March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಳ್ತೂರು: ದರ್ಸ್ ವಾರ್ಷಿಕ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ

ಬೆಳ್ತಂಗಡಿ; ಉಳ್ತೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮುರ್ಶಿದುಲ್ ಅನಾಂ ದರ್ಸ್ ಉಳ್ತೂರು ಇದರ ದರ್ಸ್ ವಾರ್ಷಿಕ, ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಮರ್ಹೂಂ ಮುಹಮ್ಮದ್ ಫಾಳಿಲಿ ಅನುಸ್ಮರಣೆಯು ಜಮಾಅತ್ ಅಧ್ಯಕ್ಷ ಕೆ.ಎಚ್ ಅಝೀಝುದ್ದೀನ್ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಿತು.

ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ರವರು ಅನುಸ್ಮರಣೆಗೆ ನೇತೃತ್ವ ನೀಡಿ ದುಆಶೀರ್ವಚನ ನೀಡಿದರು. ಪಾಂಡಿಯಾಳ್ ಮುದರ್ರಿಸ್ ಉಸ್ತಾದ್ ಐ.ಎಂ.ಉಮರ್ ಅಹ್ಸನಿ ಇನೋಳಿ ಸಭೆಯನ್ನು ಉದ್ಘಾಟಿಸಿ ದರು. ಉಳ್ತೂರು ಮುದರ್ರಿಸ್ ಮುಹಮ್ಮದ್ ತೌಸೀಫ್ ಸಅದಿ ಹರೇಕಳ ರವರು ದಿಕ್ಸೂಚಿ ಭಾಷಣ ಮಾಡಿದರು. ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟ್ಟಪಡವು ಮುಖ್ಯ ಭಾಷಣ ಮಾಡಿದರು. ಬಶೀರ್ ಲತೀಫಿ ಮದ್ದಡ್ಕ, ನೆಲ್ವಿಸ್ಟರ್ ಪಿಂಟೋ, ಚಂದ್ರಶೇಖರ್ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿ ಗಳಿಗೆ ತೆರಳುವ ವಿದ್ಯಾರ್ಥಿಗಳಾದ ಸಾಬಿತ್ ಎಮ್ಮೆಮ್ಮಾಡು, ಝೈನುಲ್ ಆಬಿದ್ ಕನಕಮಜಲು, ಹಾಶಿರ್ ಕೊಯ್ಯೂರು ರವರಿಗೆ ಬೀಳ್ಕೊಡುಗೆ ನೀಡಲಾಯಿತು.

ಸಯ್ಯಿದ್ ಮುಸ್ತಫ ತಂಙಳ್ ಉಳ್ತೂರು, ಸಯ್ಯಿದ್ ಶರಪುದ್ದೀನ್ ತಂಙಳ್ ವೇಣೂರು, ನವಾಝ್ ಸಅದಿ ಕಕ್ಕೆ ಪದವು, ನಈಮುದ್ದೀನ್ ಅಝ್‌ಹರಿ ಪಿಲ್ಯ, ಪಿ.ಎ ಮುಹಮ್ಮದ್ ಮುಸ್ಲಿಯಾರ್ ಉಳ್ತೂರು, ತಾಜುದ್ದೀನ್ ಸಖಾಫಿ ಪುಲಾಬೆ, ಮನ್ಸೂರ್ ಸಖಾಫಿ ಕಬಕ ಗೋಳಿಯಂಗಡಿ, ಯು. ಅಬ್ಬಾಸ್ ಹಾಜಿ, ಯು.ಎಂ ಅಬ್ದುರಹ್ಮಾನ್, ಯು.ಎಂ ಸಯ್ಯದ್ ಹಸನ್, ಯು.ಎಚ್ ಇಬ್ರಾಹಿಂ, ಪಿ.ಇಸ್ಮಾಈಲ್ ಶಾಂತಿನಗರ, ಬಿ.ಮುಹಮ್ಮದ್, ರಶೀದ್ ಮಡಂತ್ಯಾರ್, ಸಯ್ಯಿದ್ ಸಲೀತ್ ತಂಙಳ್, ತೌಫೀಕ್ ವೇಣೂರು ಮುಂತಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮುಈನಿ ಸ್ವಾಗತಿಸಿ, ಕೆ.ಎಚ್ ಸಿರಾಜುದ್ದೀನ್ ಝಹ್ರಿ ಕಾರ್ಯಕ್ರಮ ನಿರೂಪಿಸಿದರು.

Related posts

ಪರಪ್ಪು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

Suddi Udaya

ಧರ್ಮಸ್ಥಳ ಬುರುಡೆ ಪ್ರಕರಣ: ಜಾಮೀನು ಮತ್ತು ಭದ್ರತೆ ಹಣ ಠೇವಣಿ ಮಾಡದ ಹಿನ್ನೆಲೆ ಜಾಮೀನು ಸಿಕ್ಕರೂ ಬಿಡುಗಡೆಯಾಗದ ಚಿನ್ನಯ್ಯ

Suddi Udaya

ಧರ್ಮಸ್ಥಳ: ಭಾರಿ ಮಳೆಗೆ ಹೆಚ್ಚಾದ ನೇತ್ರಾವತಿ ನದಿ ನೀರಿನ ರಭಸ

Suddi Udaya

ಬೆಳಾಲು: ಮಾಯ ಸ.ಉ.ಪ್ರಾ. ಶಾಲೆಯಲ್ಲಿ ರೂ.8.35 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Suddi Udaya

ದ.ಕ.ಜಿಲ್ಲಾ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ನಿರ್ದೇಶಕರಾಗಿ ಗುರುಪ್ರಸಾದ್ ಆಯ್ಕೆ

Suddi Udaya

ಉಜಿರೆ : ಅಲ್-ಅಮೀನ್ ಯಂಗ್-ಮೆನ್ಸ್ ವತಿಯಿಂದ ಮಕ್ಕಳ ಸುನ್ನತ್ ಕಾರ್ಯಕ್ರಮ

Suddi Udaya
error: Content is protected !!