಿಯಾಶೀಲತೆ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ಸುಭಾಶ್ಚಂದ್ರ ಪೂಜಾರಿ, ಲೀನಾಸೆರಾವೋ, ದುರ್ಗಾಪ್ರಸಾದ್, ಚಂದಪ್ಪ ಪೂಜಾರಿ, ಅವಿನಾಶ, ಕಚೇರಿ ಸಿಬ್ಬಂದಿ ತೇಜಸ್ವಿ ಮತ್ತು ಎಸ್.ಡಿ,ಎಮ್.ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಶಿಕ್ಷಕರಾದ ವೆಂಕಪ್ಪ ಬಿ ಕಾರ್ಯಕ್ರಮ ನಿರೂಪಿಸಿದರು . ಅಧ್ಯಕ್ಷೀಯ ಭಾಷಣದ ಬಳಿಕ ಗಣಿತ ಶಿಕ್ಷಕ ಸುರೇಶ ವಂದಿಸಿದರು.

Related posts

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ನವಜೀವನೋತ್ಸವ ಕಾರ್ಯಕ್ರಮ: ಪಾನ ಮುಕ್ತ ಗ್ರಾಮ ಸಾಧಕರಿಗೆ ಗೌರವ-ಜಾಗೃತಿ ಅಣ್ಣ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ

Suddi Udaya

ಮುಂಡಾಜೆ ಪ್ರೌಢಶಾಲೆ ಮುಂಡಾಜೆ ಶಾಲೆಗೆ ಶೇ. 95.28

Suddi Udaya

ಕಣಿಯೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶ್ವ ಯೋಗ ದಿನ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಶಾಸಕ ಹರೀಶ್ ಪೂಂಜರಿಂದ ಪ.ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ ರವರಿಗೆ ಮನವಿ

Suddi Udaya

ವಾಣಿ ಕಾಲೇಜಿನ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya
error: Content is protected !!