ಬೆಳ್ತಂಗಡಿ: ವಿಕಸಿತ ಭಾರತ 2047ಕ್ಕೆ ಪೂರಕವಾಗಿರುವ ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಬಜೆಟ್‌ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಇದು ಐತಿಹಾಸಿಕ ಬಜೆಟ್ ಆಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಇವರು ಶ್ಲಾಘಿಸಿದ್ದಾರೆ.
ಕೃಷಿಗೆ ಹೆಚ್ಚಿನ ಹಣಕಾಸನ್ನು ಮೀಸಲಿಡಲಾಗಿದೆ. ಮೂಲ ಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬಡವರು, ರೈತರ ಮತ್ತು ಸಮಗ್ರ ಅಭಿವೃದ್ಧಿಯ ಪರವಾದ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು, ಉದ್ಯೋಗ ಸೃಷ್ಟಿ, ಮತ್ತು ದೇಶದ ಸರ್ವತೋಮುಖ ಪ್ರಗತಿಗೆ ಬಜೆಟ್ ಸಹಕಾರಿಯಾಗಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ರಾಜ್ಯಗಳಿಗೆ ಈ ಬಜೆಟ್ ಪೂರಕವಾಗಿದೆ.
ರೈತರು ಮತ್ತು ಬಡವರ ಪರವಾಗಿದ್ದು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಹಣಕಾಸು ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಭಿವೃದ್ಧಿ ಆಧಾರಿತವಾಗಿದ್ದು ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿರುವುದರಿಂದ ಇದು ಸಮತೋಲಿತ ಬಜೆಟ್ ಆಗಿದೆ. ರಕ್ಷಣಾಕ್ಷೇತ್ರಕ್ಕೆ ಹಿಂದೆಂದಿಗಿಂತ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇಲ್ಲಿ ಪ್ರತಿಫಲಿತವಾಗಿದೆ ಎಂದಿದ್ದಾರೆ.











