September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುಂಡೂರಿ ವಿವೇಕಾನಂದ ಸೇವಾ ಟ್ರಸ್ಟ್‌ನಲ್ಲಿ ಹುಟ್ಟು ಹಬ್ಬ ಮತ್ತು ಸಂಸ್ಮರಣೆ ಕಾರ್ಯಕ್ರಮ

ಗುಂಡೂರಿ: ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ವಿವೇಕಾನಂದ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೀರ್ತಿ ಶೇಷ ಯಂ. ವಿಜಯರಾಜ ಅಧಿಕಾರಿಯವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ಕಾರ್ಯಕ್ರಮ ಫೆ.5ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ. ಧರಣೇಂದ್ರ ಜೈನ್ ಮಾತನಾಡಿ, ವಿವೇಕಾನಂದ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾಗಿದ್ದ ಮಾರಗುತ್ತು ವಿಜಯರಾಜ ಅಧಿಕಾರಿಯವರ ಸದಾ ಸವಿನೆನಪು ಉಳಿಯುವಂತೆ ಟ್ರಸ್ಟ್ ಅಡಿಯಲ್ಲಿ ನಿರಂತರ ಸಮಾಜ ಸೇವೆ ಗೈಯಲಾಗುವುದು ಎಂದು ತಿಳಿಸಿದರು. ಶ್ರೀಮತಿ ರಾಜೇಶ್ವರಿ ವಿಜಯರಾಜ ಅಧಿಕಾರಿಯವರು ಪುಣ್ಯ ನಮನ ಸಲ್ಲಿಸಿ ಪುಷ್ಪಾಂಜಲಿ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಸಂದ್ಯಾ ಧರಣೇಂದ್ರ ಜೈನ್, ಕೋಶಾಧಿಕಾರಿ ಕೃಷ್ಣಾನಂದ ಭಟ್, ಸದಸ್ಯರಾದ ಭಾಸ್ಕರ ಪೈ, ಭರತ್ ರಾಜ ಮುದ್ಯ, ಪಶುವೈದ್ಯ ಸುಕೀರ್ತ್ ಜೈನ್, ಸಂಜೀವ ಪೂಜಾರಿ ಮೂಡ್ಲ, ರಾಜೇಂದ್ರ, ಜಿನೇಶ್ ಜೈನ್ ಮತ್ತಿತ್ತರು ಉಪಸ್ಥಿತರಿದ್ದರು. ಟ್ರಸ್ಟ್ ನ ಕಾರ್ಯದರ್ಶಿ ಎಚ್. ಜಗದೀಶ್ ಕಾರ್ಯಕ್ರಮ ನಿರೂಪಿಸಿ, ಹೊನ್ನಯ್ಯ ಕಾಟಿಪಳ್ಳ ವಂದಿಸಿದರು.

Related posts

ಬೆಳ್ತಂಗಡಿ ವಕೀಲರ ಸಂಘದಿಂದ ಹಿರಿಯ ನ್ಯಾಯಾಧೀಶ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಸಯನ್ಸ್ ಪ್ರಾಜೆಕ್ಟ್ ಡಿಸೈನರ್ ಪ್ರವೀಣ್ ಭಟ್‌ಗೆ “ಶಿಕ್ಷಣ ಸೇವಾರತ್ನ “ಪ್ರಶಸ್ತಿ

Suddi Udaya

ಅಳದಂಗಡಿ: ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ಉದ್ಘಾಟನೆ

Suddi Udaya

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಬೆಳ್ತಂಗಡಿ ಪ. ಪಂ. ವ್ಯಾಪ್ತಿಯಲ್ಲಿ ಮೊಬೈಲ್ ಆಪ್ ಮೂಲಕ ಸಮೀಕ್ಷೆ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿಗೆ ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಕೆ-ಸೆಟ್ ಪರೀಕ್ಷೆ: ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ವಿದ್ಯಾರ್ಥಿನಿ ಅರ್ಚನಾ ರಾಜ್ಯಕ್ಕೆ ಮೂರನೇ ರ‍್ಯಾಂಕ್‌

Suddi Udaya
error: Content is protected !!