37.9 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿ

ಶಾಸಕರ ಕಾರ್ಮಿಕ ಪರ ಬದ್ಧತೆ – ಬಿಎಮ್‌ಎಸ್ ಸ್ವಾಗತ; ಅನಿಲ್ ಕುಮಾರ್ ಯು

ಬೆಳ್ತಂಗಡಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳ ಕುರಿತು ನಿನ್ನೆ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ, ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಿದ್ದು ಗಮನಾರ್ಹವಾಗಿದೆ.ಸಭೆಯಲ್ಲಿ ಕೆಲವೊಂದು ಕಾರ್ಮಿಕರ ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಲ್ಪಟ್ಟಿದ್ದು, ಬಾಕಿ ಇರುವ ಪ್ರಕರಣಗಳ ಕುರಿತು ಮೇಲಾಧಿಕಾರಿಗಳ ಮಟ್ಟದಲ್ಲಿ ವಿಶೇಷ ಸಭೆ ನಡೆಸಿ, ಬಿಎಮ್‌ಎಸ್ ಪ್ರಮುಖರನ್ನು ಸೇರಿಸಿಕೊಂಡು ಅವರ ಸಮ್ಮುಖದಲ್ಲೇ ಸಮಗ್ರ ಪರಿಹಾರ ಒದಗಿಸುವುದಾಗಿ ಶಾಸಕರು ಭರವಸೆ ನೀಡಿದರು.

ಇದಕ್ಕಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಸ್ವತಃ ಮಾಡುವುದಾಗಿ ಅವರು ತಿಳಿಸಿರುವುದು ಕಾರ್ಮಿಕರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಮ್‌ಎಸ್ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು ಅವರು, ನಮ್ಮ ಶಾಸಕರು ಕಾರ್ಮಿಕರ ಪರ ತಮ್ಮ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. ಬಿಎಮ್‌ಎಸ್ ಸದಾ ಶಾಸಕರೊಂದಿಗೆ ಕೈಜೋಡಿಸಿ ಕಾರ್ಮಿಕರ ಹಿತಾಸಕ್ತಿಗೆ ಕೆಲಸ ಮಾಡುತ್ತದೆ. ನಮ್ಮ ಶಾಸಕರೂ ಕಾರ್ಮಿಕರ ಪರ ಸದಾ ನಿಲ್ಲಬೇಕು ಎಂಬುದು ನಮ್ಮ ಮನದಾಳದ ನಿರೀಕ್ಷೆ, ಎಂದು ತಿಳಿಸಿದ್ದಾರೆ. ಸಭೆಯ ಈ ಬೆಳವಣಿಗೆ ಬೆಳ್ತಂಗಡಿ ತಾಲೂಕಿನ ಕಾರ್ಮಿಕರಿಗೆ ಆಶಾಭಾವನೆಯ ಸಂದೇಶ ನೀಡಿದೆ.

Related posts

ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕೊಕ್ಕಡ ನಗರ ಭಜನಾ ಸಪ್ತಾಹದ ಅಂಗವಾಗಿ ಪಿಲಿ ನಲಿಕೆ -2025 ರ ಆಮಂತ್ರಣ ಪತ್ರಿಕೆ ನೀಡಿ, ಆಹ್ವಾನ

Suddi Udaya

ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ವೇಣೂರು ಬಾಹುಬಲಿಯ ಮಹಾಮಜ್ಜನಕ್ಕಾಗಿ ಸಕಲ ಸಿದ್ಧತೆಗಳ ಬಗ್ಗೆ ಶಾಸಕ ಹರೀಶ್ ಪೂಂಜರವರಿಂದ ಸರಕಾರದ ಅಧಿಕಾರಿಗಳೊಂದಿಗೆ ಸಭೆ

Suddi Udaya

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರೂ. 3 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಪರ್ಯಾಯ ಶ್ರೀ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಜಿರೆಯಲ್ಲಿ ಪೌರ ಸನ್ಮಾನ:ಕೃಷ್ಣನ ಆರಾಧನೆಯಿಂದ ಸಂಕಷ್ಟಗಳು ದೂರ: ಶ್ರೀ ವೇದವರ್ಧನ ತೀರ್ಥ ಶ್ರೀಪಾದರು :ಹಿಂದೂ‌ ಸಮಾಜಕ್ಕೆ ಶಕ್ತಿಯಾಗಿ,ಬೆಳ್ತಂಗಡಿ ತಾಲೂಕಿನ ಜನತೆಗೆ ಸದಾ ಆಶೀರ್ವಾದವಿರಲಿ: ಶಾಸಕ ಹರೀಶ್ ಪೂಂಜ

Suddi Udaya

ಬಾರ್ಯ: ಮೂರುಗೋಳಿ ಶ್ರೀ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡ ರಚನೆಗೆ ಶ್ರೀ ಕ್ಷೇ.ಧ. ಗ್ರಾ ಯೋಜನೆಯಿಂದ ದೇಣಿಗೆ ಹಸ್ತಾಂತರ

Suddi Udaya
error: Content is protected !!