ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಂದುಕೊರತೆ ಸಭೆ

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿದ್ಯಾರ್ಥಿ ವೇತನ ವೃದ್ಧಾಪ್ಯ ಪಿಂಚಣಿ, ಮರಣ ಮತ್ತು ಇತರ ಸಹಾಯಧನಗಳ ಪಾವತಿ ಆಗದ ದೂರಿನ ಕುರಿತು ಕಾರ್ಮಿಕರ ಕುಂದು ಕೊರತೆ ಸಭೆಯನ್ನು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಹಾಗೂ ಬೆಳ್ತಂಗಡಿ ಪ್ರಭಾರ ಕಾರ್ಮಿಕ ನಿರೀಕ್ಷಕರಾದ ವೀರೇಂದ್ರ ಕಂಬಾರ್ ಉಪಸ್ಥಿತರಿದ್ದರು.

ಹಲವಾರು ಕಾರ್ಮಿಕರು ವ್ರದ್ಧಾಪ್ಯ ಪಿಂಚಣಿ, ಮದುವೆ , ಮರಣ ಸಹಾಯಧನ, ಕುಟುಂಬ ಪಿಂಚಣಿ ಹಾಗೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಬರದಿರುವ ಕುರಿತು ಕಾರ್ಮಿಕರು ಶಾಸಕರಲ್ಲಿ ದೂರು ನೀಡಿದರು. ಈ ಸಂದರ್ಭ ವಿವರವಾಗಿ ಶಾಸಕರು ಈ ಬಗ್ಗೆ‌ ಮಾಹಿತಿ ಪಡೆದುಕೊಂಡು ಕಾರ್ಮಿಕ ಅಧಿಕಾರಿಗಳಿಗೆ ಸೂಕ್ತ ಪರಿಹಾರವನ್ನು ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜೈ ರಾಜ್ ಸಾಲಿಯಾನ್ ಕಾನರ್ಪ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ತಾಲೂಕು ಅಧ್ಯಕ್ಷ ಉದಯ ಬಿಕೆ, ತಾಲೂಕು ಸಂಯೋಜಕ ಶಾಂತಪ್ಪ ಕಲ್ಮಂಜ, ಬಿಎಂಎಸ್ ಪ್ರಮುಖರಾದ ಗಣೇಶ್ ಪೂಜಾರಿ ಪೆರಾಡಿ, ಉದಯ್ ಕುಮಾರ್ ಉಜಿರೆ ಹಾಗೂ ಇನ್ನಿತರ ಕಾರ್ಮಿಕರು ಉಪಸ್ಥಿತರಿದ್ದರು.

Related posts

ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಮನವಿ

Suddi Udaya

ಮದ್ದಡ್ಕ: ಕಾರಿನೊಳಗೆ ಸಿಲುಕಿಕೊಂಡ ಮಗು: ಪ್ರಾಣಾಪಾಯದಿಂದ ಪಾರು

Suddi Udaya

ಉಜಿರೆ ವರ್ತಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ: 9 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

Suddi Udaya

ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ ಉಷಾ. ಕೆ ರವರು ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ

Suddi Udaya

ಓಡೀಲು ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉಡುಪಿ ಪೇಜಾವರ ಸ್ವಾಮೀಜಿ ಬೇಟಿ

Suddi Udaya
error: Content is protected !!