ನಾರಾವಿ: ಇತಿಹಾಸ ಪ್ರಸಿದ್ದ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಎಂಎಲ್ಸಿ ಪ್ರತಾಪಸಿಂಹ ನಾಯಕ್ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.

ಬಳಿಕ ಉಜಿರೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನಾರಾವಿ ದೇವಸ್ಥಾನದ ಮೊಕ್ತೇಸರರಾದ ಜಗದೀಶ್ ಹೆಗ್ಡೆಯವರಿಗೆ ನೀಡಿ ಎಲ್ಲರನ್ನು ಆಮಂತ್ರಿಸಿದರು. ಈ ಸಂದರ್ಭದಲ್ಲಿ ಪ್ರತಾಪಸಿಂಹ ನಾಯಕ್ ಅವರನ್ನು ದೇವಸ್ಥಾನದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಾರಾವಿ ಗ್ರಾ.ಪಂ ಸದಸ್ಯ ಉದಯ ಹೆಗ್ಡೆ ನಾರಾವಿ, ಬ್ರಹ್ಮಕಲಶೋತ್ಸವ ಕಲಶ ಸಮಿತಿ ಸಂಚಾಲಕ ಪ್ರಮೋದ್ ಕುಲಾಲ್ ಹೊಸ್ಮಾರು, ಪ್ರಮುಖರಾದ ರತ್ನಾಕರ ಶೆಟ್ಟಿ, ರಾಮಚ್ಚಂದ್ರ ಭಟ್, ಸತೀಶ್ ಆಚಾರ್ಯ ನಾರಾವಿ, ಮುರಳೀಧರ ಭಟ್, ಪ್ರಸಾದ್ ಕೋಟ್ಯಾನ್, ಕುಸುಮನಾಭ, ರವಿ ಹೆಗ್ಡೆ ಬಿರ್ಮೊಟ್ಟು ಹಾಗೂ ಇತರರು ಉಪಸ್ಥಿತರಿದ್ದರು.











