ಬೆಳ್ತಂಗಡಿ ತಾಲೂಕು ಬಂಟರ ಸಂಘದ ಗೌರವ ಮಾರ್ಗದರ್ಶಕರಾದ ಶಶಿಧರ ಶೆಟ್ಟಿ ನವಶಕ್ತಿ, ಉದ್ಯಮಿಗಳು ಬರೋಡ ಇವರ ಮಾತೃಶ್ರೀಯವರಾದ ಶ್ರೀಮತಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ “ಕಾಶಿ ಸದನ” ವಸತಿ ಯೋಜನೆಯ ಸಹಾಯ ಹಸ್ತವನ್ನು ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ತಾಲೂಕಿನ 9 ಬಂಟರ ವಲಯಗಳ ತಲಾ ಒಂದೊಂದು ಅಶಕ್ತ ಕುಟುಂಬಗಳಿಗೆ ನೀಡುವುದೆಂದು ನಿರ್ಣಯಿಸಲಾಗಿತ್ತು.
ಜ.31 ಶನಿವಾರದಂದು ಪೂರ್ವಾಹ್ನ 9.30 ಕ್ಕೆ ನಾರಾವಿ ವಲಯ ಕೊಕ್ರಾಡಿ ಗ್ರಾಮದ ಶ್ರೀಮತಿ ಗಿರಿಜಾ ಶೆಟ್ಟಿ ಇವರ ನಿವೇಶನದ ಭೂಮಿ ಪೂಜೆ ನಡೆಯಿತು. ಇದರ ಶಿಲಾನ್ಯಾಸವನ್ನು ಸಂಘದ ಗೌರವ ಮಾರ್ಗದರ್ಶಕರಾದ ಶಶಿಧರ ಶೆಟ್ಟಿ ನವಶಕ್ತಿ ಇವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಸುರೇಶ್ ಶೆಟ್ಟಿ ಸೂರ್ಯಶ್ರೀ, ಉದ್ಯಮಿಗಳು ಹೊಸ್ಮಾರು, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕುಂಟಿನಿ, ಎಂ. ಜಯರಾಮ ಭಂಡಾರಿ ಧರ್ಮಸ್ಥಳ ಸಂಚಾಲಕರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ತಾಲೂಕು ಬಂಟರ ಸಂಘದ ಸಂಘಟನಾ ಸಂಚಾಲಕರಾದ ರಘುರಾಮ ಶೆಟ್ಟಿ ಸಾಧನ ಉಜಿರೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ನವೀನ್ ಶೆಟ್ಟಿ ನ್ಯಾಯವಾದಿಗಳು ಕೊಕ್ರಾಡಿ, ಸಚಿನ್ ಶೆಟ್ಟಿ ಕುರೆಲ್ಯ,ನಾರಾವಿ ವಲಯ ಸಮಿತಿಯ ಕಾರ್ಯದರ್ಶಿ ಶಿವಣ್ಣ ಶೆಟ್ಟಿ, ಕೋಶಾಧಿಕಾರಿ ಜಯ ಶೆಟ್ಟಿ ಪೆರಾಡಿ, ಕೊಕ್ರಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಪವನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಿಕ್ಕಿ ಶೆಟ್ಟಿ ಜಂತಿಗೋಳಿ, ಹಿರಿಯರಾದ ರಾಜು ಶೆಟ್ಟಿ ಪೊನ್ನೆಮಾರಡ್ಡ ಹಾಗೂ ಬಂಟ ಸಮಾಜದ ವಲಯ ಸಮಿತಿ ಮತ್ತು ಗ್ರಾಮ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿರಿಯರಾದ ವಿಶ್ವನಾಥ ಶೆಟ್ಟಿಯವರು ಸ್ವಾಗತಿಸಿದರು ವಲಯ ಸಮಿತಿಯ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಪೆರಾಡಿ ಧನ್ಯವಾದವಿತ್ತರು ಕೊನೆಯಲ್ಲಿ “ಕಾಶಿ ಸದನ” ವಸತಿ ಯೋಜನೆಯ ಫಲಾನುಭವಿಯಾದ ಶ್ರೀಮತಿ ಗಿರಿಜಾ ಶೆಟ್ಟಿಯವರ ಮನೆಯವರು ಬಂದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.











