37.9 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು: ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಭೇಟಿ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಡಾ| ವೀಣಾ ಬನ್ನಂಜೆ ರವರಿಂದ ಜ.28ರಂದು ನಡೆದ ಆರನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರು ಭೇಟಿ ನೀಡಿದರು.

ಡಾ| ವೀಣಾ ಬನ್ನಂಜೆ ರವರಿಂದ ನಡೆದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯನ್ನು ಸಂಪೂರ್ಣವಾಗಿ ಆಲಿಸಿ ನಂತರ ದೇವಸ್ಥಾನ ವತಿಯಿಂದ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ., ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಉಪಾಧ್ಯಕ್ಷೆ ತನುಜಾ ಶೇಖರ್, ಸಂಚಾಲಕ ಮೋಹನ್ ಬಂಗೇರ, ಸೂರ್ಯನಾರಾಯಣ ರಾವ್, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಮೊರ್ತಾಜೆ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಲ| ಧರ್ಣಪ್ಪ ಮೂಲ್ಯ ಕಾಯರ್ದಡಿ, ಕಾರ್ಯದರ್ಶಿ ತಿಮ್ಮಪ್ಪ ಜಿ ಗೋಳ್ತಾರ, ಕೋಶಾಧಿಕಾರಿ ಬಿ ಉಮೇಶ್ ಪ್ರಭು ಹಡೀಲು, ಸದಸ್ಯರಾದ ಎ.ಬಿ ಉಮೇಶ್ ಅತ್ಯಡ್ಕ, ಹರೀಶ್ ಕೆ ಕಾರಿಂಜ, ತನಿಯಪ್ಪ ನಲ್ಕೆ ಕಿರ್ನಡ್ಕ, ಎನ್ ಗಣೇಶ್ ಗೌಡ ನೆಲ್ಲಿಪಲ್ಕೆ, ವಾರ್ಷಿಕ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸಮಿತಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಮಲ್ನಾಡ್ ಐಕಾನ್ ಅಶ್ವತ್ಥ್ ಎಸ್.ಎಲ್. ಅವರಿಗೆ ಒಕ್ಕಲಿಗ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ವಕೀಲರಾದ ಲಕ್ಷ್ಮೀ ಅಯ್ಯಂಗಾರ್ ಭೇಟಿ

Suddi Udaya

ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಬೇಸಿಗೆ ಶಿಬಿರ ಕಲಾಬ್ದಿ-2025 ಉದ್ಘಾಟನೆ

Suddi Udaya

ಚಾರ್ಮಾಡಿಯಲ್ಲಿ ಮತದಾನ ವಿಳಂಬ : ಡಿ ಮಸ್ಟರಿಂಗ್ ಕೇಂದ್ರ ಕ್ಕೆ ಹೊರಟ ವಾಹನ ತಡೆಗಟ್ಟಿದ ಜನರ‌ ಮೇಲೆ ಪೊಲೀಸರ ಲಾಠಿಚಾರ್ಜ್ : ಹಲವಾರು ಮಂದಿಗೆ ಗಾಯ

Suddi Udaya

ಬಳಂಜ ಎಲ್ಯೋಟ್ಟು ರಾಜು ಪೂಜಾರಿ-ಶ್ರೀಮತಿ ಕಮಲ ಹಾಗೂ ಬಾಬು ಪೂಜಾರಿ-ಶ್ರೀಮತಿ ಪ್ರೇಮಾ ದಂಪತಿಗಳ 50ನೇ ವರ್ಷದ ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ

Suddi Udaya

ಸುಲ್ಕೇರಿ ಮೊಗ್ರು ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಡ್ರಾಯಿಂಗ್ ಪುಸ್ತಕ ವಿತರಣೆ

Suddi Udaya
error: Content is protected !!