March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವ ಸಂಪನ್ನ

ಬಾರ್ಯ : ಬಾರ್ಯ ಶ್ರೀ ಮಹಾ ವಿಷ್ಣು ದೇವಸ್ಥಾನದ ಆರನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಸಾಮೂಹಿಕ ಪ್ರಾರ್ಥನೆ ,ಹೊರೆ ಕಾಣಿಕೆ ಸಮರ್ಪಣೆ ,ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಪುತ್ತಿಲ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ , ತಾಂಬೂಲ ಕಲಾವಿದರು ಪುಂಜಾಲಕಟ್ಟೆ ತಂಡದಿಂದ ತುಳು ನಾಟಕ ,ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ತಂಡದಿಂದ ಜಾಂಬವತಿ ಕಲ್ಯಾಣ ತಾಳಮದ್ದಳೆ, ದೇವರಿಗೆ ಪಂಚ ವಿಂಶತಿ ಕಲಶಾಭಿಷೇಕ, ನಾಗತಂಬಿಲ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನ ಸಂತರ್ಪಣೆ, ಗ್ರಾಮ ದೈವ ಪಂಜುರ್ಲಿ ನೇಮೋತ್ಸವದೊಂದಿಗೆ ಜರಗಿತು.

ದೇವಳದ ಆಡಳಿತ ಸೇವಾ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ, ಪ್ರಧಾನ ಅರ್ಚಕ ಗುರುಪ್ರಸಾದ ನೂರಿತ್ತಾಯ, ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಉತ್ಸವ ಸಮಿತಿ ಸಂಚಾಲಕ ಯಜ್ಞೇಶ ಪುತ್ತಿಲ, ಟ್ರಸ್ಟ್ ಪದಾಧಿಕಾರಿಗಳಾದ ಪ್ರಶಾಂತ ಪೈ ಬಾರ್ಯ ,ರಾಜೇಶ್ ರಾವ್ ,ವಿದ್ಯಾ ಪ್ರಭಾಕರ, ಪ್ರಶಾಂತ ಕುಮಾರ್, ಪ್ರವೀಣ.ಯಂ, ಮನೋಹರ ಶೆಟ್ಟಿ, ನಾರಾಯಣಗೌಡ, ಶ್ರೀಮತಿ ನವೀನ, ಜಿ . ಉಮೇಶ, ಚೇತನ್ ಕುಮಾರ್ , ಶಿವರಾಮ ನಾಯ್ಕ, ಬಾಲಕೃಷ್ಣ ಶೆಟ್ಟಿ , ವಿಶ್ವನಾಥ ಗೌಡ, ವಿಜಯಲಕ್ಷ್ಮೀ ರೈ ಬಾರ್ಯ,ಮೋನಪ್ಪ ಗೌಡ, ಸುದೇಶ. ಕೆ, ರಾಮಣ್ಣಗೌಡ , ಅರುಣ ಬಂಗೇರ, ಸುದರ್ಶನ.ಕೆ ಹಾಗೂ ಊರ ಹತ್ತು ಸಮಸ್ತರು ಮತ್ತು ಸ್ವಯಂಸೇವಕರು ಜಾತ್ರೆಯ ಯಶಸ್ಸಿಗೆ ಸಹಕಾರ ನೀಡಿದರು. ನೇಮೋತ್ಸವದಲ್ಲಿ 9 ಗುತ್ತಿನ ಮನೆಯವರು ಭಾಗವಹಿಸಿದ್ದರು.

Related posts

ಕೊಲ್ಲಿ ದೇವಸ್ಥಾನದಲ್ಲಿ ರಕ್ತೇಶ್ವರಿ ದೈವದ ಕಟ್ಟೆಯ ಶಿಲಾನ್ಯಾಸ: ಕೊಲ್ಲಿ ದುರ್ಗಾಪರಮೇಶ್ವರಿಯ ಸೊಬಗಿಗೆ ಪಶ್ಚಿಮ ಘಟ್ಟವೇ ಪ್ರಭಾವಳಿ:ಸಂಪತ್ ಬಿ. ಸುವರ್ಣ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನಿಂದ ಉಪ್ಪಾರಪಳಿಕೆ ಶ್ರೀ ಕೃಷ್ಣ ಭಜನಾ ಮಂದಿರದ ನಿರ್ಮಾಣಕ್ಕೆ ದೇಣಿಗೆ ಹಸ್ತಾಂತರ

Suddi Udaya

ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವ- ಕಾರ್ಯಾಲಯ ಉದ್ಘಾಟನೆ, ವೆಬ್‌ಸೈಟ್ ಅನಾವರಣ

Suddi Udaya

ಬಳಂಜ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಪ್ಲೇಟ್ ಇಡುವ ಸ್ಟ್ಯಾಂಡ್ ಕೊಡುಗೆ

Suddi Udaya

ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ: ಬೆಳ್ತಂಗಡಿ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತನಿಖೆ

Suddi Udaya

ಧರ್ಮಸ್ಥಳ “ಹೆಜ್ಜೆ ಗುರುತು” ತಂಡದಿಂದ ಶ್ರಮದಾನ

Suddi Udaya
error: Content is protected !!