23.4 C
ಪುತ್ತೂರು, ಬೆಳ್ತಂಗಡಿ
October 22, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಸಂಬೋಳ್ಯದ ಸುಮಂತ್ ಸಾವಿನ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ: ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ ಪತ್ರಿಕಾ ಹೇಳಿಕೆ

ಬೆಳ್ತಂಗಡಿ: ಸಂಬೋಳ್ಯದ ಸುಮಂತ್ ಸಾವಿನ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಅರುಣ್.ಕೆ ಅವರು ಫೆ.4 ರಂದು ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.

ದಿನಾಂಕ 14-01-2026 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ, ಮೃತ್ಯುವಿನ ಕಾರಣ ಮುಳುಗು ಆಗಿದೆ. ಆದರೆ ತಲೆಯಲ್ಲಿದ್ದ ಗಾಯದಿಂದ ಸಂಶಯ ಉಂಟಾದ ಕಾರಣ ಪ್ರಕರಣವನ್ನು ಸಂಪೂರ್ಣ ಹಾಗೂ ಸಮಗ್ರವಾಗಿ ತನಿಖೆ ನಡೆಸುವ ಉದ್ದೇಶದಿಂದ ಹತ್ಯೆ ಕಲಂನ್ನು ಸೇರಿಸಲಾಗಿದೆ.

ವೈದ್ಯಕೀಯ ನ್ಯಾಯವಿಜ್ಞಾನ ಹಾಗೂ ಅಂತಿಮ ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬರಬೇಕಿದ್ದು, ಇದು ಹತ್ಯೆಯೇ ಅಥವಾ ಅಸಹಜ ಮರಣವೇ ಎಂಬುದರ ಬಗ್ಗೆ ಈವರೆಗೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ.ಈ ಮಧ್ಯೆ, ಕೆಲವರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಿದ್ದಾಂತಗಳನ್ನು ರೂಪಿಸಿ ಆರೋಪಿಗಳನ್ನು ಕುರಿತು ಊಹಾಪೋಹಗಳನ್ನು ಹರಡುತ್ತಿದ್ದಾರೆ. ತನಿಖೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವ ದಿಸೆಯಲ್ಲಿ ನಡೆಯುತ್ತಿದೆ; ಆದರೆ ವಿಚಾರಣೆಗೊಳಪಡಿಸಲಾದ ಪ್ರತಿಯೊಬ್ಬರೂ ಆರೋಪಿಗಳೇ ಎನ್ನುವುದಿಲ್ಲ.

ಈ ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ನಾಲ್ಕು ವಿಶೇಷ ತನಿಖಾ ತಂಡಗಳು ಕಾರ್ಯನಿರ್ವಹಿಸುತ್ತಿವೆ.ಇದಲ್ಲದೆ ಆಗಸ್ಟ್ 2025 ರ ಒಂದು ಅಸಹಜ ಮರಣ (UDR) ಪ್ರಕರಣವನ್ನು ಈ ಪ್ರಕರಣದೊಂದಿಗೆ ಸಂಪರ್ಕಿಸಲಾಗಿದೆ ಎಂದು ಗಮನಕ್ಕೆ ಬಂದಿದೆ. ಇದುವರೆಗೆ ಆ ಇನ್ನೊಂದು ಪ್ರಕರಣ ಹತ್ಯೆಯಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ. ಯಾವುದೇ ಶಂಕಿತರ ಕುರಿತು ಹರಡಲಾಗುತ್ತಿರುವ ವಿವಿಧ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಮನವಿ ಮಾಡಲಾಗಿದೆ. ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಅರುಣ್. ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಲಾ ಸಿಂಚನ- 2025 ಜಾನಪದ ನೃತ್ಯ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯರಿಗೆ ದ್ವಿತೀಯ ಸ್ಥಾನ.

Suddi Udaya

ಮಡಂತ್ಯಾರು ಮೆಸ್ಕಾಂ ಇಲಾಖೆಯ ವತಿಯಿಂದ ಗೃಹ ಜ್ಯೋತಿ ಮರು ಪರಿಶೀಲನೆ‌

Suddi Udaya

ಅರಣ್ಯ ಇಲಾಖೆಯ ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಜನಾರ್ದನ ನಿಧನ

Suddi Udaya

ಉಜಿರೆ : ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ಬೆಳ್ತಂಗಡಿ: ದಾರುಸಲಾಂ ಎಜುಕೇಶನ್ ಸೆಂಟರ್ ನಲ್ಲಿ 7ನೇ ಬ್ಯಾಚ್ ನ ತರಗತಿ ಪ್ರಾರಂಭೋತ್ಸವ

Suddi Udaya

ಪಿಯು ಫಲಿತಾಂಶ: ಮುಂಡಾಜೆ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ.100 ಫಲಿತಾಂಶ

Suddi Udaya
error: Content is protected !!