38.6 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಕ್ರಮ ಕೋಳಿ ಅಂಕ- ಧರ್ಮಸ್ಥಳ ಪೊಲೀಸರ ದಾಳಿ: ಏಳು ಆರೋಪಿಗಳ ಬಂಧನ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಪುರುಷರಗುಡ್ಡೆ ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಫೆ.19 ರಂದು ಸಂಜೆ 3:30 ಸುಮಾರಿಗೆ ಧರ್ಮಸ್ಥಳ ಪೊಲೀಸರು ದಾಳಿ ವೇಳೆ ಆರು ಕೋಳಿ, ಮೂರು ಸಾವಿರ ಹಣ ಹಾಗೂ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ರಮ ಕೋಳಿ ಅಂಕದಲ್ಲಿದ್ದ ನಾವೂರು ನಿವಾಸಿ ಹರಿಶ್ಚಂದ್ರ ,ತೋಟತ್ತಾಡಿ ನಿವಾಸಿ ರಮೇಶ್, ಚಾರ್ಮಾಡಿ ನಿವಾಸಿ ಸುಧಾಕರ, ಚಾರ್ಮಾಡಿ ನಿವಾಸಿ ಅಶೋಕ್, ಬೆಳ್ತಂಗಡಿಯ ಪುಷ್ಪರಾಜ್, ನಾವೂರು ನಿವಾಸಿ ಶ್ರೀಧರ್, ಚಿಬಿದ್ರೆ ನಿವಾಸಿ ಚೆನ್ನಪ್ಪ ಬಂಧಿತ ಆರೋಪಿಗಳು.

ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿ ಎ.ಎಸ್.ಐ ಬಾಲಕೃಷ್ಣ,ಮಲ್ತೇಶ್, ಚರಣ್ ರಾಜ್ ,ಶೇಷಣ್ಣ,ಮಧು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಶ್ರೀ ದೇವರಿಗೆ ವಿಶೇಷ ಪೂಜೆ

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಫ್ಯಾನ್ ವಿತರಣೆ

Suddi Udaya

ಕ್ಯಾನ್ ಫಿನ್ ಹೋಮ್ ಲಿ.ನಿಂದ ಸಿ.ಎಸ್.ಆರ್ ಫಂಡ್ ಹಸ್ತಾಂತರ

Suddi Udaya

ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಬೆಂಕಿ ರಹಿತ ಅಡುಗೆ ಸ್ಪರ್ಧೆ

Suddi Udaya

ಅಕ್ರಮ ಮದ್ಯ ಮಾರಾಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಉಜಿರೆ ಶ್ರೀಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!