September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ, ಏರ್ ಟೆಲ್ ಸಂಸ್ಥೆಯ ಗಮನಕ್ಕೆ ತಂದರೂ ನಿರ್ಲಕ್ಷ್ಯ ಧೋರಣೆ: ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಪರವಾಗಿ ಅಶೋಕ್ ಪೂಜಾರಿ ಬಜಿಲ ಒತ್ತಾಯ

ಬೆಳ್ತಂಗಡಿ: ಕೊಯ್ಯುರು ಗ್ರಾಮದಲ್ಲಿ ಏರ್ಟೆಲ್ ನೆಟ್ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ಬೇಸತ್ತಿದ್ದು ಮಾತ್ರವಲ್ಲದೇ ಬದಲಿ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಕಳೆದ ಅದೆಷ್ಟೋ ಸಮಯದಿಂದ ನೆಟ್ವರ್ಕ್ ಸಮಸ್ಯೆ ಬಗ್ಗೆ ಏರ್ಟೆಲ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಅವರಿಗೆ ತಿಳಿಸಿದರೂ ಅದನ್ನು ಅವರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಹಕ ಅಶೋಕ್ ಪೂಜಾರಿ ಬಜಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಮುಖಾಂತರ ಏರ್ ಟೆಲ್ ಗಮನಕ್ಕೆ ತಂದರು ಸರಿಯಾದ ಸ್ಪಂದನೆ ಇಲ್ಲ. ಈ ಭಾಗದಲ್ಲಿ ಸರಿ ಸುಮಾರು 1 ಸಾವಿರಕ್ಕಿಂತಲೂ ಹೆಚ್ಚು ಮನೆಗಳಿದ್ದು, ಅನೇಕ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಎಜುಕೇಶನ್ ಗೆ ಸಂಬಂಧಪಟ್ಟ ವಿಚಾರ ತಿಳಿಯಲು ಕಷ್ಟಕರವಾಗಿದೆ‌.

ರಾತ್ರಿ ಸಮಯದಲ್ಲಿ ಎಲ್ಲಿಯಾದರೂ ಆರೋಗ್ಯದಲ್ಲಿ ಏರುಪೇರು ಆದಾಗ ಒಂದು ಆಟೋ ಅಥವಾ ನೆರೆಕರೆಯವರಿಗೆ ಕರೆ ಮಾಡಲು ನೆಟ್ವರ್ಕ್ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದೆ.

ಆದುದರಿಂದ ನಮಗೆ ಬೇರೆ ಉಪಾಯವಿಲ್ಲದೆ ಅನಿವಾರ್ಯವಾಗಿ ಬೇರೆ ಖಾಸಗಿ ನೆಟ್ವರ್ಕ್ಗೆ ಪೋರ್ಟ್ ಹೋಗಬೇಕಾಗುತ್ತದೆ, ಈ ಏರ್ಟೆಲ್ ಸಂಸ್ಥೆ ಕೇವಲ ಜನರ ಕೈಯಿಂದ ಹಗಲು ದರೋಡೆ ಮಾಡಲು ಹೊರಟಿದೆ, ಆದುದರಿಂದ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಸ್ಥರು ಸೇರಿ ಪ್ರತಿಭಟನೆ ಮಾಡಬೇಕಾಗಬಹುದೆಂದು ಪತ್ರಿಕಾ ಪ್ರಕಟನೆ ಮೂಲಕ ಎಚ್ಚರಿಸಲು ಬಯಸುತ್ತೇವೆಂದು ನೊಂದ ಏರ್ಟೆಲ್ ಗ್ರಾಹಕ ಅಶೋಕ ಪೂಜಾರಿ ಬಜಿಲ ತಿಳಿಸಿದ್ದಾರೆ.

Related posts

ವೇಣೂರು ಯುವವಾಹಿನಿ ಘಟಕದ ವತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮ

Suddi Udaya

ಕನ್ಯಾಡಿ I : ನೇರೊಳ್ದಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಮತ್ತು ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

Suddi Udaya

ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಗುಡ್ ಫ್ಯೂಚರ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಜನಸ್ಪಂದನ ಸಭೆ: ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ

Suddi Udaya

ಲಾಯಿಲ ಬಂಟರ ಗ್ರಾಮ ಸಮಿತಿಯ ಮಾಸಿಕ ಸಭೆ

Suddi Udaya
error: Content is protected !!