25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆಯವರಿಂದ ಹತ್ಯಡ್ಕದಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯರಾದ ಹತ್ಯಡ್ಕ ಗ್ರಾಮದ ಮೂಕಾಂಬಿಕಾಗಿರಿಯ ಜಯಶ್ರೀ ರವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವಾತ್ಸಲ್ಯ ಮನೆಯನ್ನು ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆಯವರು ಹಸ್ತಾಂತರಿಸಿ ವಾತ್ಸಲ್ಯ ಕಿಟ್ ವಿತರಣೆ ಮಾಡಿ ಅಸಹಾಯಕರ ಬದುಕಿಗೆ ಬೆಳಕಾದರೆ ನಮ್ಮ ಜೀವನ ಸಾರ್ಥಕ ನಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ಕೊನೆ ಕಾಲಕ್ಕೆ ನಮಗೆ ಅಸರೆಯಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ದಿನೇಶ್ ಡಿ, ತಾಲೂಕು ಯೋಜನಾಧಿಕಾರಿ ಯಶೋಧರ, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಯವರಾದ ಹರೀಶ್ ಕೃಷ್ಣ, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕ ಜಯರಾಮ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀರ್ ಕುಮಾರ್ ಎಮ್.ಎಸ್, ಊರಿನ ಗಣ್ಯರಾದ ಸುಧೀರ್ , ಹತ್ಯಡ್ಕ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಧರ್ಮರಾಜ್ ಅಡ್ಕಾಡಿ, ತಾ.ಪಂ. ಮಾಜಿ ಸದಸ್ಯೆ ಮಂಜುಳಾ ಕಾರಂತ್, ಚೆನ್ನಪ್ಪ ಗೌಡ, ಸತೀಶ್ ಶೆಟ್ಟಿ, ರೆಖ್ಯ ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ಶಿವರಾಮ ಗೌಡ, ಶಿಶಿಲ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪಗೌಡ ಜಿ., ಅರಸಿನಮಕ್ಕಿ ವಲಯ ಮೇಲ್ವಿಚಾರಕಿ ಶಶಿಕಲಾ, ಶೌರ್ಯ ವಿಪತ್ತು ಶಿಶಿಲ, ಅರಸಿನಮ್ಕಕಿ ಸದಸ್ಯರು, ಅರಸಿನಮಕ್ಕಿ ವಿಭಾಗದ ಸೇವಾಪ್ರತಿನಿಧಿ, ಜನಜಾಗೃತಿ ತಾಲೂಕು ವೇದಿಕೆ ಸದಸ್ಯರು, ಒಕ್ಕೂಟ ಸದಸ್ಯರು, ಸ್ಥಳೀಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಸಂಪತ್ ಬಿ ಸುವರ್ಣ ನೇತೃತ್ವದಲ್ಲಿ,ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ 16ನೇ ವರ್ಷದ ಸಾಂಸ್ಕೃತಿಕ ವೈಭವ , ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ-2026 ಪ್ರದಾನ

Suddi Udaya

ಲಾಯಿಲ: ಪಡ್ಲಾಡಿ ಶಾಲಾ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ

Suddi Udaya

ನಾಳೆ(ಜೂ.25): ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಡಾ. ಪ್ರಕಾಶ್ ಎಸ್ ನೇಮಕ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ: ಪೂರ್ವ ಅಧ್ಯಕ್ಷರಿಗೆ ಮತ್ತು ಸಾಧಕರಿಗೆ ಸನ್ಮಾನ

Suddi Udaya

ಅಳದಂಗಡಿ: ಲೋಕೋಪಯೋಗಿ ಇಲಾಖೆಯಲ್ಲಿ 38 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಿವಪ್ರಸಾದ್ ಅಜಿಲ ದಂಪತಿಗೆ ಊರವರಿಂದ ಪೌರ ಸನ್ಮಾನ, ಷಷ್ಠ್ಯಬ್ಧ ಸಂಭ್ರಮ, ಸಾವಿರಾರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya
error: Content is protected !!