September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ವಾಣಿ ಕಾಲೇಜು: ಎನ್ಎಸ್ಎಸ್ ವಾರ್ಷಿಕ ದೈನಂದಿನ ಚಟುವಟಿಕೆಗಳ ಸಮಾರೋಪ ಸಮಾರಂಭ

ಬೆಳ್ತಂಗಡಿ: ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಿಕೊಳ್ಳುವುದರ ಮೂಲಕ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಬೇಕು ಎಂದು ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮನೋಹರ ಬಳೆಂಜ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ದೈನಂದಿನ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ಹೆತ್ತವರ ಆಶೋತ್ತರಗಳನ್ನು ಈಡೇರಿಸುವಲ್ಲಿ ಮಕ್ಕಳ ಪಾತ್ರ ಮಹತ್ವವಾಗಿದೆ. ಜೀವನದಲ್ಲಿ ಪರಿಶ್ರಮದಿಂದ ತೊಡಗಿಕೊಂಡಾಗ ಭವಿಷ್ಯ ಉತ್ತಮವಾಗುವುದು. ಆಧುನಿಕ ವ್ಯಾಮೋಹಗಳಿಗೆ, ದುಶ್ಚಟಗಳಿಗೆ, ಮಾದಕ ವ್ಯಸನಗಳಿಗೆ, ಸೈಬರ್ ಕ್ರೈಮ್ ಗಳಿಗೆ, ಸಾಮಾಜಿಕ ಜಾಲತಾಣದ ಮೋಸಗಳಿಗೆ ಬಲಿಯಾಗದೆ ಪರಿಶುದ್ಧವಾದ ಜೀವನವನ್ನು ಮಾಡಬೇಕು. ನಾವು ಪುಣ್ಯದ ಕಾರ್ಯಗಳನ್ನು ಮಾಡಿದಾಗ ಅದೇ ರಕ್ಷಣೆಯನ್ನು ನೀಡುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಎನ್ಎಸ್ಎಸ್ ಘಟಕ ನಾಯಕ ತೀರ್ಥೇಶ್, ನಾಯಕಿ ಸುಶ್ಮಿತಾ ಉಪಸ್ಥಿತರಿದ್ದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಸ್ವಾಗತಿಸಿದರು. ಸಹ ಕಾರ್ಯಕ್ರಮಾಧಿಕಾರಿ ಕು.ಶ್ರಾವ್ಯ ಧನ್ಯವಾದವಿತ್ತರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಧ್ಯಾನ ತರಬೇತಿ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧ ಪ್ರತಿಭಟನೆಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸಂಪೂರ್ಣ ಬೆಂಬಲ

Suddi Udaya

ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸಾಧನೆ

Suddi Udaya

ನ.26- ನ.30: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

Suddi Udaya

ಇಂದಬೆಟ್ಟು: ಗಂಗಾಧರ್ ಎಸ್. ರವರ ತೋಟದಲ್ಲಿ ಬೃಹತಾಕಾರದ ಹೆಬ್ಬಾವು ಪತ್ತೆ

Suddi Udaya

ಡಿ.3: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ “ಜನಾಂದೋಲನ ಸಭೆ”: ರಕ್ತದ ಸಹಿಯ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ

Suddi Udaya
error: Content is protected !!