23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಡಗಕಾರಂದೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಡಗಕಾರಂದೂರು : ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 1 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವ ಬಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬಡಗಕಾರಂದೂರು ಗ್ರಾಮದ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಫೆ.11ರಂದು ನೀರಲ್ಕೆ ವಸಂತ ಪೂಜಾರಿಯವರ ಮನೆಯಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶ್ರೀ ಕ್ಷೇತ್ರ ನಡೆದು ಬಂದ ಹಾದಿಯನ್ನು ವಿವರಿಸಿ ಜಾತ್ರೋತ್ಸವವನ್ನು ಯಶಸ್ಸು ಗಳಿಸುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಅಗಲಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ತಾಲೂಕಿನ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರಕ್ಕೆ ಆಹ್ವಾನಿಸಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಸದಸ್ಯರೂ, ಬೆಳ್ತಂಗಡಿ ತಾಲೂಕಿನ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಳದಂಗಡಿ ಜಾತ್ರೋತ್ಸವ ಸಮಿತಿಯ ವಲಯ ಸಂಚಾಲಕರುಗಳಾದ ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು, ಉಮೇಶ್ ಸುವರ್ಣ ಶಿರ್ಲಾಲು, ಅಳದಂಗಡಿ ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ವಸಂತ ಪೂಜಾರಿ ನೀರಲ್ಕೆ, ಗೆಜ್ಜೆಗಿರಿ ಬಡಗಕಾರಂದೂರು ಗ್ರಾಮ ಸಮಿತಿಯ ಅಧ್ಯಕ್ಷರೂ, ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಧರ್ಣಪ್ಪ ಪೂಜಾರಿ ದೋರಿಂಜ, ಕಾರ್ಯದರ್ಶಿ ಆನಂದ ಪೂಜಾರಿ ನೀರಲ್ಕೆ, ಮಹಿಳಾ ಸಮಿತಿಯ ಅಧ್ಯಕ್ಷರಾದ ವನಿತಾ ರಾಜೇಂದ್ರ ಉಂಗಿಲ ಬೈಲು, ಕಾರ್ಯದರ್ಶಿ ರಕ್ಷಾ ಅಭಿಷೇಕ್ ಪೂಜಾರಿ ನೀರಲ್ಕೆ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾದ ಸುಮಲತಾ ಪೂಜಾರಿ ನೀರಲ್ಕೆ, ವಾಸು ಪೂಜಾರಿ, ಸರಸ್ವತಿ, ಸತ್ಯವತಿ, ಯಶೋಧರ ಪೂಜಾರಿ ಬಿಕ್ಕಿರ, ಅಭಿಷೇಕ್ ಪೂಜಾರಿ ನೀರಲ್ಕೆ, ನಳಿನಿ, ರಾಜವತಿ, ಚೇತನ ಸಂದೀಪ್, ವಿಜಯ, ಸುಜಾತ, ಸುಂದರಿ, ಕುಸುಮಾವತಿ,ಜಿನ್ನಪ್ಪ ಪೂಜಾರಿ, ವಿಕೇಶ್, ಶರತ್, ಜಯ ಪೂಜಾರಿ, ಚಂಪಾ ದಯಾನಂದ, ಸುಧಾ ಹಾಗೂ ಬಡಗಕಾರಂದೂರು ಗ್ರಾಮದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಳದಂಗಡಿ ವಲಯ ಸಂಚಾಲಕರಾದ ಕೊರಗಪ್ಪ ಪೂಜಾರಿ ನೀರಲ್ಕೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು, ವಸಂತ ಪೂಜಾರಿ ನೀರಲ್ಕೆ ಯವರು ಬಂದ ಅತಿಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.

Related posts

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡುವಂತೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಅರಣ್ಯ ಸಚಿವರಿಗೆ ಮನವಿ

Suddi Udaya

ಮಾ. 2: ಮುಗೇರಡ್ಕ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಆಹಾರ ಮೇಳ: ಚಪ್ಪರ ಮೂಹೂರ್ತ

Suddi Udaya

ಅಂಬರ ಮರ್ಲೆರ್” ರಿಟರ್ನ್ಸ್ ತುಳು ಧಾರಾವಾಹಿಯ ತಂಡಕ್ಕೆ ಶಾಸಕ ಹರೀಶ್ ಪೂಂಜರವರಿಂದ ಶುಭ ಹಾರೈಕೆ

Suddi Udaya

ಶಿಶಿಲ: ದಿ. ಧರ್ಣಪ್ಪ ಗೌಡ ರವರ ಸ್ಮರಣಾರ್ಥ ಕೊರಗಪ್ಪ ಗೌಡರಿಂದ ನಂದಗೋಕುಲ ಗೋಶಾಲೆಗೆ ದೇಣಿಗೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ ರೂ.1 ಲಕ್ಷ ದೇಣಿಗೆ

Suddi Udaya

ಬೆಳ್ತಂಗಡಿ ಗೃಹರಕ್ಷಕದಳ ಘಟಕಾಧಿಕಾರಿ ಜಯಾನಂದರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’

Suddi Udaya
error: Content is protected !!