September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲೇಖಕಿ ಪದ್ಮಲತಾ ಮೋಹನ್ ನಿಡ್ಲೆರವರ ಎಲ್ ಬಿಡಬ್ಲೂ ಮತ್ತು ವಿದ್ಯಾಸಾರಥಿ ಮತ್ತು ಮನೋಸಾರಥಿ ಪುಸ್ತಕ ಬಿಡುಗಡೆ

ಬೆಳ್ತಂಗಡಿ: ಬಿ‌ಎಂ ಶ್ರೀ ಪ್ರತಿಷ್ಟಾನ ಬೆಂಗಳೂರಿದಲ್ಲಿ ಲೇಖಕಿ ಪದ್ಮಲತಾ ಮೋಹನ್ ನಿಡ್ಲೆ ಇವರ ಎಲ್ ಬಿ ಡಬ್ಲ್ಯೂ ಮತ್ತು ವಿದ್ಯಾಸಾರಥಿ ಮತ್ತು ಮನೋಸಾರಥಿ ( ನಿರಂತರ ಸಂಸ್ಥೆ ಪ್ರಕಾಶಿಸಿದ) ಎರಡು ಪುಸ್ತಕಗಳು ಲೋಕಾರ್ಪಣೆಗೊಂಡವು. ವಿದ್ಯಾಸಾರಥಿ ಮತ್ತು ಮನೋಸಾರಥಿ ಪುಸ್ತಕವನ್ನು ಉಪನ್ಯಾಸಕಿಯೂ ಆಗಿರುವ, ಲೇಖಕಿ ಪದ್ಮಲತಾ ಮೋಹನ್ ಅವರ ವಿದ್ಯಾರ್ಥಿಗಳ ಕೈಯಲ್ಲೇ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು.

ಪುಸ್ತಕ ವಿಮರ್ಶೆ ಮಾಡಿದ ,ವಿಜಯವಾಣಿ ಡೆಪ್ಯೂಟಿ ಎಡಿಟರ್ ನಾಗರಾಜ ಇಳೆಗುಂಡಿಯವರು ಎಲ್ ಬಿಡಬ್ಲೂ ಕಾದಂಬರಿ ಕೇವಲ ಕ್ರಿಕೆಟ್ ಆಟ ಮಾತ್ರವಲ್ಲದೇ ಬೇರೆ ಯಾವುದೇ ವೃತ್ತಿ ಇರಲಿ, ವೃತ್ತಿ ಜೊತೆಗೆ ವೈಯುಕ್ತಿಕ ಜೀವನವನ್ನು ಹೇಗೆ ಸಮತೋಲನದಲ್ಲಿ ತೆಗೆದುಕೊಂಡು ಹೋಗಬೇಕೆಂಬ ತತ್ವವನ್ನು ಹೇಳಿದೆ ಎಂದರು. ‌ವಿದ್ಯಾಸಾರಥಿ ಮತ್ತು ಮನೋಸಾರಥಿ ಇಂದಿನ ಬದಲಾಗುತ್ತಿರುವ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಶಿಕ್ಷಕರು ಪೋಷಕರು ಓದಲೇಬೇಕಾದ ಪುಸ್ತಕವೆಂದರು.

ಪತ್ರಕರ್ತ, ಸಿ ಇ ಓ ಕ್ಯೂ ಪ್ರಚಾರ ಅಲ್ಮಾ ಮೀಡಿಯಾ ಸ್ಕೂಲ್ ಗೌರೀಶ್ ಅಕ್ಕಿಯವರು (ಮುಖ್ಯ ಅತಿಥಿ) ಎಐ ಯುಗದಲ್ಲಿ ಚ್ಯಾಟ್ ಜಿಪಿಟಿನೇ ಕವನ ಕಥೆಗಳನ್ನು ಬರೆಯುತ್ತಿರುವುದರಿಂದ ಇಂದಿನ ಬರಹಗಾರರರು ವಿಶೇಷವಾಗಿ ಎಐ ಗಿಂತಲ್ಲೂ ಮೇಲ್ಮಟ್ಟದಲ್ಲಿ ಯೋಚಿಸುವ ಅಗತ್ಯ ಈಗಿನ ಕಾಲಘಟ್ಟದಲ್ಲಿ ಇದೆ. ಪೋಷಕರು ಮಕ್ಕಳನ್ನು ಓದಿಸಲು ಪ್ರೇರೇಪಿಸಲು ತಾವೇ ಪುಸ್ತಕ ಓದುವ ಮೂಲಕ ಮಾದರಿಯಾಗಬೇಕು ಎಂದು ಹೇಳಿದರು. ಡಾ ಬೈರಮಂಗಲ ರಾಮೇಗೌಡರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಬರಹಗಾರರು ತಮ್ಮ‌ ಓದುಗರ ಮನಸ್ಥಿತಿ ಏನು ಅವರಿಗೆ ಏನು ಬೇಕು ?ಎಂಬ ಅರಿವಿನೊಂದಿಗೆ ಬರೆಯಬೇಕಾಗಿದೆ ಎಂದರು ಹಾಗೇ ತಮ್ಮ ನೈಜ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಇಂದಿನ‌ ಮಕ್ಕಳ‌ ಜೀವನ ಶೈಲಿ ಬಗ್ಗೆ ಖೇದ ವ್ಯಕ್ತಪಡಿಸಿದರು.

ವಿದ್ಯಾಸಾರಥಿ ಮತ್ತು ಮನೋಸಾರಥಿಯಂತಹ ಪುಸ್ತಕ ಇಂದಿನ ವಿದ್ಯಾರ್ಥಿಗಳು ಅಗತ್ಯವಾಗಿ ಓದಲೇಬೇಕಾದ ಪುಸ್ತಕ ವೆಂದರು. ಲೇಖಕಿ ಪದ್ಮಲತಾ ಮೋಹನ್ ತಮ್ಮ ಬರಹಕ್ಕೆ ಓದುಗರೇ ಸ್ಪೂರ್ತಿ ಪುಸ್ತಕವನ್ನು ಕೊಂಡು ಓದುವ ಓದುಗರೇ ಲೇಖಕರ ಶಕ್ತಿ ಎಂದು ಉಲ್ಲೇಖಿಸಿದರು. ನಿರಂತರ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಲೇಖಕಿಯ ನಾಲ್ಕಕನೇ ಮತ್ತು ಐದನೇ ಪುಸ್ತಕಗಳ ಈ ಸಂದರ್ಭದಲ್ಲಿ ಪದ್ಮಲತಾ ಮೋಹನ್ ರನ್ನು ಪ್ರಕಾಶಕರು ಗೌರವಿಸಿದರು.
ಕುಮಾರಿ ಅಭಿಜ್ಞಾ ಎಂ‌ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಅಂಭುಜಾಕ್ಷಿ ಬಿರೇಶ್ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಲೇಖಕಿ ಮಾನಸ ಕೆ.ಕೆ ಸ್ವಾಗತಿಸಿದರು. ಪ್ರವೀಣ್ ಜಗಾಟ ವಂದಿಸಿದರು. ಬಾಲಮುರಳಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಕೃತಿಗಳು ಎಲ್ ಬಿ ಡಬ್ಲೂ ಮತ್ತು ವಿದ್ಯಾಸಾರಥಿ‌ ಮತ್ತು ಮನೋಸಾರಥಿ ಇದೀಗ ಮಾರಾಟಕ್ಕೆ ಲಭ್ಯವಿದೆ
ಮೂಲತಃ 150+150= 300 ಬೆಲೆಯ ಪುಸ್ತಕಗಳು ಡಿಸ್ಕೌಂಟ್ ದರದಲ್ಲಿ (120+120)= 240+ 40 postal charge= 280 ಕೆಲವು ದಿನಗಳು ದೊರಕುತ್ತವೆ. ನಿಮ್ಮ‌ಪ್ರತಿಗಾಗಿ‌ ಸಂಪರ್ಕಿಸಿರಿ 9448332553.

Related posts

ಇಂದಬೆಟ್ಟು: ಪಿಲಿಕಜೆ ನಿವಾಸಿ ಓಬಯ್ಯ ಗೌಡ ನಿಧನ

Suddi Udaya

ಪಡಂಗಡಿ: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ನಿಧನ

Suddi Udaya

ಕಾಂಗ್ರೆಸ್ ಚುನಾವಣಾ ಪೂರ್ವ ತಯಾರಿ ಮತ್ತು ಕಾರ್ಯಕರ್ತರ ಸಭೆ

Suddi Udaya

ಕಕ್ಕಿಂಜೆ ರಸ್ತೆಯ ಮಧ್ಯೆ ಕೆಟ್ಟು ನಿಂತ ಲಾರಿ: ಒಂದು ಗಂಟೆಗಿಂತ ಅಧಿಕ ಕಾಲ ಟ್ರಾಫಿಕ್ ಜಾಮ್

Suddi Udaya

ಕಳೆoಜ ಗ್ರಾಮಸ್ಥರ ಮನವಿಗೆ ಶಾಸಕ ಹರೀಶ್ ಪೂಂಜರಿಂದ ತಕ್ಷಣ ಸ್ಪಂದನೆ : ಕುದ್ರಾಯ ಕಕ್ಕಿಂಜೆ ಮುಖ್ಯ ರಸ್ತೆಯ ಮರಕ್ಕಡದಿಂದ ಮಿಯ್ಯಾರು ತನಕ ರಸ್ತೆ ಕಾಮಗಾರಿಗೆ ಚಾಲನೆ

Suddi Udaya

ಪ್ರಸಿದ್ಧ ಗುಜರಾತ್ ಉದ್ಯಮಿ ಶಶಿಧ‌ರ್ ಶೆಟ್ಟಿ ನವಶಕ್ತಿ ಯವರಿಗೆ ಮಾತೃ ವಿಯೋಗ

Suddi Udaya
error: Content is protected !!