37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಣಕ್ಕೆ ಯತ್ನಿಸಿದ ಮುಸುಕುಧಾರಿಗಳು: ಚೂರಿಯಿಂದ ಇರಿದು ಹಲ್ಲೆ: ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಇಲ್ಲಿಯ ಜೂನಿಯರ್ ಕಾಲೇಜು ಹಿಂದುಗಡೆ ರಸ್ತೆಯಲ್ಲಿ ಮುಸುಕುಧಾರಿಗಳ ತಂಡವೊಂದು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಯನ್ನು ಅಪಹರಿಸಲು ಯತ್ನಿಸಿ, ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಇಂದು(ಫೆ.9) ಬೆಳಿಗ್ಗೆ ಸಂಭವಿಸಿದೆ.

ಸುದೇಮುಗೇರು ವಿದ್ಯಾರ್ಥಿನಿ ಇಂದು ಬೆಳಿಗ್ಗೆ ಸುಮಾರು 8.45 ಕ್ಕೆ ತನ್ನ ದ್ವಿಚಕ್ರವಾಹನದಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಬೆಳ್ತಂಗಡಿ ಜೂನಿಯರ್ ಕಾಲೇಜಿನ ಹಿಂಭಾಗದಲ್ಲಿ ಕಾರಿನಲ್ಲಿ ಬಂದ ಮೂರು ಮಂದಿ ಮುಸುಕುಧಾರಿಗಳ ತಂಡ ದ್ವಿಚಕ್ರವಾಹನವನ್ನು ತಡೆಗಟ್ಟಿ ವಿದ್ಯಾರ್ಥಿನಿಯನ್ನು ಅಪಹರಣಕ್ಕೆ ಯತ್ನಿಸಿ ಆಕೆ ವಿರೋಧಿಸಿದಾಗ, ಚೂರಿಯಿಂದ ಹಲ್ಲೆಗೆ ಯತ್ನಿಸಿದರೆನ್ನಲಾಗಿದೆ.

ಈ ಸಂದರ್ಭ ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದು ವಿದ್ಯಾರ್ಥಿನಿಯ ಕೈಗೆ ಗಾಯವಾಗಿದೆ. ಹಲ್ಲೆ ನಡೆಸಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಾಲಕಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದು, ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Related posts

ಸರಳಿಕಟ್ಟೆ: ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್: ಅಜಿಲಮೊಗರು – ಸರಳಿಕಟ್ಟೆ- ಉಪ್ಪಿನಂಗಡಿ ಸಂಪರ್ಕ ಕಡಿತ

Suddi Udaya

ಸುಳ್ಯ ಕೆರ್ಪಳ ಪಯಸ್ಸಿನಿ ಯುವಕ ಮಂಡಲ ವತಿಯಿಂದ ಲಕ್ಷ್ಮಿನಾರಾಯಣರವರಿಗೆ ಪಯಸ್ಸಿನಿ ಗೌರವ

Suddi Udaya

ಗಮಕ, ಯಕ್ಷಗಾನದಲ್ಲಿ ವಿಶೇಷ ಸಾಧನೆ: ಮಧೂರು ಮೋಹನ ಕಲ್ಲೂರಾಯರಿಗೆ ರಾಜ್ಯ ಪ್ರಶಸ್ತಿ

Suddi Udaya

ಮಡಂತ್ಯಾರು ರಚನಾ ಸಿಲ್ಕ್ ನಲ್ಲಿ ಶೇ. 10-50 ಆಷಾಢ ಡಿಸ್ಕೌಂಟ್ ಸೇಲ್

Suddi Udaya

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಆಶ್ರಯದಲ್ಲಿ ಆಟಿಡೊಂಜಿ ಕೂಟ ವಿಶೇಷ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!