26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾಸಿಕ ಸಭೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾಸಿಕ ಸಭೆಯು ರವಿ ಪೂಜಾರಿ ಚಿಲಿಂಬಿ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯದರ್ಶಿ ಡಾ ರಾಜಾರಾಮ್ ಸ್ವಾಗತಿಸಿ ವರದಿಯನ್ನು ಯಾಚಿಸಿದರು. ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ಲೆಕ್ಕಪತ್ರ ವನ್ನು ಮಂಡಿಸಿದರು. ದೇಯಿ ಬೈದೆದಿ ಆಯುರ್ವೇದಿಕ್ ಕೇಂದ್ರದ ಪ್ರಗತಿಯ ಬಗ್ಗೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ ಸಂಕ್ಷಿಪ್ತವಾಗಿ ತಿಳಿಸಿ ಈ ಮಹತ್ಕಾರ್ಯಕ್ಕೆ ಭಕ್ತಾದಿಗಳು ಸ್ಪಂದಿಸಬೇಕೆಂದು ಕರೆ ನೀಡಿದರು.

ಶ್ರೀ ಕ್ಷೇತ್ರದಿಂದ ನಡೆಯುವ ಯಕ್ಷಗಾನದ ಮಾಸಿಕ ವರದಿಯನ್ನು ಮುಖ್ಯ ಸಂಚಾಲಕ ಪ್ರಮಲ್ ಕುಮಾರ್ ಕಾರ್ಕಳ ಸವಿಸ್ತಾರವಾಗಿ ಸಭೆಗೆ ಲೆಕ್ಕಪತ್ರದೊಂದಿಗೆ ತಿಳಿಸಿದರು. ಬರುವ ವರ್ಷದಿಂದ ಕೋಟಿ ಚೆನ್ನಯರ ಹೂವಿನ ಪೂಜೆಯೊಂದಿಗೆ ದರ್ಶನದ ಮುಖಾಂತರ ನಡೆಯುವ ನುಡಿಯಂತೆ ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕ್ರಮಗಳು ಕೆಲಸ ಕಾರ್ಯಗಳು ನಡೆಯಬೇಕೆಂದು ಗೌರವಾಧ್ಯಕ್ಷ ರಾಜಶೇಖರ್ ಕೋಟ್ಯಾನ್ ತಿಳಿಸಿದರು. ಗೌರವಾಧ್ಯಕ್ಷ ಪೀತಾಂಬರ ಹೇರಾಜೆಯವರು ಸಮಯೋಚಿತ ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲಾ ತಾಲೂಕಿನ ವಲಯಗಳಲ್ಲಿ ಯಕ್ಷಗಾನದ ಬಯಲಾಟ ಸಮಿತಿಯನ್ನು ರಚಿಸಬೇಕೆಂದು ಆ ಮುಖಾಂತರ ಹೆಚ್ಚೆಚ್ಚು ಯಕ್ಷಗಾನಗಳು ನಡೆಯಲು ಅವಕಾಶ ಕಲ್ಪಿಸಬೇಕೆಂದು ಸಂಚಾಲಕ ನಿತ್ಯಾನಂದ ನಾವರ ಸಭೆಗೆ ಮನವಿ ಮಾಡಿದರು.

ಗುಜರಾತಿನ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ನಾಸಿಕದ ಉದ್ಯಮಿ ಗಂಗಾಧರ ಅಮೀನ್
ಮುಂಬೈ ಬಿಲ್ಲವ ಸಂಘದ ಗೌರವಾಧ್ಯಕ್ಷ ಎಲ್ ವಿ ಅಮೀನ್, ಮಂಗಳೂರಿನ ಉದ್ಯಮಿ ಊರ್ಮಿಳ ರಮೇಶ್ ಕುಮಾರ್, ಹಾಗೂ ಶ್ರೀಮತಿ ಪ್ರತಿಭಾ ಕುಳಾಯಿ ಯವರನ್ನು ಕ್ಷೇತ್ರದ ಗೌರವ ಮಹಾಪೋಷಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗೌರವಾಧ್ಯಕ್ಷ ಜಯಂತ ನಡುಬೈಲು, ಚಂದ್ರಹಾಸ ಅಮೀನ್ ಗೋವಾ, ಜಯಾನಂದ ಎಂ, ಸುಜಿತ ವಿ ಬಂಗೇರ, ಜೈ ವಿಕ್ರಮ ಕಲ್ಲಾಪು, ಚಂದ್ರಶೇಖರ ಉಚ್ಚಿಲ, ನವೀನ್ ಅಮೀನ್ ಶಂಕರಪುರ ಡಾ. ಸಂತೋಷ್ ಬೈರಂಪಲ್ಲಿ, ನಾರಾಯಣ ಮಚ್ಚಿನ, ರಾಜೇಂದ್ರ ಚಿಲಿಂಬಿ, ಹಾಗೂ ಇತರರು ಹಾಜರಿದ್ದರು.

Related posts

ಸೌತಡ್ಕ ದೇವಳದ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಪಾವಡಪ್ಪ ದೊಡಮನಿ ಕುಟುಂಬ ಸಮೇತರಾಗಿ ಸೌತಡ್ಕ ದೇವಳಕ್ಕೆ ಭೇಟಿ

Suddi Udaya

ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಬೆಳ್ತಂಗಡಿ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ

Suddi Udaya

ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಎಸ್.ಎನ್. ನರಗುಂದ ನೇಮಕ

Suddi Udaya

ಮಲವಂತಿಗೆ: ಗುತ್ಯಡ್ಕದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಟವರ್ ಲೋಕಾರ್ಪಣೆ

Suddi Udaya

ಮಾನವನ ವರ್ತನೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ: ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಬರಾಯಕೆರೆ ಕಪ್ಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು , ಕಂದಾಯ ಇಲಾಖೆ , ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಭೇಟಿ, ಪರಿಶೀಲನೆ

Suddi Udaya
error: Content is protected !!