24.6 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುತ್ಲೂರು ಪ್ರಕರಣ ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

ಬೆಳ್ತಂಗಡಿ : ಕುತ್ಲೂರು ಎಂಬಲ್ಲಿ 2012 ರಲ್ಲಿ ನಕ್ಸಲ್ ಕರಪತ್ರ ಹಚ್ಚಿದ ಪ್ರಕರಣಕ್ಕೆ ಸಂಬಂದಿಸಿದ್ದತೆ ನಕ್ಸಲ್ ಮಹೇಶ್ @ಜಯಣ್ಣ@ಜಾನ್ (49) ಅವರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಫೆ.19 ರಂದು ಗುರುವಾರ ಹಾಜರುಪಡಿಸಲಾಯಿತು.

ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಬಂಧಿತ ನಕ್ಸಲ್ ಮಹೇಶ್@ಜಯಣ್ಣ@ಜಾನ್ ಅವರನ್ನು ಕೇರಳ ರಾಜ್ಯದ ಪೊಲೀಸರು ಬಿಗಿ ಭದ್ರತೆಯೊಂದಿಗೆ ಫೆ. 19 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.


ಮೊಸ್ಟ್ ವಾಟೆಂಡ್ ನಕ್ಸಲ್ ಆಗಿದ್ದ ಮಹೇಶ್ ಮೂಲಃತ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕ‌ರ್ ಕಾಲನಿಯ ಮಹೇಶ್ ಆಲಿಯಾಸ್ ಜಯಣ್ಣ ಆಲಿಯಾಸ್ ಜಾನ್ ಆಲಿಯಾಸ್ ಮಾರಪ್ಪ ಎಂಬ ಹೆಸರುಗಳಿವೆ.

ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012 ರಲ್ಲಿ ಕುತ್ಲೂರು ಲಿಂಗಪ್ಪ ಮಲೆಕುಡಿಯ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರ ಹಚ್ಚಿದ್ದ ಪ್ರಕರಣವನ್ನು ಮರು ತನಿಖೆಗೆ ಆದೇಶ ಹೊರಡಿಸಿದ ಕಾರಣ ಅವರನ್ನು ಬೆಳ್ತಂಗಡಿ ನ್ಯಾಯಲಕ್ಕೆ ಹಾಜರು ಪಡಿಸಲಾಗಿದೆ. ಕಳೆದ ಆರು ತಿಂಗಳಿಂದ ಕೇರಳದ ಜೈಲಿನಲ್ಲಿದ್ದಾರೆಕರ್ನಾಟಕದ ನಕ್ಸಲ್ ಮುಖಂಡರುಗಳೊಂದಿಗೆ ಮಹೇಶ್ ಅವರೂ ರಾಜ್ಯದ ಸಿಎಂ ಮುಂದೆ ಶರಣಾತಿಯಾಗಿದ್ದರು.

Related posts

ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

Suddi Udaya

ಕೊಯ್ಯೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ, ಏರ್ ಟೆಲ್ ಸಂಸ್ಥೆಯ ಗಮನಕ್ಕೆ ತಂದರೂ ನಿರ್ಲಕ್ಷ್ಯ ಧೋರಣೆ: ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಪರವಾಗಿ ಅಶೋಕ್ ಪೂಜಾರಿ ಬಜಿಲ ಒತ್ತಾಯ

Suddi Udaya

ಡಿ.13: ಕಕ್ಕಿಂಜೆಯಲ್ಲಿ ಮರ್ಹೂಂ ಅಝ್ಲೀನ್ ಸಿದ್ದೀಕ್ ಸ್ಮರಣಾರ್ಥ ರಕ್ತದಾನ ಶಿಬಿರ

Suddi Udaya

ಪುಂಜಾಲಕಟ್ಟೆ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ ಜೀವಾವಧಿ ಶಿಕ್ಷೆ

Suddi Udaya

ಫೆ.15: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಹೊರಾಂಗಣಕ್ಕೆ ನಾರಾವಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ರೂ.9 ಲಕ್ಷ ವೆಚ್ಚದಲ್ಲಿ ಹಾಸುಕಲ್ಲು ಸಮರ್ಪಣೆ

Suddi Udaya

ಉಜಿರೆಯಲ್ಲಿ ಸ್ಕಿನ್ ಮತ್ತು ಹೇರ್ ಗೆ ಸಂಬಂಧಿಸಿದ ಕಾಸ್ಮೆಟಾಲಜಿ ಮತ್ತು ಟ್ರೈಕಾಲಜಿ ಕೇಂದ್ರದ ಉದ್ಘಾಟನೆ

Suddi Udaya
error: Content is protected !!