38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಅರಸಿನಮಕ್ಕಿ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

ಅರಸಿನಮಕ್ಕಿ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ.31 ಮತ್ತು ಫೆ. 1ರಂದು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.

ಜ.31ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ , ಮಹಾಪೂಜೆ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ರಂಗಪೂಜೆ ನಡೆಯಿತು.


ಫೆ.1 ರಂದು ಬೆಳಿಗ್ಗೆ ಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ
ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ , , ಉತ್ಸವ ಬಲಿ, ಕಟ್ಟೆ ಪೂಜೆ, ಪ್ರಸಾದ ವಿತರಣೆ ಮಂತ್ರಾಕ್ಷತೆ ನಡೆಯಿತು. ಸಾಯಂಕಾಲ ಊರವರಿಂದ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶ್ರೀ ದುರ್ಗಾ ಫ್ರೆಂಡ್ಸ್ ಬೂಡುಮುಗೇರು ಇವರ ಪ್ರಾಯೋಜಕತ್ವದಲ್ಲಿ ಪೆರ್ಮೆದ ಕಲಾವಿದೆರ್ ಚೇಳ್ಳಾರು ಇವರು ಅಭಿನಯಿಸುವ “ಎನ್ನಿಲೆಕ ಇಜ್ಜೆರ್” ತುಳು ಹಾಸ್ಯಮಯ ನಾಟಕ ಜರುಗಿತು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರು ರಾಜಗೋಪಾಲ ಯಂ. ಪಿ., ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಂಗಾಧರ ಕೆ. ಉಡ್ಯೇರೆ, ಉಪಾಧ್ಯಕ್ಷ ಪದ್ಮಯ್ಯ ಗೌಡ ಉಡ್ಯೇರೆ, ಕಾರ್ಯದರ್ಶಿ ಟಿ. ರವಿಚಂದ್ರ ರಾವ್ ಅಂಗಡಿತೋಟ, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ ಅರಸಿನಮಕ್ಕಿ, ಅರ್ಚಕರಾದ ರಾಮಕೃಷ್ಣ ರಾವ್, ಅರವಿಂದ ಭಿಡೆ ಹಾಗೂ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

Suddi Udaya

ಕೊಕ್ಕಡದ‌ಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರವರ ಕಾರನ್ನು ಚುನಾವಣಾ ಅಧಿಕಾರಿಗಳಿಂದ ತಪಾಸಣೆ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ ಮಾಹಿತಿ ಕಾರ್ಯಕ್ರಮ

Suddi Udaya

ಕತಾರ್ ಕಕ್ಕಿಂಜೆ ಶರೀಅತ್‌ ಕಾಲೇಜು ನೂತನ ಸಮಿತಿಗೆ ಆಯ್ಕೆ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ತoಬಿಲ ಸೇವೆ

Suddi Udaya

ಉಜಿರೆ : ರತ್ನಮಾನಸ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ 8 ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

Suddi Udaya
error: Content is protected !!