September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು: ಪೆರಿಯಡ್ಕ ಶಾಲಾ ರಜತ ಮಹೋತ್ಸವ: ಪ್ರವೇಶ ದ್ವಾರ ಲೋಕಾರ್ಪಣೆ- ಸಭಾ ಕಾರ್ಯಕ್ರಮ

ಬೆಳಾಲು: ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವದ ಸಭಾ ಕಾರ್ಯಕ್ರಮವು ಜ.31 ರಂದು ನಡೆಯಿತು.

ರಜತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಿರುವ, ದಾನಿಗಳು ಕೊಡುಗೆಯಾಗಿ ನೀಡಿರುವ ಪ್ರವೇಶ ದ್ವಾರ, ಇಂಟರ್ಲಾಕ್, ಸಿಸಿ ಟಿವಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಜಯಣ್ಣ ಗೌಡ ಮಿನಂದೇಲು ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಉಜಿರೆ ಪ್ರಭಾತ್ ಸ್ಟೋರ್ ಮಾಲಕ ಪ್ರವೀಣ್ ಭಟ್, ಬೆಳಾಲು ಈಶ ಎರೇಂಜರ್ಸ್ ಮಾಲಕ ಅರ್ಚನ್ ಗೌಡ, ಬೆಳಾಲು ಗ್ರಾ.ಪಂ.ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸತೀಶ್ ಗೌಡ ಎಳ್ಳುಗದ್ದೆ, ಯಶೋದ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ ಎಸ್., ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಶೈಲೇಶ್ ಕುಮಾರ್ ಡಿ.ಹೆಚ್., ಉಜಿರೆ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ ಕೆ.ಎಂ., ಡೊಂಬಯ್ಯ ಗೌಡ ಕಾವಟೆ, ಬಾಬು ಗೌಡ ಅಲಕೆದಡ್ಡ, ಬಾಲಚಂದ್ರ ಹೊಳ್ಳ ಪೇರಂಪಾಡಿ
ಯಶೋಧರ ಎಸ್.ಕೆ.ಆರ್.ಡಿ.ಪಿ., ಶಿಕ್ಷಕ ವೀರಣ್ಣ ಶೆಟ್ಟಿ, ಚಿತ್ತಾರ ಯುವ ಶಕ್ತಿ ಬಳಗದ ಅಧ್ಯಕ್ಷ ಮಾಧವ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್, ಶಾಲಾ ವಿದ್ಯಾರ್ಥಿ ನಾಯಕಿ ಚಾರ್ವಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯ ಪ್ರಸ್ತಾವಿಸಿ ಸ್ವಾಗತಿಸಿದರು. ಸಹ ಶಿಕ್ಷಕಿ ಜಯಶ್ರೀ ವರದಿ ವಾಚಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಅಂಗನವಾಡಿ ಮಕ್ಕಳಿಂದ ಚಿಣ್ಣರ ಚಿಲಿಪಿಲಿ, ಹಳೆ ವಿದ್ಯಾರ್ಥಿ, ಪೋಷಕರು ಹಾಗೂ ಊರವರಿಂದ ಸಾಂಸ್ಕೃತಿಕ ವೈಭವ, ಶಾಲಾ ಮಕ್ಕಳಿಂದ ನೃತ್ಯ ವೈಭವ, ರಾತ್ರಿ ವಿದ್ಯಾರ್ಥಿಗಳಿಂದ ನಾಟಕ ಸತ್ಯ ಹರಿಶ್ಚಂದ್ರ, ಕಾರ್ಕಳ ತೆಲಿಕೆದ ತೆನಾಲಿ ತಂಡದಿಂದ “ತೆಲಿಕೆದ ಬರ್ಸ” ಕಾಮಿಡಿ 90″ ಪ್ರದರ್ಶನಗೊಳ್ಳಲಿದೆ.

Related posts

ಮಚ್ಚಿನ ಗ್ರಾ.ಪಂ. ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya

ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹ

Suddi Udaya

ಕಾಶಿಪಟ್ಣ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಆಯ್ಕೆ

Suddi Udaya

ಗೇರುಕಟ್ಟೆ ಫ್ರೌಡ ಶಾಲಾ ಹಿಂಬದಿ ಟವರ್ ಬುಡದಲ್ಲಿ ಬೆಂಕಿ ಜ್ವಾಲೆ: ದೊಡ್ಡ ಅನಾಹುತ ತಪ್ಪಿಸಿದ ಸ್ಥಳೀಯ ಯುವಕರ ತಂಡ

Suddi Udaya

ಮೊಬೈಲ್ ಸಂಭಾಷಣೆಯನ್ನು ಅನಧಿಕೃತವಾಗಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಬಗ್ಗೆ ದೂರು

Suddi Udaya

ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ

Suddi Udaya
error: Content is protected !!