23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ “ಅಕ್ಷಯ ಪಾಕಶಾಲೆ” ಶಾಸಕ ಹರೀಶ್ ಪೂಂಜರಿಂದ ಲೋಕಾರ್ಪಣೆ: ಸಂಘದಿಂದ ರೂ. 70 ಸಾವಿರ ವೈದ್ಯಕೀಯ ನೆರವು

ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನೂತನ “ಅಕ್ಷಯ ಪಾಕಶಾಲೆ” ಇದರ ಲೋಕಾರ್ಪಣೆಯು ಫೆ.15 ರಂದು ನಡೆಯಿತು.

ಶಾಸಕ ಹರೀಶ್ ಪೂಂಜರವರು ನೂತನ ಅಡುಗೆ ಕೊಠಡಿ “ಅಕ್ಷಯ ಪಾಕಶಾಲೆಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಿದರು. ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ, ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಗುಜರಾತ್ ದ್ವಾರಕಾ ರೆಸ್ಟೋರೆಂಟ್ ಮಾಲಕ ಶೇಖರ್ ದೇವಾಡಿಗ ಪಾಲಬೆ, ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಸುಭಾಶ್ ಆರ್. ಸುವರ್ಣ. ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್ ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್,ಪ್ರಧಾನ‌ ಕಾರ್ಯದರ್ಶಿ ರಂಜಿತ್ ಪೂಜಾರಿ ಮಜಲಡ್ಡ,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್,ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್ ಉಪಸ್ಥಿತರಿದ್ದರು.

ಸಂಘದ ನೂತನ‌ ಅಕ್ಷಯ ಪಾಕಶಾಲೆಗೆ ರೂ.26 ಲಕ್ಷ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ, ಭಾರತೀಯ ವೈದ್ಯಕೀಯ ಸಂಘದ ದ.ಕ ಅಧ್ಯಕ್ಷ ಡಾ.ಸದಾನಂದ ಪೂಜಾರಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ಶ್ರೀ ಗು.ನಾ‌.ಸ್ವಾ‌.ಸೇ.ಸಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು,ಅಕ್ಷಯ ಪಾಕಶಾಲೆಯ ಗುತ್ತಿಗೆದಾರ ಪ್ರತೀಶ್ ಪೆರಿಂಜೆ ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರನ್ನ ಗೌರವಿಸಿ ಸನ್ಮಾನಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ವರದರಾಜ್ ಪೂಜಾರಿ ಅಲ್ಲಿಂತ್ಯಾರು ರವರಿಗೆ ಸಂಘದಿಂದ ರೂ. 70ಸಾವಿರ ಹಸ್ತಾಂತರಿಸಲಾಯಿತು.

ಸಂಘದ ಆಡಳಿತ ಮಂಡಳಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಸಂತೋಷ್ ಕುಮಾರ್ ಕಾಪಿನಡ್ಕ,ದಿನೇಶ್ ನಿಟ್ಟಡ್ಕ,ಯತೀಶ್ ವೈ.ಎಲ್, ದಿನೇಶ್ ಪೂಜಾರಿ‌ ಅಂತರ, ಜಗದೀಶ್ ಪೂಜಾರಿ ಬಳ್ಳಿದಡ್ಡ, ವಿಜಯ ಪೂಜಾರಿ ಯೈಕುರಿ, ಮನೋಹರ್ ಬಳಂಜ, ರತ್ನಾಕರ ಪೂಜಾರಿ ಕೆಂಪುಂರ್ಜ,ಸಂತೋಷ್ ಕುಮಾರ್ ಹಿಮರಡ್ಡ, ಯೋಗೀಶ್ ಪೂಜಾರಿ ಕೊಂಗುಳ, ದೀಪಕ್ ಹೆಚ್.ಡಿ, ಪ್ರವೀಣ್ ಡಿ ಕೋಟ್ಯಾನ್, ಪ್ರದೀಪ್ ಕಾಪಿನಡ್ಕ, ಸಂತೋಷ್ ಪೂಜಾರಿ ಕಡೆಂಗಾಲು, ಸತೀಶ್ ಕೋಟ್ಯಾನ್ ಹುಂಬೆಜೆ, ಸಂಧ್ಯಾ ಹೆಚ್.ಡಿ ಹಾಗೂ ಪೂರ್ವಾದ್ಯಕ್ಷರು, ಸದಸ್ಯರು ಅತಿಥಿ-ಗಣ್ಯರನ್ನು ಗೌರವಿಸಿದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಹಿಳಾ ಬಿಲ್ಕವ ವೇದಿಕೆ ಪೂರ್ವಾದ್ಯಕ್ಷೆ ವಿಶಾಲ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಪೂರ್ವಾಧ್ಯಕ್ಷ ರಂಜಿತ್ ಹೆಚ್.ಡಿ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಸಮಿತಿ ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್ ವಂದಿಸಿದರು.

ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿಯ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Related posts

ವೇಣೂರು ಯಕ್ಷಗಾನ ಸಂಘದಿಂದ ತಾಳಮದ್ದಳೆ ಸೇವೆ

Suddi Udaya

ತೋಟತ್ತಾಡಿ: ಶಿವದಾಸ ಎಂ.ಎ. ನಿಧನ

Suddi Udaya

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ಎಸ್‌ ಡಿ ಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!