
ಬೆಳ್ತಂಗಡಿ: 2013 ನ.11ರಂದು ಚಿತ್ರಶೇಖರ ಮಡಂತ್ಯಾರ್ ಎಂಬರಿಗೆ, ಆರೋಪಿ ಆಲ್ವಿನ್ ರೊಡ್ರಿಗಸ್,( 53 ವ) ಪಾರೆಂಕಿ ಗ್ರಾಮ ಎಂಬವರು ಹಲ್ಲೆ ಮಾಡಿದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರ 65/2013 ಕಲಂ 324,504 IPC ಪ್ರಕರಣದಲ್ಲಿ ನ್ಯಾಯಲಯಕ್ಕೆ ಹಾಜರಾಗದೆ ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಸದ್ರಿಯವರನ್ನು ಬೆಂಗಳೂರು ನಗರ ವ್ಯಾಪ್ತಿಯ ಸಂಪಿಗೆ ರಾಮನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.






