September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಫೆ.21: ಸಹೋದರಿಯರಾದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಯವರ ಭರತನಾಟ್ಯ ರಂಗಪ್ರವೇಶ

ಬೆಳ್ತಂಗಡಿ: ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್‌ರಾವ್ ಅವರ ವಿದ್ಯಾರ್ಥಿಗಳಾದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಇವರ ಭರತನಾಟ್ಯ ರಂಗಪ್ರವೇಶವು ಫೆ. 21ರಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿನವ ಡಾನ್ಸ್ ಕಂಪೆನಿಯ ನಿರುಪಮಾ ಮತ್ತು ರಾಜೇಂದ್ರ ಟಿ.ಡಿ, ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್‌ನ ವಿದ್ವಾನ್ ಚಂದ್ರಶೇಖರ ನಾವಡ, ಎಸ್.ಡಿ.ಎಂ. ಸೊಸೈ ಟಿಯ ಕಾರ್ಯದರ್ಶಿಗಳಾದ ಸತೀಶ್ಚಂದ್ರ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ಶರತ್ ಕೃಷ್ಣ ಪಡ್ಡೆಟ್ನಾಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಧರಿತ್ರಿ ಮತ್ತು ಹಂಸಿನಿ ಬೆಳ್ತಂಗಡಿಯ ಕಲ್ಮಂಜ ನಿವಾಸಿ, ಸುದ್ದಿ ಉದಯ ಪತ್ರಿಕಾ ವಿತರಕರಾದ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆ ದಂಪತಿಯ ಪುತ್ರಿಯರು.

Related posts

ಶಿಶಿಲದಿಂದ ಪೇರಿಕೆ ಹೋಗುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಸಂಚಾರಕ್ಕೆ ತೊಂದರೆ

Suddi Udaya

ಹಿರಿಯ ಕಾಂಗ್ರೆಸ್ ಮುಖಂಡ ಲಿಂಗಪ್ಪ ಗೌಡ ನಿಧನ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಲಾಯಿಲ ಸೈಂಟ್ ಮೆರೀಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ “ಮನೆ ಮನೆಗೆ ಗಂಗಾಜಲ”

Suddi Udaya

ನಿಡ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ರಝಾಕ್ ನೇಮಕ

Suddi Udaya
error: Content is protected !!