ಕೊಕ್ಕಡ: ಶ್ರೀ ಪಿಲಿಚಾಮುಂಡಿ ದೈವಸ್ಥಾನ ಮಾಸ್ತಿಕಲ್ಲು ಮಜಲು ಇಲ್ಲಿ 15ನೇ ವರ್ಷದ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಬಾಲಕೃಷ್ಣ ಕೆದಿಲಾಯರ ನೇತೃತ್ವದಲ್ಲಿ ಗಣ ಹೋಮ, ಕಲಶಾಭಿಷೇಕ, ದೈವಗಳಿಗೆ ತಂಬಿಲ ಸೇವೆ ಗ್ರಾಮಸ್ಥರ ಸಹಕಾರದಿಂದ ನಡೆಯಿತು.
ಈ ಸಂದರ್ಭದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯುವ ನೇಮೋತ್ಸವ ದ ಬಗ್ಗೆ ಸಭೆಯನ್ನು ನಡೆಸಲಾಯಿತು. ಕಳೆದ 15 ವರ್ಷದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುಶಾಲಪ್ಪ ಗೌಡ ಪುಡಿಕೆತ್ತೂರು ಇವರನ್ನು ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ , ಪುರುಷೋತ್ತಮ ನಾಯ್ಕ್, ಕೃಷ್ಣಪ್ಪ ಗೌಡ ಪೂವಾಜೆ, ಶ್ರೀನಿವಾಸ ಬಾಂತಿಮಾರು, ಸುಂದರ ಪೂಜಾರಿ ಅಂಕದಮಜಲು, ಕೋಟಿಯಪ್ಪ ಗೌಡ ಖಡೀರ, ಶ್ರೀಮತಿ ಅಶ್ವಿನಿ ಓಣಿತ್ತಾರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.











