September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಅರಸಿನಮಕ್ಕಿ ಕಾಪು ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

ಅರಸಿನಮಕ್ಕಿ ಕಾಪು ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆಯು ಫೆ. 9 ರಿಂದ ಪ್ರಾರಂಭಗೊಂಡು ಫೆ.11 ರವರೆಗೆ ನಡೆಯಲಿದೆ.

ಇಂದು ಕಾಪುವಿನಲ್ಲಿ ಬೆಳಿಗ್ಗೆ ತೋರಣ ಮುಹೂರ್ತ , ಭಂಡಾರ ಹಿಡಿಯುವುದು, ಬ್ರಹ್ಮರು, ಕುಮಾರ ಬೊಳ್ಯಾ, ಪಾಲೇಶರಾಯ, ಪಾಳೆದುಳ್ಳಾಲ್ತಿ, ಮುಗೇರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಂಕರನಾರಾಯಣ ಭಟ್, ಅಧ್ಯಕ್ಷ ಧರ್ಣಪ್ಪ ಗೌಡ, ಕಾರ್ಯದರ್ಶಿ ಕೆ. ಗಂಗಾಧರ ಕುಲಾಲ್, ಉಪಾಧ್ಯಕ್ಷ ಐತ್ತಪ್ಪ ಕುಲಾಲ್, ಜೊತೆ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಸದಸ್ಯರಾದ ಪಿ. ಪಾಂಡುರಂಗ ಮರಾಠೆ ಪುಂಡಾಜೆ, ಪಿ. ರಾಜರಾಮ ಕಾರಂತ ಗುತ್ತು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಫೆ.10 ರಂದು ಬೆಳಗ್ಗೆ ತೋರಣ ಮುಹೂರ್ತ, ಮಧ್ಯಾಹ್ನ ಗಂಟೆ 2-00ಕ್ಕೆ : ಮೆದಿನದಿಂದ ರುದ್ರ ಚಾಮುಂಡಿ ದೈವದ ಭಂಡಾರ ತರುವುದು ಸಂಜೆ ಹೊಸ್ತೋಟದಿಂದ ಕೊಡಮಣಿತ್ತಾಯ ದೈವದ ಭಂಡಾರ ತರುವುದು. ಸಂಜೆ ಗುತ್ತುವಿನಿಂದ ಶಿರಾಡಿ ದೈವದ ಭಂಡಾರ ತರುವುದು. ರಾತ್ರಿ ಬೆಳಗ್ಗಿನ ತನಕ ಬ್ರಹ್ಮರು, ರುದ್ರಚಾಮುಂಡಿ, ಕಲ್ಲುಡ, ಕಲ್ಲುರ್ಟಿ, ಪಂಜುರ್ಲಿ ಇತ್ಯಾದಿ ದೈವಗಳ “ನೇಮೋತ್ಸವ” ಸಾಯಂಕಾಲ ಗಂಟೆ 6.00ರಿಂದಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 7.00ರಿಂದ ಕದಂಬ ತುಳು ನಾಟಕ ನಡೆಯಲಿದೆ.

ಫೆ.11ರಂದು ಕೊಡಮಣಿತ್ತಾಯ, ಶಿರಾಡಿ, ಬಚ್ಚನಾಯ್ಕ, ಗುಳಿಗ ಇತ್ಯಾದಿ ದೈವಗಳ “ನೇಮೋತ್ಸವ” ಮಧ್ಯಾಹ್ನ “ಅನ್ನಸಂತರ್ಪಣೆ” ನಡೆಯಲಿದೆ.

Related posts

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಲ್ಲಿ ವರ್ಷ ಕಾಮತ್ ರಿಂದ ಟೆಮ್ ದಿ ಟೈಮ್ ತರಬೇತಿ ಕಾರ್ಯಾಗಾರ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಶಾಂತಿವನಕ್ಕೆ-ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೋಳಿ ಭೇಟಿ

Suddi Udaya

ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿನಬಿಜೆಪಿ ಬೆಳ್ತಂಗಡಿ ಮಂಡಲ ಮತ್ತು ಬಿಜೆಪಿ ನಗರ ಮಹಾ ಶಕ್ತಿಕೇಂದ್ರ ವತಿಯಿಂದ ನಮನ

Suddi Udaya

ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ:ಆಯೋಧ್ಯೆ ಶ್ರೀರಾಮ ಮಂದಿರ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

Suddi Udaya
error: Content is protected !!