September 6, 2026
ಅಪಘಾತಗ್ರಾಮಾಂತರ ಸುದ್ದಿನಿಧನಪ್ರಮುಖ ಸುದ್ದಿವರದಿ

ಬೋರ್ ವೆಲ್ ಲಾರಿಯ ಡ್ರಿಲ್ ಯಂತ್ರ ವಿದ್ಯುತ್ ಲೈನಿಗೆ ತಾಗಿ ಕಾರ್ಮಿಕ ಮೃತ್ಯು

ಬೆಳ್ತಂಗಡಿ: ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿ ಅಡಿಕೆ ತೋಟದಲ್ಲಿ ಹಾಳಾಗಿದ್ದ ಬೋರ್ ವೆಲ್ ಅನ್ನು ಸ್ವಚ್ಚಗೊಳಿಸುವ ವೇಳೆ ಬೋರ್ ವೆಲ್ ರಿಂಗ ವಾಹನದ ಲಾರಿಯ ಡ್ರಿಲ್ ಮಾಡುವ ಯಂತ್ರ ವಿದ್ಯುತ್ ಲೈನಿಗೆ ತಾಗಿ ಲಾರಿಯ ಬದಿಯಲ್ಲಿ ನೀರಿನಲ್ಲಿ ನಿಂತಿದ್ದ ಕಾರ್ಮಿಕ ವಿದ್ಯುತ್ ಆಘಾತಕ್ಕೆ ಈಡಾಗಿ ಮೃತಪಟ್ಟ ಘಟನೆ ಸಂಭವಿಸಿದೆ.ಮೃತ ಕಾರ್ಮಿಕ ಚತ್ತೀಸ್ ಗಡ್ ಮೂಲದ ಕಾರ್ಮಿಕ ಶಿವ ಎಕ್ಕ (33) ಎಂಬಾತನಾಗುದ್ದಾನೆ.

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ದಾಖಲಿಸಲಾಗಿದೆ.ಪುತ್ತಿಲ ನಿವಾಸಿಯಾಗಿರುವ ರಫೀಕ್ ಎಂಬವರು ತಮ್ಮ ತಂದೆಗೆ ಸೇರಿದ ಜಾಗದಲ್ಲಿ ಹಾಳಾದ ಬೋರ್ ವೆಲ್ ಅನ್ನು ರಿಪೇರಿ ಮಾಡಿಸಲು ಫೆ.3 ರಂದು ಹಮೀದ್ ಎಂಬವರಿಗೆ ಸೇರಿದ ಬೋರ್ ವೆಲ್ ರಿಂಗ ವಾಹನವನ್ನು ಕರೆಸಿ ರಿಪೇರಿ ಮಾಡಿಸಿದಾಗ ಬೋರ್ ವೆಲ್ ಕೆಲಸ ಮುಗಿಸಿದ ಬಳಿಕ ಲಾರಿಯ ಡ್ರಿಲ್ ಮಾಡುವ ಯಂತ್ರವನ್ನು ಅದರ ಚಾಲಕ ಸಂಪತ್ ಕುಮಾರ್ ಎಂಬವರು ಸರಿಯಾದ ಜಾಗ್ರತೆ ವಹಿಸದೆ ನರ್ಲಕ್ಷ್ಯ ತನದಿಂದ ಕೆಳಗೆ ಇಳಿಸಿದ್ದು ಈ ವೇಳೆ ಇದು ವಿದ್ಯುತ್ ಲೈನಿಗೆ ತಾಗಿದೆ ಈ ಸಂದರ್ಭದಲ್ಲಿ ವಾಹನದ ಸಮೀಪ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಶಿವ ಎಕ್ಕ ವಿದ್ಯುತ್ ಆಘಾತಕ್ಕೆ ಈಡಾಗಿ ಕೆಳಗೆ ಬಿದ್ದಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆವೇಳೆಗೆ ಆತ ಮೃತಪಟ್ಟಿದ್ದ. ಘಟನೆಯ ಬಗ್ಗೆ ರಫೀಕ್ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ

Related posts

ತಾಲೂಕು ಮಟ್ಟದ ವಿಜ್ಞಾನ ಮೇಳ: ನಾವೂರು ಸ.ಹಿ.ಪ್ರಾ ಶಾಲಾ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya

ಗುರುವಾಯನಕೆರೆ- ಉಜಿರೆ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

Suddi Udaya

ಕಳಿಯ ಕಲ್ಪವೃಕ್ಷ ಜ್ಞಾನವಿಕಾಸ ಕೇಂದ್ರ: ಜಾಗೃತಿ ಕಾರ್ಯಕ್ರಮ

Suddi Udaya

ಹಾಪ್ ಕಾಮ್ಸ್ ನಿರ್ದೇಶಕರಾಗಿ  ರತ್ನರಾಜ್ ಪೇರಂದಬೈಲ್ ಆಯ್ಕೆ        

Suddi Udaya

ಉಜಿರೆ: ಆಟೋ ಚಾಲಕ ಮಂಜುನಾಥ ನಿಧನ

Suddi Udaya

ಉಜಿರೆ: ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

Suddi Udaya
error: Content is protected !!