September 24, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಕಾನೂನು ಅರಿವು ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ, ವಕೀಲರ, ಸಂಘ (ರಿ) ಬೆಳ್ತಂಗಡಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ, ಬಂಟ್ವಾಳ ಮತ್ತು ಪೊಲೀಸ್ ಇಲಾಖೆ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವು ಜ.28ರಂದು ಬೆಳ್ತಂಗಡಿ ಎ.ಪಿ.ಎಂ.ಸಿ ಆವರಣದಲ್ಲಿ ಜರುಗಿತು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಬೆಳ್ತಂಗಡಿ ತಾ.ಕಾ.ಸೇ.ಸ. ಅಧ್ಯಕ್ಷ ಮನು ಬಿ.ಕೆ.ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಈ ದೇಶದ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ದೇಶದ ಕಾನೂನುಗಳನ್ನು ಗೌರವಿಸುವುದು ಮತ್ತು ಪಾಲಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಕಾನೂನಿನ ಮಹತ್ವವನ್ನು ತಿಳಿಸಿದರು.

ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್ ಕೆ. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಸಾಮಾನ್ಯ ಜನರಿಗೆ ರಕ್ಷಣೆ ನೀಡುವ ಉದ್ದೇಶವೇ ಮೋಟಾರು ಕಾನೂನು ಕಾಯ್ದೆ. ಕೆಲವು ಸಂದರ್ಭಗಳಲ್ಲಿ ಭಯ ಪಡಿಸುವ ಕಾನೂನು ಕೂಡ ಅಗತ್ಯ ಇರುತ್ತದೆ. ಮನುಷ್ಯನಿಗೆ ಮನಸ್ಸಿಗಿಂತ ದೊಡ್ಡ ಜಡ್ಜ್ ಬೇರೆ ಇಲ್ಲ ಎಂದು ರಸ್ತೆ ಸುರಕ್ಷತಾ ಕುರಿತು ಕಾನೂನು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೋ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಉಪ ನಿರೀಕ್ಷಕ ಕಿಶೋರ್, ಬೆಳ್ತಂಗಡಿ ಸಹಾಯಕ ಸರಕಾರಿ ಅಭಿಯೋಜಕರಾದ ದಿವ್ಯರಾಜ್, ಬಕ್ಕಪ್ಪ ಹೆಚ್ ಭಾಗವಹಿಸಿದರು. ಕಾರ್ಯಕ್ರಮವನ್ನು ಸುಧಾಮಣಿ ಯಶಸ್ವಿಯಾಗಿ ನಿರೂಪಿಸಿದರು.

Related posts

ಬಜಿರೆ ಗ್ರಾಮದ ಪೆರ್ಮನು ಬೆಳ್ಳಿಬೆಟ್ಟು ಎಂಬಲ್ಲಿ ನಡೆದ ದುರ್ಘಟನೆ ವಿದ್ಯುತ್ ತಂತಿ ಸ್ಪರ್ಶಿಸಿ ವೀರಪ್ಪ ಎಂಬವರು ಮೃತ್ಯು

Suddi Udaya

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ-9 ಸ್ಥಾನ,‌ ಕಾಂಗ್ರೆಸ್ ಬೆಂಬಲಿತ -3 ಸ್ಥಾನ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಬಾರಿಕೆ ವಳಾಲ್ ಬಸದಿಯಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ : ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಮಠದ ವತಿಯಿಂದ ಗೌರವ

Suddi Udaya

ಸಿರಿಯ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಗೆ ನಟಿ ಪ್ರೇಮಾ ಭೇಟಿ

Suddi Udaya

ವಿಶೇಷ ಚೇತನ ಮಕ್ಕಳಿಗೆ ನಲ್ಮೆ, ಸಂಯಮದಿಂದ ವಿಶೇಷ ಭವಿಷ್ಯ ರೂಪಿಸೋಣ: ಡಿ. ವೀರೇಂದ್ರ ಹೆಗ್ಗಡೆ

Suddi Udaya

ಉಜಿರೆಯಲ್ಲಿ “ಸ್ವಚ್ಛೋತ್ಸವ” ಬೃಹತ್ ಸ್ವಚ್ಛತಾ ಅಭಿಯಾನ

Suddi Udaya
error: Content is protected !!