September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮಸ್ಥರ ಮನವಿ

ಅಳದಂಗಡಿ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.20ರಂದು ಗ್ರಾ.ಪಂ. ಆಡಳಿತ ಅಧಿಕಾರಿ ಬಸವಲಿಂಗಪ್ಪ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಜೋಸೆಫ್ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್ ನ 5ಸೆನ್ಸ್ ಕಾಲೋನಿಯಲ್ಲಿ ವಿಪರೀತ ನೀರಿನ ಸಮಸ್ಯೆಯಿದ್ದು, ಕೊಳವೆ ಬಾವಿಯ ವ್ಯವಸ್ಥೆ ಆಗಬೇಕು. ಈ ಭಾಗದ ಜನರಿಗೆ ಬೇರೆ ನೀರಿನ ಮೂಲಗಳು ಇಲ್ಲ. ಮುಂಬರುವ 2,3 ತಿಂಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸದಾನಂದ ಪೂಜಾರಿ ಉಂಗಿಲಬೈಲು ಕಳವಳ ವ್ಯಕ್ತಪಡಿಸಿದರು.

ಜಲ ಜೀವನ್ ಮಿಷನ್ ಯೋಜನೆಯ ಟ್ಯಾಂಕ್ ಗೆ ನೀರು ತುಂಬಿಸುವ ಕಾರ್ಯ ಆಗಬೇಕಿದೆ. ಗ್ರಾಮದ ಮಕ್ಕಿಂಜೆ, ಪಿಲ್ಯ ಮಾರಿಗುಡಿ 5ಸೆನ್ಸ್ ನಲ್ಲಿ ನೀರಿನ ಸಮಸ್ಯೆಗಳಿದ್ದು, ರಾತ್ರಿಯಿಡಿ ಬೇರೆಯವರು ನೀರನ್ನು ದುರುಪಯೋಗ ಮಾಡುತ್ತಿದ್ದಾರೆ. ಮರುದಿನ ಬೆಳಗ್ಗೆ ನಮಗೆ ಕೆಸರು ನೀರು ಕುಡಿಯುವ ದುಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹರೀಶ್ ಆಚಾರ್ಯ, ಶೀನ ಪಿಲ್ಯ, ಶಿವರಾಮ್ ಸೇರಿದಂತೆ ಗ್ರಾಮಸ್ಥರು ನೀರಿನ ಅಭಾವದ ಬಗ್ಗೆ ತಿಳಿಸಿದರು. ಕುಡಿಯುವ ನೀರನ್ನು ತೋಟ ಹಾಗೂ ಇನ್ನಿತರ ಬಳಕೆಗೆ ದುರುಪಯೋಗ ಪಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡೆಲ್ ಅಧಿಕಾರಿ ಜೋಸೆಫ್ ಪಂಚಾಯತ್ ಗೆ ಆದೇಶಿಸಿದರು.

ಚರ್ಚ್ ಶಾಲಾ ಬಳಿಯ ರಸ್ತೆ ಬದಿಗಳಲ್ಲಿ ಇರುವ ಮರದ ಗೆಲ್ಲುಗಳು ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದು, ಕೊಂಬೆಗಳನ್ನು ಕಡಿಯುವ ಕೆಲಸವಾಗಬೇಕು. ಸರ್ವೇ ನಂಬರ್ 54ರಲ್ಲಿ 3ಪಿ1 ಮನೆ ನಿವೇಶನೆಗೆ ಕಾಯ್ದಿರಿಸಬೇಕು ಎಂದು ಧರ್ಣಪ್ಪ ಪೂಜಾರಿ ತಿಳಿಸಿದರು.

ಉದ್ಯೋಗದ ನಿಟ್ಟಿನಲ್ಲಿ ಹೊರ ರಾಜ್ಯದಿಂದ ಬಂದಂತವರ ದಾಖಲೆಗಳನ್ನು ಪಡೆದುಕೊಳ್ಳುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಬೊಲ್ಲಗುಡ್ಡೆಯ ಪ.ಜಾತಿ, ಪ. ಪಂಗಡದ ಕಾಲೋನಿ ಬಳಿ ದಾರಿದೀಪ ಅಳವಡಿಸಬೇಕು. 9/11 ಹಾಗೂ ಮೂಲಭೂತ ಸೌಕರ್ಯಗಳಿಗೆ ಪಂಚಾಯತ್ ಒಪ್ಪಿಗೆಪತ್ರವನ್ನು ನೀಡಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು.

ಗ್ರಾಮ ಆಡಳಿತ ಅಧಿಕಾರಿ ಚೆನ್ನಕೇಶವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗ್ರಾಮ ಸಭೆಯಲ್ಲಿ ಆರೋಗ್ಯಕರ ಚರ್ಚೆ ನಡೆದಿದ್ದು, ನೀರಿನ ಸಮಸ್ಯೆಗಳ ಬಗ್ಗೆ ಎಲ್ಲಾ ಗ್ರಾಮದಲ್ಲೂ ಚರ್ಚೆಗಳು ನಡೆಯುತ್ತಿದೆ. ನೀರನ್ನು ದುರುಪಯೋಗ ಪಡಿಸಿಗೊಳ್ಳದೆ ಮಿತವಾಗಿ ಬಳಸುವ ಅಗತ್ಯವಿದೆ. ಗ್ರಾಮದ ಯಾವುದೇ ಸಮಸ್ಯೆಗಳು ಇದ್ದಲ್ಲಿ, ನನಗೆ ತಿಳಿಸಿ, ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದರು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜಮಾ ಖರ್ಚು ವಿವರ, ವಾರ್ಡ್ ಸಭೆ ಬೇಡಿಕೆಯನ್ನು ಸಭೆಗೆ ಮಂಡಿಸಿದರು. ಪಂಚಾಯತ್ ಲೆಕ್ಕಸಹಾಯಕ ಪೂವಪ್ಪ ಮಲೆಕುಡಿಯ ಸ್ವಾಗತಿಸಿ, ವಂದಿಸಿದರು.

Related posts

ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ 2025: ಸಾನ್ವಿ ಎಸ್ ಕೋಟ್ಯಾನ್ ಬಳಂಜರವರಿಗೆ ಪ್ರಶಸ್ತಿ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಪ್ರತಿನಿಧಿಸಿದ ತಂಡ ರಾಷ್ಟ್ರಮಟ್ಟದಲ್ಲಿ ಪ್ರಥಮ

Suddi Udaya

ಬೆಳ್ತಂಗಡಿ: ಪವರ್ ಆನ್‌ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10ರಿಂದ 50 ರಷ್ಟು ರಿಯಾಯಿತಿ

Suddi Udaya

ಧರ್ಮಸ್ಥಳ : ಇಬ್ಬರು ಸರಕಳ್ಳಿಯರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಸೌತಡ್ಕ ಶ್ರೀ ಕಾಮಧೇನು ಗೋಶಾಲೆಗೆ ಡಾ. ಪ್ರಸನ್ನ ಹೆಬ್ಬಾರ್ ಭೇಟಿ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಡೆಂಗ್ಯೂ ತಡೆಗಟ್ಟುವ ಅಭಿಯಾನ

Suddi Udaya
error: Content is protected !!