March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಕಡಿರುದ್ಯಾವರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಕಡಿರುದ್ಯಾವರ: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆ.25 ರಿಂದ ಮಾ. 1 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವ ಬಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಡಿರುದ್ಯಾವರ ಗ್ರಾಮದ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಫೆ.14 ರಂದು ನಡೆಯಿತು. ಮನೆಯ ಯಜಮಾನರಾದ ಅಶೋಕ ಕುಮಾರ್ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಜಾತ್ರೋತ್ಸವಕ್ಕೆ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿ ಸದಸ್ಯರೂ,ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕರಾದ ಶ್ರೀ ನಿತ್ಯಾನಂದ ನಾವರ ರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಕ್ಷೇತ್ರ ನಡೆದು ಬಂದ ಹಾದಿಯನ್ನು ವಿವರಿಸಿ ಜಾತ್ರಾ ಮಹೋತ್ಸವವನ್ನು ಯಶಸ್ಸು ಗಳಿಸುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ಗ್ರಾಮದ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರಕ್ಕೆ ಆಹ್ವಾನಿಸಿದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ್, ಸುಂದರ ಪೂಜಾರಿ, ಕೇಶವ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರವೀಣ ಪೂಜಾರಿ, ಪ್ರಶಾಂತಿ ಅಶೋಕ್ ಪೂಜಾರಿ, ಮನೀಶ್,ಮಾನ್ಯ ಯಶಸ್ ಪೂಜಾರಿ ಧ್ಯಾನೇಶ್ ಮುಂತಾದವರು ಹಾಜರಿದ್ದರು ಕಾರ್ಯಕ್ರಮವನ್ನು ಲಾಯಿಲ ವಲಯ ಸಂಚಾಲಕರಾದ ಚಂದ್ರಶೇಖರ್ ಇಂದಬೆಟ್ಟು ರವರು ಸಂಯೋಜಿಸಿ ಉಪಸ್ಥಿತರಿದ್ದರು,

Related posts

ಶ್ರೀ ಉಳ್ಳಾಲ್ತಿ ಗೆಳೆಯರ ಬಳಗದಿಂದ ಸಹಾಯ ಧನ

Suddi Udaya

ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಸೌತಡ್ಕ ಸೇವಾಧಾಮ ಪುನಶ್ವೇತನ ಕೇಂದ್ರಕ್ಕೆ ಹಣ್ಣು ಹಂಪಲು ವಿತರಣೆ

Suddi Udaya

ಸೌಜನ್ಯ ಕೊಲೆ ಪ್ರಕರಣ: ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ವೇಣೂರು ಮಹಾ ಮಸ್ತಕಾಭಿಷೇಕಕ್ಕೆ ಶಾಸಕ ಹರೀಶ್ ಪೂಂಜರವರಿಗೆ ಆಮಂತ್ರಣ ನೀಡಿ‌ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮಹಾ ಮಸ್ತಕಾಭಿಷೇಕ ಸಮಿತಿ ಪದಾಧಿಕಾರಿಗಳು

Suddi Udaya

ಬೆಳ್ತಂಗಡಿ : ಐಜಿಎನ್ಐಟಿಇ ಮ್ಯಾನೇಜ್ಮೆಂಟ್ ಫೆಸ್ಟ್ ಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಚಾಂಪಿಯನ್

Suddi Udaya

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ರೂ. 343.74 ಕೋಟಿ ಅನುದಾನ ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

Suddi Udaya
error: Content is protected !!