37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಉಪ್ಪಿನಂಗಡಿ ಶಾಖೆ ಸ್ಥಳಾಂತರಗೊಂಡು ಶುಭಾರಂಭ

ಉಪ್ಪಿನಂಗಡಿ : ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯು ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಬಳಿಯ ವೆಂಕಟರಮಣ ಕಟ್ಟಡಕ್ಕೆ ಸ್ಥಳಾಂತರಗೊಂಡು ಇತ್ತೀಚೆಗೆ ಶುಭಾರಂಭಗೊಂಡಿತು.

ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾ ಕಚೇರಿ ಉದ್ಘಾಟಿಸಿ, ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಭಗೀರಥ ಜಿ., ನಮ್ಮ ಸಂಸ್ಥೆಯು ದ.ಕ ಮತ್ತು ಉಡುಪಿ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಒಟ್ಟು 26 ಶಾಖೆಗಳನ್ನು ಹೊಂದಿದೆ. ಉಪ್ಪಿನಂಗಡಿಯ ಈ ಶಾಖೆ 9 ನೆಯದ್ದಾಗಿದೆ. ನಮ್ಮ ಸಂಘವು ಲೆಕ್ಕ ಪರಿಶೋಧನೆಯಲ್ಲಿ ಎ ತರಗತಿಯನ್ನು ಪಡೆಯುತ್ತಿದ್ದು, ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿಯನ್ನು ಸಾಧಿಸುತ್ತಿದೆ. 52 ಸಾವಿರಕ್ಕೂ ಮಿಕ್ಕಿ ಸದಸ್ಯ ಬಲವಿದ್ದು, 291ಕೋಟಿ ರೂ. ಗೂ ಮಿಕ್ಕಿ ಠೇವಣಿಯನ್ನು ಹೊಂದಿದೆ. 257 ಕೋಟಿ ರೂ. ಸಾಲ ಹಂಚಿಕೆ ಮಾಡಿದ್ದು, 1250 ಕೋಟಿ ರೂ. ಗೂ ಮಿಕ್ಕಿ ವ್ಯವಹಾರ ನಡೆಸುತ್ತಿದೆ. ಸಂಘದ ಪ್ರಗತಿಗೆ ಆಡಳಿತ ಮಂಡಳಿ ನಿರ್ದೇಶಕರು, ಗ್ರಾಹಕರು ಹಾಗೂ ಸಿಬ್ಬಂದಿಗಳ ಪರಿಶ್ರಮವೇ ಕಾರಣ ಎಂದರು.

ಸಂಘದ ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಮಾತಾನಾಡಿ, ಸಂಘದ ಎಲ್ಲಾ ಶಾಖೆಗಳಲ್ಲಿ ಸಿಸಿ ಕ್ಯಾಮರಾ ಮತ್ತು ಭದ್ರತಾ ಕೊಠಡಿಯೊಂದಿಗೆ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕ್ರಿಯಾಶೀಲ ನಿರ್ದೇಶಕರನ್ನು ಹೊಂದಿರುವ ಸಂಘವು ಶೀಘ್ರದಲ್ಲಿ ಸಾಲ ಮಂಜೂರಾತಿ ಮಾಡುತ್ತಿದೆ. ಸ್ಫರ್ಧಾತ್ಮಕ ಬಡ್ಡಿ ದರದಲ್ಲಿ ಕೃಷಿಯೇತರ ಎಲ್ಲಾ ತರದ ಸಾಲ ಸೌಲಭ್ಯಗಳು ಇಲ್ಲಿ ಲಭ್ಯವಿದೆ. ಅತೀ ಶೀಘ್ರದಲ್ಲಿ ಚಿನ್ನಾಭರಣ ಸಾಲವನ್ನು ನೀಡಲಾಗುತ್ತಿದೆ. ಇ- ಸ್ಟಾಂಪಿಂಗ್ ಸೌಲಭ್ಯ, ಠೇವಣಿಗಳಿಗೆ ಆಕರ್ಷಕ ಬಡ್ಡಿದರ, ಆರ್‌ಟಿಜಿಎಸ್ /ನೆಫ್ಟ್ ಸೌಲಭ್ಯಗಳನ್ನು ಹೊಂದಿದೆ. ಹಿರಿಯ ನಾಗರಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಶೇ.೦.೫ ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ. ವಿದೇಶಿ ಹಣ ವರ್ಗಾವಣೆ ಸೌಲಭ್ಯವೂ ಇಲ್ಲಿದೆ. ಅಲ್ಲದೇ, ಗ್ರಾಹಕರಿಗೆ ಆಯ್ದ ಶಾಖೆಗಳಲ್ಲಿ ಸೇಫ್ ಲಾಕರ್ ಸೌಲಭ್ಯವಿದೆ. ಇಫ್ಕೋ-ಟೋಕಿಯೋ ವಿಮಾ ಸೌಲಭ್ಯವು ಇದ್ದು ಆರ್‌ಟಿಸಿಯು ದೊರೆಯುತ್ತದೆ. ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಶ್ರೀಗುರುದೇವ ‘ಅಭ್ಯುದಯ’ಠೇವಣಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀಗುರುದೇವ ‘ಅರಿವು’ಠೇವಣಿ ಹಾಗೂ ಪಿಂಚಣಿ ಯೋಜನೆಗಾಗಿ ಶ್ರೀ ಗುರುದೇವ ‘ಆಸರೆ’ ಠೇವಣಿ ಸೌಲಭ್ಯ ಇಲ್ಲಿ ಲಭ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣನ್ಯಾಕ್, ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಉದ್ಯಮಿ ವರದರಾಜ್ ಎಂ., ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಜ್ ಕುಮಾರ್ ಸುಣ್ಣಾಜೆ, ಉದ್ಯಮಿ ಕರುಣಾಕರ ಸುವರ್ಣ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಸ್ತಿಕ್ಕಾರ್, ಕಟ್ಟಡ ಮಲಕ ಎಚ್.ವಾಸುದೇವ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಸಂಘದ ನಿರ್ದೇಶಕರಾದ ಆನಂದ ಪೂಜಾರಿ ಸರ್ವೆದೋಳ, ಚಿದಾನಂದ ಪೂಜಾರಿ ಎಲ್ಡಕ್ಕ, ಸಂಜೀವ ಪೂಜಾರಿ, ಚಂದ್ರಶೇಖರ್, ಗಂಗಾಧರ ಮಿತ್ತಮಾರು, ಜಯವಿಕ್ರಮ ಪಿ ಕಲ್ಲಾಪು, ಸೂರಜ್ ಕುಮಾರ್, ಉಪ್ಪಿನಂಗಡಿ ಶಾಖಾ ವ್ಯವಸ್ಥಾಪಕ ಪ್ರಶಾಂತ್, ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.


ಸಂಘದ ಪಿಗ್ಮಿ ಸಂಗ್ರಾಹಕರಾದ ಮಧುಶ್ರೀ, ವಿಜೇತ್ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕ ಡಾ. ರಾಜಾರಾಮ್ ಕೆ.ಬಿ ಸ್ವಾಗತಿಸಿದರು. ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಮಂಡಲದ ಸದಸ್ಯರಿಂದ 100ಕ್ಕಿಂತ ಹೆಚ್ಚು ಸದಸ್ಯತ್ವ ನಡೆಸಿ ರಾಜ್ಯಕ್ಕೆ ಮಾದರಿ

Suddi Udaya

ಉಜಿರೆ: ಮಿತ್ರ ಯುವಕ ಮಂಡಲದಿಂದ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya

ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ರೂ. 20 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ

Suddi Udaya

ಸುಲ್ಕೇರಿಮೊಗ್ರು : ಗುರು ಪೂಜೆ ಮತ್ತು ದೀಕ್ಷಾ ಗ್ರಂಥಿದಾರಣೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ಐಟಿ ಕ್ಲಬ್ ನ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!