September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಮೊಟ್ಟೆ ಕೋಳಿ ತರಬೇತಿ ಕಾರ್ಯಾಗಾರ

ಚಾರ್ಮಾಡಿ : ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೃಷಿ ಇಲಾಖೆ ಬೆಳ್ತಂಗಡಿ, ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ)ಚಾರ್ಮಾಡಿ ಮತ್ತು ಗ್ರಾಮ ಪಂಚಾಯತ್ ಚಾರ್ಮಾಡಿ ಇದರ ಸಹಭಾಗಿತ್ವದಲ್ಲಿ ಮೊಟ್ಟೆ ಕೋಳಿ ತರಬೇತಿ ಕಾರ್ಯಗಾರವನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಇದರ ಅಧ್ಯಕ್ಷೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ವಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ವಿದ್ಯುಕ್ತ ಚಾಲನೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದಂತ ಪಶು ವೈದ್ಯಾಧಿಕಾರಿ ಧರ್ಮಸ್ಥಳ ವಲಯ ಡಾ. ಯತೀಶ್ ಮೊಟ್ಟೆ ಕೋಳಿ ಸಾಕಾಣಿಕೆ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಮೊಟ್ಟೆ ಕೋಳಿ ಸಾಕಾಣಿಕೆಯನ್ನು ಮಾಡುತ್ತಿರುವ ಬಿಜು ತಮ್ಮ ಅನುಭವದೊಂದಿಗೆ ಮಾಹಿತಿಯನ್ನು ನೀಡಿದರು.
ತರಬೇತಿ ಕಾರ್ಯಗಾರದಲ್ಲಿ ಗಣೇಶ ಆಡಿಗ ಕೃಷಿ ಅಧಿಕಾರಿ ಬೆಳ್ತಂಗಡಿ ಇವರು ಮಾತನಾಡಿ ಕೃಷಿ ಇಲಾಖೆಯಲ್ಲಿ ದೊರೆಯುವಂತಹ ತರಬೇತಿಯನ್ನು ಪಡೆದುಕೊಂಡು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಂಜೀವಿನಿ ಅಭಿಯಾನ ನಿರ್ವಹಣ ಘಟಕ ತಾಲೂಕು ಪಂಚಾಯತ್ ಬೆಳ್ತಂಗಡಿ ಇದರ ಕಾರ್ಯಕ್ರಮ ವ್ಯವಸ್ಥಾಪಕಿಯಾದ ಪ್ರತಿಮಾ, ಕೃಷಿ ಮ್ಯಾನೇಜರ್ ಬಂಗಾರಪ್ಪ, ವಲಯ ಮೇಲ್ವಿಚಾರಕ ಜಯಾನಂದ್ ಉಪಸಿತರಿದ್ದರು.

ಕಾರ್ಯಕ್ರಮದಲ್ಲಿ ಚಾರ್ಮಾಡಿ ಮತ್ತು ಇತರ ಗ್ರಾಮಗಳಿಂದ ಆಗಮಿಸಿದ ಸ್ವ ಸಹಾಯ ಸಂಘದ ಸದಸ್ಯರು, ರೈತರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮವನ್ನು ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಸಂಘಟಿಸಿ, ಎಂಬಿಕೆ ಕಾರ್ಯಕ್ರಮ ನಿರೂಪಿಸಿ, ಕೃಷಿ ಸಖಿ ಧನ್ಯವಾದವಿತ್ತರು

Related posts

ಕಾಂಗ್ರೆಸ್ ಪಕ್ಷಕ್ಕಾಗಿ ಮಾಡಿದ ತ್ಯಾಗ ಹೋರಾಟಕ್ಕೆ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡಿದೆ: ಮೋಹನ್ ಗೌಡ ಕಲ್ಮಂಜ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಓಟ್ ಚೋರ್ ಗದ್ದಿ ಚೋರ್ ಅಭಿಯಾನ ಹಾಗೂ ಮುಂಡಾಜೆ ಬೂತ್ ಪ್ರಗತಿ ಸಭೆ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ನಿಂದ ಕನ್ಯಾನ ಸದಾಶಿವ ಶೆಟ್ಟಿ ರವರಿಗೆ ಸನ್ಮಾನ

Suddi Udaya

ದಿನಸಿ‌ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ವೇಣೂರು ಪೊಲೀಸರಿಂದ ದಾಳಿ: ಅಂಗಡಿ ಮಾಲೀಕ‌ನ ವಿರುದ್ದ ಕೇಸು ದಾಖಲು

Suddi Udaya

ಅಳದಂಗಡಿ:ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ವೈದ್ಯಕೀಯ ತಪಾಸಣೆ& ರಕ್ತದಾನ ಶಿಬಿರ

Suddi Udaya
error: Content is protected !!